ತಾರಕ ದರ್ಶನ
Team Udayavani, Sep 26, 2017, 9:00 PM IST
ದರ್ಶನ್ ಅಭಿನಯದ “ತಾರಕ್’ ಚಿತ್ರ ನಾಡಿದ್ದು ಆಯುಧ ಪೂಜೆಯಂದು ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ದರ್ಶನ್ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಚಿತ್ರದ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ನಿರೀಕ್ಷೆ ಇದ್ದರೂ, ಚಿತ್ರತಂಡ ಮಾತ್ರ ಹೆಚ್ಚು ಸದ್ದು ಮಾಡುತ್ತಿಲ್ಲ. ದರ್ಶನ್ ಅವರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, “ತಾರಕ್’ಗೆ ಪ್ರಚಾರ ಕಡಿಮೆಯೇ. ಯಾಕೆ ಎಂದರೆ, ಚಿತ್ರತಂಡದವರೇ ಹೆಚ್ಚು ಹೈಪ್ ಮಾಡುತ್ತಿಲ್ಲ ಎಂಬ ಉತ್ತರ ದರ್ಶನ್‌ರಿಂದ ಬರುತ್ತದೆ.
“ಈ ಬಾರಿ ಯಾವುದೇ ಹೈಪ್ ಮಾಡ್ತಿಲ್ಲ. ಹೈಪ್ ಮಾಡಿದರೆ ತಪ್ಪು. ದೊಡ್ಡ ಸದ್ದು ಮಾಡಿದರೆ, ಜನ ಚಿತ್ರದ ಬಗ್ಗೆ ಏನೇನೋ ಕಲ್ಪನೆ ಇಟ್ಟುಕೊಂಡು ಬಂದಿರುತ್ತಾರೆ. ತಲೆಯಲ್ಲಿ ಕಥೆಯ ಬಗ್ಗೆ ಒಂದು ಚೌಕಟ್ಟು ಹಾಕಿಕೊಂಡು ಬಂದಿರುತ್ತಾರೆ. ಆ ಲೆವೆಲ್‌ಗೆ ಚಿತ್ರ ಇರದಿದ್ದರೆ ಬೇಸರ ಆಗೋದು ಖಂಡಿತಾ. ಹೈಪ್ ಇಲ್ಲದಿದ್ದರೆ ಸುಮ್ಮನೆ ಬಂದು ಚಿತ್ರ ನೋಡುತ್ತಾರೆ. ಅದೇ ಕಾರಣಕ್ಕೆ ಈ ಬಾರಿ ಹೈಪ್ ಮಾಡಿಲ್ಲ’ ಎನ್ನುತ್ತಾರೆ ದರ್ಶನ್. ಹೈಪ್ ಇಲ್ಲದಿದ್ದರೂ ಅಭಿಮಾನಿಗಳು ಬಂದು ಚಿತ್ರ ನೋಡಿ, ಇಷ್ಟಪಡುತ್ತಾರೆ ಎಂಬ ನಂಬಿಕೆ ಅವರದ್ದು.
ಈ ಚಿತ್ರ ಶುರುವಾಗುವುದಕ್ಕೆ ಮುಂಚೆಯೇ ದರ್ಶನ್, ನಿರ್ದೇಶಕ ಪ್ರಕಾಶ್‌ಗೆ ಒಂದು ಮಾತ್ರ ಸ್ಪಷ್ಟಪಡಿಸಿಬಿಟ್ಟಿದ್ದರಂತೆ. “ನಾವಿಬ್ಬರೂ ಸಿನಿಮಾ ಮಾಡುತ್ತಿದ್ದೀವಿ ಎಂದರೆ ನಾನು ಅವರ ಶಕ್ತಿಯನ್ನೂ ನೋಡಬೇಕು. ಅವರು ಯಾವತ್ತೂ ಫ್ಯಾಮಿಲಿ ಸಿನಿಮಾಗಳಿಗೆ ಹೆಸರಾದವರು. ನನಗಾಗಿ ಬೇರೆ ಏನೋ ಮಾಡಬಾರದು. ಅದೇ ಕಾರಣಕ್ಕೆ ನೀವು ನನ್ನ ಶೂಗೆ ಕಾಲಿಡಬೇಡಿ. ನಿಮ್ಮ ಶೈಲಿಯ ಸಿನಿಮಾ ಮಾಡಿ ಎಂದೆ. ಹಾಗಂತ ಫೈಟ್ ಇಲ್ಲ ಅಂತಲ್ಲ. ಮೂರು ಫೈಟ್ ಇದೆ. ಸೆಂಟಿಮೆಂಟ್‌ಗೆ ಹೆಚ್ಚು ಒತ್ತು ಕೊಡಲಾಗಿದೆ’ ಎನ್ನುತ್ತಾರೆ ಅವರು.
ಯಾರು ಬಂದರೂ ಕೊಡಲ್ಲ: “ತಾರಕ್’ ಜೊತೆಗೆ ತೆಲುಗಿನ “ಸ್ಪೈಡರ್’ ಚಿತ್ರ ಬಿಡುಗಡೆಯಾಗುತ್ತಿದೆ. ಅಷ್ಟೇ ಅಲ್ಲ, ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲೇ ಬಿಡುಗಡೆಯಾಗಲಿದೆ. ಇದರಿಂದ “ತಾರಕ್’ಗೆ ಚಿತ್ರಮಂದಿರಗಳ ಸಮಸ್ಯೆ ಏನಾದರೂ ಆಗುತ್ತದಾ ಎಂದರೆ, ಖಂಡಿತಾ ಇಲ್ಲ ಎನ್ನುತ್ತಾರೆ ಅವರು. “ಯಾವ ಸಿನಿಮಾ ಬಂದರೂ, ನಮ್ಮ ಚಿತ್ರಗಳು ಎಷ್ಟು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬೇಕೋ, ಅಲ್ಲಿ ಆಗೇ ಆಗುತ್ತದೆ.
ಬರೀ ಇಲ್ಲಷ್ಟೇ ಅಲ್ಲ, ಬೇರೆ ರಾಜ್ಯಗಳಲ್ಲೂ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡುವುದಕ್ಕೆ ಸಹಕಾರ ಕೊಡಬೇಕು. ನಾನು ಎಷ್ಟೋ ಚಾನಲ್‌ಗಳಲ್ಲಿ ನೋಡುತ್ತಿರುತ್ತೀನಿ. ಬೇರೆ ಭಾಷೆಯಿಂದ ಬಂದವರು, ಕನ್ನಡದಲ್ಲಿ ನಟಿಸುವುದಕ್ಕೆ ಸಿದ್ಧ, ಇಲ್ಲಿನ ಜನರು ಸಹಕಾರ ಕೊಡುತ್ತಾರೆ ಅಂತ ಹೇಳುತ್ತಾರೆ. ಅದೇ ರೀತಿ ಅವರು ಓಪನ್ ಆಗಿ, ನಮ್ಮ ಚಿತ್ರಗಳನ್ನೂ ಅವರ ರಾಜ್ಯಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಸಹಕಾರ ಕೊಡಬೇಕು’ ಎನ್ನುತ್ತಾರೆ ದರ್ಶನ್.
ಗೆದ್ದರೆ ಎಲ್ಲರೂ ಅಪ್ಪಂದಿರು: ಇತ್ತೀಚಿನ ದಿನಗಳಲ್ಲಿ ದರ್ಶನ್ ಅವರ ಚಿತ್ರಗಳೆಂದರೆ ನೂರಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ಎನ್ನುವಂತಿತ್ತು. ಆದರೆ, “ತಾರಕ್’ಗೆ ದರ್ಶನ್ ಅವರು ಕೊಟ್ಟಿದ್ದು 65 ದಿನ ಮಾತ್ರ. ಅಷ್ಟರಲ್ಲೇ ನಿರ್ದೇಶಕ ಪ್ರಕಾಶ್ ಈ ಚಿತ್ರವನ್ನು ಮುಗಿಸಿದ್ದಾರೆ. “ಕೆಲವರು ಸರಿಯಾಗಿ ಪ್ಲಾನ್ ಮಾಡುವುದಿಲ್ಲ. ಅದೇನು ದೊಡ್ಡಸ್ತಿಕೆಯೋ, ದುರಹಂಕಾರವೋ ಗೊತ್ತಿಲ್ಲ. 120-130 ದಿನಗಳ ಚಿತ್ರೀಕರಣ ಎನ್ನುತ್ತಾರೆ.
ನನ್ನ ಚಿತ್ರಗಳ ಒಂದು ದಿನದ ಚಿತ್ರೀಕರಣಕ್ಕೆ ಆರು ಲಕ್ಷ ಬೇಕು. 150 ದಿನ ಚಿತ್ರೀಕರಣ ಮಾಡಿದರೆ, ಒಂಬತ್ತು ಕೋಟಿ. ಬರೀ ಚಿತ್ರೀಕರಣಕ್ಕೇ ಅಷ್ಟು ಖರ್ಚಾದರೆ, ಒಂದು ಚಿತ್ರಕ್ಕೆ ಎಷ್ಟಾಗಬಹುದು. ಚಿತ್ರ ಗೆದ್ದರೆ ಎಲ್ಲಾ ಅಪ್ಪಂದಿರಾಗ್ತಾರೆ. ಸೋತರೆ ಹೀರೋ ತಲೆ ಮೇಲೆ ಬರುತ್ತೆ. ಹಾಗಾಗಿ 65 ದಿನ ಅಂತ ಫಿಕ್ಸ್ ಮಾಡಿದೆ. ಆಗ ಸರಿಯಾಗಿ ಪ್ಲಾನಿಂಗ್ ಮಾಡಿಕೊಳ್ಳುತ್ತಾರೆ’ ಎಂದು ಹೇಳುತ್ತಾರೆ ದರ್ಶನ್.
ಊಟ ಕೊಟ್ನಾ, ಬಟ್ಟೆ ಕೊಟ್ನಾ: ಇನ್ನು ಇತ್ತೀಚೆಗೆ “ತಾರಕ್’ ಚಿತ್ರದ ಟ್ರೇಲರ್ ಬಿಡುಗಡೆ ತಡವಾದಾಗ ಅವರ ಅಭಿಮಾನಿಗಳು ಸಾಕಷ್ಟು ಬೇಸರಗೊಂಡಿದ್ದರು. “ಅಭಿಮಾನಿಗಳು ಅವರು ತಮ್ಮೆಲ್ಲಾ ಕೆಲಸ ಬಿಟ್ಟು, ಟ್ರೇಲರ್‌ಗಾಗಿ ಕಾದಿರುತ್ತಾರೆ. ಚಿತ್ರದ ಬಗ್ಗೆ ತುಂಬಾ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಹೇಳಿ ಮಾಡದಿದ್ದರಿಂದ ಬೇಸರವಾಗಿದೆ. ತಡವಾಗಿದ್ದಕ್ಕೆ ನನಗೆ ಒಂದು ಮೆಸೇಜ್ ಹಾಕೋದಕ್ಕೆ ಹೇಳಿದರು. ಹೊಡೀತಾರೆ, ನಾ ಹಾಕಲ್ಲ ಅಂತ ಹೇಳಿದೆ. ಕೊನೆಗೆ ತಡವಾಗಿದ್ದಕ್ಕೆ ಒಂದು ಮೆಸೇಜ್ ಹಾಕಿ, ನಂತರ ಟ್ರೇಲರ್ ಹಾಕಿದರು.
ಪಾಪ ಅಭಿಮಾನಿಗಳು ತಮ್ಮ ದುಡ್ಡು ಖರ್ಚು ಮಾಡಿಕೊಂಡು, ಚಿತ್ರವನ್ನ ಪ್ರಮೋಟ್ ಮಾಡುತ್ತಾರೆ. ಎಷ್ಟೋ ಜನ ಎಲೆ ಮರೆ ಕಾಯಿ ತರಹ ಕೆಲಸ ಮಾಡುತ್ತಾರೆ. ಇನ್ನು ಕೆಲವರು ಅತಿರೇಕದ ಅಭಿಮಾನ ತೋರಿಸುತ್ತಾರೆ. ಎಷ್ಟೋ ಜನ ಮೈ-ಕೈ ಮೇಲೆ ನನ್ನ ಹೆಸರು ಹೆಚ್ಚೆ ಹಾಕಿಸಿಕೊಂಡಿರುತ್ತಾರೆ. ನಾನು ಅವರಿಗೆಲ್ಲಾ ಏನು ಕೊಟ್ಟಿದ್ದೀನಿ. ಊಟ ಕೊಟ್ನಾ? ಬಟ್ಟೆ ಕೊಟ್ನಾ? ಏನೂ ಇಲ್ಲ. ನನ್ನ ಹೆಸರು ಹಾಕಿಸಿಕೊಳ್ಳೋಕಿಂತ ನಿಮ್ಮ ತಂದೆ-ತಾಯಿ ಹೆಸರು ಹೆಚ್ಚೆ ಹಾಕಿಸಿಕೊಳ್ಳಿ ಅಂತ ಹೇಳ್ತಾನೆ ಇರ್ತೀನಿ. ಈ ಜೀವನದಲ್ಲಿ ಅಭಿಮಾನಿಗಳ ಋಣ ತೀರಿಸೋಕೆ ಆಗಲ್ಲ’ ಎನ್ನುತ್ತಾರೆ ದರ್ಶನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.