ಶಿಷ್ಯರ ಆಟ ಬಲ್ಲವರ್ಯಾರು… ಗುರು ಶಿಷ್ಯರ ಸವಾಲು ಮತ್ತು ತರುಣ್ ಮಾತು
Team Udayavani, Sep 16, 2022, 2:24 PM IST
ಇದು ನಿಜಕ್ಕೂ ಸವಾಲಿನ ಕೆಲಸವಾಗಿತ್ತು… -ಹೀಗೆ ಹೇಳಿ ನಕ್ಕರು ತರುಣ್ ಸುಧೀರ್. ಅವರು ಹೇಳಿದ್ದು “ಗುರು ಶಿಷ್ಯರು’ ಚಿತ್ರದ ಬಗ್ಗೆ. ಶರಣ್ ನಾಯಕರಾಗಿರುವ “ಗುರು- ಶಿಷ್ಯರು’ ಚಿತ್ರ ಸೆ.23ರಂದು ತೆರೆಕಾಣುತ್ತಿದೆ. ಶರಣ್ ಹಾಗೂ ತರುಣ್ ಸುಧೀರ್ ಸೇರಿಕೊಂಡು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ತರುಣ್ ಈ ಚಿತ್ರದ ಕ್ರಿಯೇಟಿವ್ ಹೆಡ್ ಕೂಡಾ. ಮುಖ್ಯವಾಗಿ ಈ ಚಿತ್ರ 95ರ ಕಾಲಘಟ್ಟದಲ್ಲಿ ನಡೆದಿದ್ದು, ಖೋ ಖೋ ಕ್ರೀಡೆಯನ್ನು ಮೂಲವಾಗಿಟ್ಟುಕೊಂಡು ಕಟ್ಟಿಕೊಟ್ಟಿದ್ದಾರೆ. ಚಿತ್ರದಲ್ಲಿ 12 ಮಂದಿ ಮಕ್ಕಳು ನಟಿಸಿದ್ದು, ಅವರನ್ನು ಸಿನಿಮಾಕ್ಕಾಗಿಯೇ ಸಿದ್ಧಪಡಿಸಿದ್ದಾರೆ. ಇದು ಇಡೀ ಚಿತ್ರತಂಡಕ್ಕೆ ದೊಡ್ಡ ಸವಾಲಾಗಿತ್ತಂತೆ.
ಈ ಬಗ್ಗೆ ಮಾತನಾಡುವ ತರುಣ್, “ಸಿನಿಮಾದ ಕಥೆ ಲಾಕ್ ಆದ ನಂತರ ನಮಗಿದ್ದ ದೊಡ್ಡ ಸವಾಲೆಂದರೆ 95ರ ಪರಿಸರ ಕಟ್ಟಿಕೊಡೋದು. ರೆಟ್ರೋ ಸಿನಿಮಾ ಮಾಡುವಾಗ ಅದಕ್ಕೆ ಹೆಚ್ಚಿನ ತಯಾರಿ ಬೇಕಾಗುತ್ತದೆ. ನಮಗೆ ಪಕ್ಕಾ ಹಳ್ಳಿ ವಾತಾವರಣ ಬೇಕಿತ್ತು. ಮಣ್ಣಿನ ರಸ್ತೆ, ಗಿಡ- ಮರ, ಹೊಲ-ಗದ್ದೆ, ಹಸು, ಎತ್ತಿನ ಗಾಡಿ… ಇಂತಹ ವಾತಾವರಣ ಬೇಕಾಗಿತ್ತು. ಆದರೆ, ಈಗ ಎಲ್ಲಿ ನೋಡಿದರೂ ಮೊಬೈಲ್ ಟವರ್, ಕಾಂಕ್ರೀಟ್ ರಸ್ತೆ ಕಾಣಿ ಸುತ್ತಿತ್ತು. ಮುಖ್ಯವಾಗಿ ನಮಗೆ ಎತ್ತಿನ ಗಾಡಿ ಬೇಕಾಗಿತ್ತು. ಅದನ್ನು ತಗೊಂಡು ಶೂಟಿಂಗ್ ಸ್ಪಾಟ್‌ಗೆ ಸಾಗಿಸೋದು ಒಂದು ಸವಾಲಾದರೆ, ಅದರ ಖರ್ಚು ಮತ್ತೂಂದು. ಈಗ ಅವೆಲ್ಲವನ್ನು ದಾಟಿ ಸಿನಿಮಾ ಮಾಡಿದ್ದೇವೆ. ಚಿತ್ರದಲ್ಲಿ ಸೆಲೆಬ್ರೆಟಿಗಳ ಮಕ್ಕಳು ನಟಿಸಿದ್ದಾರೆ. ಹಾಗಂತ ಯಾರನ್ನೂ ನೇರವಾಗಿ ಆಯ್ಕೆ ಮಾಡಿಲ್ಲ. ಎಲ್ಲರನ್ನು ಆಡಿಷನ್ ಮೂಲಕವೇ ಫೈನಲ್ ಮಾಡಿದ್ದು. ಚಿತ್ರದಲ್ಲಿ ಶರಣ್ ಗೆಟಪ್ ಬಗ್ಗೆಯೂ ಸಾಕಷ್ಟು ಚರ್ಚೆ ಮಾಡಿಯೇ ಅಂತಿಮಗೊಳಿಸಿದ್ದು. ಈಗ ಎಲ್ಲದಕ್ಕೂ ಉತ್ತಮ ಫಲ ಸಿಗುತ್ತಿದೆ. ಟ್ರೇಲರ್ ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ’ ಎಂದು ಖುಷಿಯಿಂದ ಹೇಳುತ್ತಾರೆ ತರುಣ್.
ಈ ಚಿತ್ರದಲ್ಲಿ ಖೋಖೋ ತರಬೇತುದಾರನಾಗಿ ಕಾಣಿಸಿಕೊಂಡಿರುವ ಶರಣ್ ಜೊತೆ ಹತ್ತಾರು ಹುಡುಗರ ಬಳಗವಿದೆ. ಒಬ್ಬೊಬ್ಬರದ್ದೂ ಒಂದೊಂದು ಮ್ಯಾನರಿಸಂ. ಏನೂ ಗೊತ್ತಿರದ ಅವರಿಗೆ ಖೋಖೋ ಕಲಿಸುವ ಚಾಲೆಂಜ್ ಶರಣ್ ಅವರದ್ದು… ಈ ಹಿನ್ನೆಲೆಯಲ್ಲಿ ಚಿತ್ರ ಸಾಗುತ್ತದೆ. ಜಡೇಶ್ ನಿರ್ದೇಶನವಿರುವ ಈ ಚಿತ್ರದಲ್ಲಿ ಶರಣ್ ಜೋಡಿಯಾಗಿ ನಿಶ್ವಿಕಾ ನಾಯ್ಡು ಕಾಣಿಸಿಕೊಂಡಿದ್ದು, ದತ್ತಣ್ಣ ಪ್ರಮುಖ ಪಾತ್ರದಲ್ಲಿದ್ದಾರೆ.
ರವಿಪ್ರಕಾಶ್ ರೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Kalaburagi; ಜಾಹೀರಾತು, ಫಲಕದಲ್ಲಿ ಹೆಸರಿಲ್ಲ: ಶಾಸಕ ಅಲ್ಲಮಪ್ರಭು ಬೆಂಬಲಿಗರಿಂದ ಪ್ರತಿಭಟನೆ
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
Kalaburagi: ವರದಿ ನಂತರ ತೊಗರಿ ಹಾನಿಗೆ ಪರಿಹಾರ ನಿರ್ಧಾರ: ಸಿಎಂ ಸಿದ್ದರಾಮಯ್ಯ
ಕೊಡುವುದರಿಂದ ಕೊರತೆಯಾಗದು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.