ಟಗರು ಶತಸಂಭ್ರಮ
Team Udayavani, Jun 25, 2018, 10:56 AM IST
ಅಲ್ಲಿ ಕೇಕೆ, ಶಿಳ್ಳೆ, ಚಪ್ಪಾಳೆಗಳದ್ದೇ ಕಾರುಬಾರು. ಹಾಡು, ಕುಣಿತ, ಮಾತು, ತಮಾಷೆ, ಸಂಭ್ರಮವೇ ಮನೆ ಮಾಡಿತ್ತು… ಇದು ಕಂಡು ಬಂದದ್ದು ಶಿವರಾಜಕುಮಾರ್ ಅಭಿನಯದ “ಟಗರು’ ಚಿತ್ರದ 125 ನೇ ಸಂಭ್ರಮದಲ್ಲಿ. ಸೂರಿ ನಿರ್ದೇಶನದ “ಟಗರು’ ಶತದಿನೋತ್ಸವ ಆಚರಿಸಿ ಮುನ್ನುಗ್ಗುತ್ತಿದೆ.
125 ನೇ ಸಂಭ್ರಮದ ಸವಿನೆನಪಿಗಾಗಿ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಅಭಿಮಾನಿಗಳ ಸಮ್ಮುಖದಲ್ಲಿ ಕಲರ್‌ಫುಲ್ ಕಾರ್ಯಕ್ರಮ ಆಯೋಜಿಸಿದ್ದರು. ಸಿನಿಮಾಗೆ ದುಡಿದವರು, ಕಲಾವಿದರು, ಚಿತ್ರರಂಗದ ನಟ,ನಟಿಯರನ್ನು ಆಹ್ವಾನಿಸಿ, ಚಿತ್ರದ ಫಲಕ ವಿತರಿಸುವ ಮೂಲಕ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಅಂದು ಅಭಿಮಾನಿಗಳ ಜೈಕಾರ, ಚಪ್ಪಾಳೆಗಳ ನಡುವೆ ಶಿವರಾಜಕುಮಾರ್ “ಟಗರು ಬಂತು ಟಗರು…’ ಹಾಡಿಗೆ ಹೆಜ್ಜೆ ಹಾಕಿ, ರಂಜಿಸಿದರು.
“ಟಗರು’ ಸಂಭ್ರಮಕ್ಕೆ ಅಂಬರೀಷ್, ಉಪೇಂದ್ರ, ಪುನೀತ್‌ರಾಜಕುಮಾರ್, ಶ್ರೀ ಮುರಳಿ, ವಿಜಯರಾಘವೇಂದ್ರ, ಧನಂಜಯ್, ವಸಿಷ್ಠ ಸಿಂಹ, ಮಾಸ್ತಿ, ಭಾವನಾ, ಮಾನ್ವಿತಾ, ಯೋಗರಾಜ್‌ಭಟ್, ದೊಡ್ಡಣ್ಣ, ರಾಕ್‌ಲೈನ್ ವೆಂಕಟೇಶ್, ನಿವೇದಿತಾ, ದೇವರಾಜ್, ಜಯಂತ್‌ಕಾಯ್ಕಿಣಿ, ನಾಗೇಂದ್ರಪ್ರಸಾದ್, ವಿತರಕ ಜಯಣ್ಣ ಸೇರಿದಂತೆ ಚಿತ್ರರಂಗದ ಅನೇಕರು ಹಾಜರಿದ್ದು, “ಟಗರು’ ಸಂಭ್ರಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.