ಯೂಟ್ಯೂಬ್‍ನಲ್ಲಿ ಧೂಳೆಬ್ಬಿಸಿದ “ಸೈರಾ ನರಸಿಂಹ ರೆಡ್ಡಿ’: Watch
Team Udayavani, Aug 21, 2018, 3:28 PM IST
ರಾಮ್ಚರಣ್ ತೇಜ ನಿರ್ಮಾಣದ ಹಾಗೂ ಚಿರಂಜೀವಿ ಅಭಿನಯದ ಬಹು ನಿರೀಕ್ಷಿತ ಸಿನಿಮಾ “ಸೈರಾ ನರಸಿಂಹ ರೆಡ್ಡಿ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭರ್ಜರಿ ಸದ್ದು ಮಾಡುತ್ತಾ ಸಕತ್ ವೈರಲ್ ಆಗಿದೆ. ಆಗಸ್ಟ್ 22 ರಂದು (ನಾಳೆ) ಚಿರಂಜೀವಿ ಅವರ ಹುಟ್ಟುಹಬ್ಬವಿದ್ದು, ಅದಕ್ಕೆ ಉಡುಗೊರೆಯಾಗಿ ಮಗ ರಾಮ್ಚರಣ್ ಸಿನಿಮಾದ ಟೀಸರ್ನ್ನು ಬಿಡುಗಡೆ ಮಾಡಿದ್ದಾರೆ.
ಅಲ್ಲದೇ ಬಿಡುಗಡೆಯಾದಗಿನಿಂದ ಇಲ್ಲಿಯವೆರೆಗೂ 10 ಲಕ್ಷಕ್ಕೂ ಹೆಚ್ಚು ಸಿನಿಪ್ರಿಯರು ಟೀಸರ್ ವೀಕ್ಷಿಸಿ, ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಚಿತ್ರವು ಸ್ವಾತಂತ್ರ್ಯ ಹೋರಾಟಗಾರ ಉಯ್ಯಲವಾಡು ನರಸಿಂಹ ರೆಡ್ಡಿಯವರ ಜೀವನಚರಿತ್ರೆಯನ್ನು ಆಧರಿಸಿದ್ದು, ಸುರೇಂದರ್ ರೆಡ್ಡಿ ನಿರ್ದೇಶನವಿದೆ. ಅಲ್ಲದೇ ಕೊನಿದೆಲ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಚಿತ್ರ ತಯಾರಾಗುತ್ತಿದ್ದು, ಅಮಿತ್ ತ್ರಿವೇದಿ ಸಂಗಿತ ಮತ್ತು ಎ.ಶ್ರೀಕಾಂತ್ ಪ್ರಸಾದ್ ಸಂಕಲನ ಚಿತ್ರಕ್ಕಿದೆ.
ಇನ್ನು ಚಿರಂಜೀವಿ ಅವರ 151ನೇ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಿಚ್ಚ ಸುದೀಪ್, ನಯನತಾರಾ, ಜಗಪತಿ ಬಾಬು, ತಮ್ಮನ್ನಾ ಭಾಟಿಯಾ, ವಿಜಯ್ ಸೇತುಪತಿ, ಬ್ರಹ್ಮಾಜೀ ಸೇರಿದಂತೆ ಬಹು ದೊಡ್ಡತಾರಾಬಳಗವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್‌ಗೆ ಹಾಜರು; ವಿಚಾರಣೆ ಮುಂದೂಡಿಕೆ
Bengaluru: ಮಲಗಿದ ನಾಯಿ ಮೇಲೆ ಕಾರು ಹತ್ತಿಸಿದ ಚಾಲಕ!
Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ
Belagavi: ಕಾರಿನಲ್ಲಿ ಹೋಗುತ್ತಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮೇಲೆ ಗುಂಡಿನ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.