ಅಂಬಿ ಕುರಿತು ಆಪ್ತರ ಮಾತು


Team Udayavani, Nov 25, 2018, 11:40 AM IST

ambi-kuritu.jpg

ಒಂದು ಬಾರಿ ಕಾರ್ಯಕ್ರಮವೊಂದರ ನಿರೂಪಣೆ ಮುಗಿಸಿ ಹೊರಬರುತ್ತಿದೆ. ಆಗ ಅಂಬರೀಶ್‌ ಅವರೇ ನನ್ನನ್ನು ಕರೆದು, ಏ ಅಪರ್ಣಾ, ನನ್ನಲ್ಲೇಕೆ ಮಾತಾಡಿಸಿಲ್ಲ, ನನ್ನನ್ನೇನು ಮರೆತೇ ಬಿಟ್ಯಾ ಎಂದು ಪ್ರಶ್ನಿಸುತ್ತಾ ಬಳಿ ಬಂದರು. ಅವರು ನನ್ನನ್ನು ಗುರುತಿಸಿ, ಮಾತನಾಡಿಸಿದ್ದು ನನಗೆ ಅಚ್ಚರಿ ಮೂಡಿಸಿತ್ತು. ಆ ದಿನವನ್ನು ಎಂದಿಗೂ ಮರೆಯಲಾಗದು.
-ಅಪರ್ಣಾ, ನಟಿ/ನಿರೂಪಕಿ

ವಿಷ್ಣುವರ್ಧನ್‌, ಅಂಬರೀಶ್‌ ಹಾಗೂ ನಾನು ಉತ್ತಮ ಸ್ನೇಹಿತರಾಗಿದ್ದೆವು. ಮೊದಲು ವಿಷ್ಣು ಅಗಲಿದರು, ಈಗ ಅಂಬರೀಶ್‌ ಕೂಡ ಇಹಲೋಕ ತ್ಯಜಿಸಿದರು. ಅತ್ಯುತ್ತಮ ಸ್ನೇಹಿತರನ್ನು ಕಳೆದುಕೊಂಡ ನನಗೆ ಆಘಾತವಾಗಿದೆ.
-ರಾಜೇಂದ್ರ ಸಿಂಗ್‌ ಬಾಬು, ನಿರ್ದೇಶಕರು

ಅಂಬರೀಶ್‌ ಅಜಾತಶತ್ರುವಾಗಿದ್ದರು. ಅವರನ್ನು ಕಳೆದುಕೊಂಡು ಚಿತ್ರರಂಗ ಅನಾಥವಾಗಿದೆ. ಅವರ ಜೊತೆಯಲ್ಲಿ 10-12 ಚಿತ್ರಗಳಲ್ಲಿ ನಟಿಸಿದ್ದೆ. ಅವರ ಜೊತೆ ಸ್ನೇಹ ಮೀರಿದ ಸಂಬಂಧವಿತ್ತು. ಅವರೊಬ್ಬ ಅದ್ಭುತ ವ್ಯಕ್ತಿ.
-ಅವಿನಾಶ್‌, ನಟ

ಅಂಬರೀಶ್‌ ಹೃದಯಶ್ರೀಮಂತಿಕೆಯುಳ್ಳ ವ್ಯಕ್ತಿ ಹಾಗೂ ಕಲಿಯುಗ ಕರ್ಣನಂತಿದ್ದರು. ಅವರು ಚುನಾವಣೆಗೆ ನಿಲ್ಲುವವರೆಗೆ ಮಾತ್ರ ಪಕ್ಷ. ಬಳಿಕ ಎಲ್ಲ ಜನರೂ ಅವರನ್ನು ಪ್ರೀತಿಸುತ್ತಿದ್ದರು. ವಿಷ್ಣುವರ್ಧನ್‌ ನಿಧನದಿಂದ ಮಾನಸಿಕವಾಗಿ ಕುಗ್ಗಿದ್ದರು.
-ತೇಜಸ್ವಿನಿ, ಬಿಜೆಪಿ ಎಂಎಲ್‌ಸಿ

ಅಂಬರೀಶ್‌ ನಿಧನದಿಂದ ಕನ್ನಡ ಚಿತ್ರರಂಗದ ಶಕ್ತಿ ಇಲ್ಲದಂತಾಗಿದೆ. ಅವರು ಎಲ್ಲರ ಪ್ರೀತಿ, ಸ್ನೇಹ ಸಂಪಾದಿಸಿದ್ದರು. ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದೇ ಅವರು.
-ರಾಮ್‌ಕುಮಾರ್‌, ನಟ

ಅಮರ…. ನೀವೆಂದೆಂದೂ ನಮಗೆ ಅಮರ….. ನಿಮ್ಮೊಂದಿಗಿನ ಒಡನಾಟ ಅಮರ… ನಿಮ್ಮೊಂದಿಗೆ ಕಳೆದ ದಿನಗಳು ಅಮರ….ನೆನಪುಗಳು ಅಮರ…ಚಿತ್ರರಂಗಕ್ಕೆ ನೀವು, ನಿಮ್ಮ ನೇರ ನಡೆ ನುಡಿಗಳು ಎಂದೆಂದೂ ಅಮರ..
-ಉಪೇಂದ್ರ, ನಟ

ಇದೊಂದು ದೊಡ್ಡ ಆಘಾತ, ಪದಗಳಲ್ಲಿ ಹೇಳಲಾಗುತ್ತಿಲ್ಲ. ನಾನು ಕೇಳಿದ ಸುದ್ದಿ ಸುಳ್ಳಾಗಿರಲಿ. ಅದ್ಭುತ ಗೆಳೆಯ ಅಂಬರೀಶ್‌ ನಮ್ಮನ್ನು ಅಗಲಿದ್ದಾರೆ ಎಂದು ಕೇಳಿ ಹೃದಯ ಒಡೆದುಹೋದಂತಾಗಿದೆ. ಸುಮ ಮತ್ತು ಅಭಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ. 
-ಖುಷ್ಬೂ ಸುಂದರ್‌, ನಟಿ

ಅಂಬರೀಶ್‌ನಂಥ ಅದ್ಭುತ ಮನುಷ್ಯ, ಅತ್ಯತ್ತುಮ ಗೆಳೆಯನನ್ನು ಕಳೆದುಕೊಂಡಿದ್ದು ಅತ್ಯಂತ ದುಃಖದ ವಿಷಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
-ರಾಧಿಕಾ ಶರತ್‌ಕುಮಾರ್‌, ನಟಿ

ಪ್ರಖ್ಯಾತ ನಟ, ಮಾಜಿ ಸಂಸದ ಅಂಬರೀಶ್‌ ನಿಧನದ ಸುದ್ದಿ ಕೇಳಿ ನೋವಾಗಿದೆ. ಅವರ ಕುಟುಂಬ, ಕೋಟ್ಯಂತರ ಅಭಿಮಾನಿಗಳು ಮುಖ್ಯವಾಗಿ ಮಂಡ್ಯದ ಜನತೆಗೆ ನನ್ನ ಸಾಂತ್ವನ.
-ರಣ್‌ದೀಪ್‌ ಸುರ್ಜೆವಾಲ, ಕಾಂಗ್ರೆಸ್‌ ವಕ್ತಾರ

ಪುಟ್ಟಣ್ಣ ಕಣಗಾಲ್‌ ನಮಗೆಲ್ಲ ಪರಿಚಯಿಸಿದ್ದ “ಜಲೀಲ’ ಇನ್ನಿಲ್ಲ. ಅಂಬರೀಶ್‌(ಅಮರನಾಥ್‌)ರವರ ಆತ್ಮಕ್ಕೆ ಶಾಂತಿ ದೊರಕಲಿ.
-ಸುರೇಶ್‌ಕುಮಾರ್‌, ಬಿಜೆಪಿ ನಾಯಕ

ಅಂಬಿ ಅಪ್ಪಾಜಿಯನ್ನು ಕಳೆದುಕೊಂಡಿರುವುದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಸ್ವೀಡನ್‌ನಲ್ಲಿ ನಡೆಯುತ್ತಿದ್ದ ಯಜಮಾನ ಶೂಟಿಂಗ್‌ ರದ್ದುಗೊಳಿಸಿ, ಇಡೀ ತಂಡ ಆದಷ್ಟು ಬೇಗ ಬೆಂಗಳೂರಿಗೆ ವಾಪಸಾಗುತ್ತಿದ್ದೇವೆ.
-ದರ್ಶನ್‌ ತೂಗುದೀಪ, ನಟ

ಕನ್ನಡ ಚಿತ್ರರಂಗದ ಹಿರಿಯ ನಟ, ಮಾಜಿ ಸಚಿವ, ನನ್ನ ಗೆಳೆಯ ಅಂಬರೀಶ್‌ ಅವರ ನಿಧನದ ಸುದ್ದಿ ತಿಳಿದು ತುಂಬಾ ನೋವಾಗಿದೆ. ಇವರ ಅಗಲಿಕೆಯಿಂದ ಕರ್ನಾಟಕವು ಸರಳ, ಸಜ್ಜನ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬಕ್ಕೆ, ಅಪಾರ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ.
-ಕೆ.ಜೆ.ಜಾರ್ಜ್‌, ಸಚಿವ

ಚಿತ್ರರಂಗವನ್ನು ಅಂಬರೀಶ್‌ ಕಟ್ಟುನಿಟ್ಟಿನಲ್ಲಿ ಇಟ್ಟುಕೊಂಡಿದ್ದರು. ಮನೆಯ ಯಜಮಾನ ಇನ್ನಿಲ್ಲ. ಅಂಬರೀಶ್‌ ಪ್ರತಿಯೊಬ್ಬರ ಮನಸ್ಸಿನಲ್ಲೂ ನೆಲೆಸಿದ್ದರು. ಅವರು ಬೈದರೆ ಯಾರೂ ಬೇಜಾರಾಗುತ್ತಿರಲಿಲ್ಲ.
-ಸುಂದರ್‌ರಾಜ್‌, ನಟ

ಅಂಬಿ ಅವರೊಂದಿಗೆ ವೈಯಕ್ತಿಕ ಗೆಳೆತನ ಇತ್ತು. ನಾವು ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ. ಅವರು ಎಲ್ಲರೊಂದಿಗೆ ಅನ್ಯೋನ್ಯವಾಗಿ ಬೆರೆಯುತ್ತಿದ್ದರು. ಎಷ್ಟೇ ತೊಂದರೆ ಇದ್ದರೂ ಎಲ್ಲರೊಂದಿಗೆ ಅನ್ಯೋನ್ಯವಾಗಿ ಬೆರೆಯುತ್ತಿದ್ದರು.  ಸಾವಿನ ಕುರಿತು ಏನೂ ಹೇಳಲು ಆಗುತ್ತಿಲ್ಲ. ಉತ್ತಮ ವ್ಯಕ್ತಿಯನ್ನು ಕಳೆದುಕೊಂಡಿರುವುದು ವಿಷಾದಕರ.
-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಮುಖಂಡ

ಕನ್ನಡ ಚಿತ್ರ ರಂಗದಲ್ಲಿ ಎಷ್ಟೋ ಮಂದಿಗೆ ಸಹಾಯ ಮಾಡಿದ್ದಾರೆ. ಯಾವಾಗಲೂ ನೇರ ನುಡಿಯಿಂದಲೇ ಇರುತ್ತಿದ್ದರು. ಯಾರಿಗೂ ಕ್ಯಾರೆ ಎನ್ನುತ್ತಿರಲಿಲ್ಲ. ಈ ಸಾವಿನಿಂದ ತುಂಬಾ ಬೇಜಾರಾಗಿದೆ. ಕನ್ನಡ ಚಿತ್ರರಂಗದಲ್ಲಿ ಇದ್ದಿದ್ದೇ ಒಂದು ಧ್ವನಿ. ಆ ಧ್ವನಿ ಇಲ್ಲದಾಯಿತು.
-ಜಗ್ಗೇಶ್‌, ಹಿರಿಯ ನಟ

ಗಂಭೀರ ಪರಿಸ್ಥಿತಿ ಇದೆ. ಅಂಬರೀಶ್‌ರ ಕುಟುಂಬದೊಂದಿಗೆ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸುತ್ತಿದ್ದಾರೆ. ಅವರ ಸಾವಿನಿಂದ ಇಡೀ ರಾಜ್ಯಕ್ಕೆ ನಷ್ಟವಾಗಿದೆ.
-ಡಿ.ಕೆ.ಶಿವಕುಮಾರ್‌, ಸಚಿವ

ಅಂಬರೀಷ್‌ ಅಂಕಲ್‌ ನಿಧನದ ಸುದ್ದಿ ಕೇಳಿ ಬಹಳ ದುಃಖವಾಯಿತು. ಅವರ ಆತ್ಮಕ್ಕೆ ಭಗವಂತ ಚಿರಶಾಂತಿ ನೀಡಲಿ. ಅವರು ಯಾವತ್ತೂ ನಮ್ಮ ಮನಸ್ಸಲ್ಲಿ ಉಳಿಯುತ್ತಾರೆ. ಅವರ ಕುಟುಂಬಕ್ಕೆ ಸಾಂತ್ವನ ಹೇಳಬಯಸುತ್ತೇನೆ.
-ದಿವ್ಯಸ್ಪಂದನ/ರಮ್ಯಾ

ಮತ್ತೂಂದು ಆಘಾತಕಾರಿ ಸುದ್ದಿ. ಜಂಟಲ್‌ಮಾನ್‌ ನಟ, ಎಲ್ಲರ ಪ್ರೀತಿಪಾತ್ರರಾಗಿದ್ದ, ಕೇಂದ್ರದ ಮಾಜಿ ಸಚಿವ ಅಂಬರೀಷ್‌ ಅವರು ಇನ್ನಿಲ್ಲ. ತಮ್ಮ ಔದಾರ್ಯತೆಯಿಂದ ಹಲವರ ಬದುಕು ಬೆಳಗಿದ್ದ ನಾಯಕ.
-ಸದಾನಂದ ಗೌಡ, ಕೇಂದ್ರ ಸಚಿವ

ನಮ್ಮ ಪ್ರೀತಿಯ ನಾಯಕ, ರೆಬೆಲ್‌ ಸ್ಟಾರ್‌ ಅಂಬರೀಷ್‌ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಕರ್ನಾಟಕದ ಮೇರು ನಟ ಹಾಗೂ ಎಲ್ಲರ ಪ್ರೀತಿಪಾತ್ರ ವ್ಯಕ್ತಿ.
-ದಿನೇಶ್‌ ಗುಂಡೂರಾವ್‌

ಕನ್ನಡ ಚಿತ್ರ ರಂಗದ ಒಂದು ಯುಗಾಂತ್ಯ. ಅಂಬರೀಷ್‌ರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಅವರ ಕುಟುಂಬಕ್ಕೆ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ.
-ಶೋಭಾ ಕರಂದ್ಲಾಜೆ, ಬಿಜೆಪಿ ನಾಯಕಿ

ಹಿರಿಯ ನಟ, ರಾಜಕಾರಣಿ ಅಂಬರೀಷ್‌ರನ್ನು ಕಳೆದುಕೊಂಡ ಕರ್ನಾಟಕ ಬಡವಾಗಿದೆ. ಒಬ್ಬ ಒಳ್ಳೆಯ ಸ್ನೇಹಿತರಾಗಿದ್ದ ಅವರ ಅಗಲಿಕೆ ವೈಯಕ್ತಿಕವಾಗಿ ತುಂಬಾ ನೋವನ್ನುಂಟುಮಾಡಿದೆ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ.
-ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ

ಅಪಘಾತದ ನೋವನ್ನು ಜೀರ್ಣಿಸಿಕೊಳ್ಳುತ್ತಿರುವಾಗಲೇ ಮಂಡ್ಯದ ಗಂಡೆಂದೇ ಜನಪ್ರಿಯರಾಗಿದ್ದ ಹಿರಿಯ ನಟ ಹಾಗೂ ಮಾಜಿ ಸಚಿವ ಅಂಬರೀಶ್‌ ಅವರ ನಿಧನ ಆಘಾತವನ್ನುಂಟು ಮಾಡಿದೆ. ರಾಜ್ಯ ಹಾಗೂ ಮಂಡ್ಯದ ಪಾಲಿಗೆ ಇದು ಕರಾಳ ದಿನ. ಅಂಬರೀಶ್‌ ಅವರ ಕುಟುಂಬಕ್ಕೆ ಭಗವಂತ ನೋವನ್ನು ಸಹಿಸುವ ಶಕ್ತಿ ನೀಡಲಿ. ಚಿತ್ರರಂಗ ಹಾಗೂ ರಾಜ್ಯ ಅಮೂಲ್ಯ ರತ್ನವನ್ನು ಕಳೆದುಕೊಂಡಿದೆ.
-ಡಾ. ಜಿ. ಪರಮೇಶ್ವರ್‌, ಉಪಮುಖ್ಯಮಂತ್ರಿ

ಹಿರಿಯ ನಟ, ಮಾಜಿ ಸಚಿವ ಮತ್ತು ನನ್ನ ದೀರ್ಘ‌ಕಾಲದ ಗೆಳೆಯ ಅಂಬರೀಶ್‌ ಅವರ ಸಾವು ದಿಗ್ಭ್ರಮೆ ಉಂಟುಮಾಡಿದೆ. ತೀರಾ ಅನಿರೀಕ್ಷಿತ ಸಾವು. ಚಿತ್ರರಂಗ ಮತ್ತು ರಾಜಕೀಯ ರಂಗಗಳೆರಡರಲ್ಲೂ ಜನಮನ ಗೆದ್ದ ನಾಯಕ ಅಂಬರೀಶ್‌. ನಿಜವಾದ ಅರ್ಥದಲ್ಲಿ ಅಜಾತಶತ್ರು. ಅವರ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿ.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ

15 ದಿನಗಳ ಹಿಂದಷ್ಟೇ ಅಂಬರೀಶ್‌ರನ್ನು ಭೇಟಿಯಾಗಿದ್ದೆ. ಇದೀಗ ಅವರ ನಿಧನದ ಸುದ್ದಿ ಕೇಳಿ ಬಹಳ ನೋವಾಗಿದೆ. ಅವರು ಸ್ನೇಹ ಜೀವಿ. ವಿಷ್ಣು ಮತ್ತು ಅಂಬಿಯವರದ್ದು ಅಪರೂಪದ ಸ್ನೇಹ.
-ಭಾರತಿ ವಿಷ್ಣುವರ್ಧನ್‌, ನಟಿ

ಟಾಪ್ ನ್ಯೂಸ್

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Census: ಇರಾಕ್‌ನಲ್ಲಿ 37 ವರ್ಷಗಳ ಬಳಿಕ ಗಣತಿ… 4.54 ಕೋಟಿ ಜನಸಂಖ್ಯೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Dharmasthala: ಇಂದಿನಿಂದ ಲಕ್ಷದೀಪೋತ್ಸವ… ರಾಜ್ಯಮಟ್ಟದ ವಸ್ತು ಪ್ರದರ್ಶನಕ್ಕೆ ಚಾಲನೆ

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?

Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

kiran raj’s Megha movie

‌Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್‌ ರಾಜ್

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್

Vijay Raghavendra is in Rudrabhishekam Movie

Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್‌ ರಾಘವೇಂದ್ರ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

3-vitla

Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

RBI ಗವರ್ನರ್‌ ಶಕ್ತಿಕಾಂತ್‌ ದಾಸ್‌‌ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್‌ ಚಾರ್ಜ್

1-mundaragi

Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.