ನಟನೆಗೆ ಇಷ್ಟು ಬೇಗ ಟಾಟಾ ಹೇಳಲ್ಲ


Team Udayavani, Nov 7, 2017, 10:35 AM IST

Priyamani-.jpg

ಮದುವೆ ಬಳಿಕ ನಟಿ ಪ್ರಿಯಾಮಣಿ ಮಾತಿಗೆ ಸಿಕ್ಕಿರಲಿಲ್ಲ. ಅವರು ಸಿನಿಮಾ ಮಾಡಲ್ಲ ಅಂತ ಎಲ್ಲೂ ಹೇಳಿರಲಿಲ್ಲ. ಮದುವೆಯಾದ ಮೂರೇ ದಿನಕ್ಕೆ ಅವರು ಮಲಯಾಳಂ ಸಿನಿಮಾದಲ್ಲಿ ನಟಿಸಿ ಬಂದಿದ್ದಾರೆ. ಅಷ್ಟೇ ಅಲ್ಲ, ಈಗ ಕನ್ನಡದಲ್ಲೂ ನಟಿಸುತ್ತಿದ್ದಾರೆ. “ನನ್ನ ಪ್ರಕಾರ’ ಅವರು ಮದುವೆಯ ಬಳಿಕ ನಟಿಸುತ್ತಿರುವ ಚಿತ್ರ. ಮದುವೆ ನಂತರದ ತಮ್ಮ ಸಿನಿ ಕೆರಿಯರ್‌ ಕುರಿತು ಪ್ರಿಯಾಮಣಿ ಮಾತನಾಡಿದ್ದಾರೆ.  

ನಾನು ಮದುವೆಯಾದ ಮೂರೇ ದಿನಕ್ಕೆ ಸಿನಿಮಾದಲ್ಲಿ ಕೆಲಸ ಮಾಡಿದ್ದೇನೆ. ಮಲಯಾಳಂನ “ಆಶಿಕ್‌ ಬಂದ ದಿವಸಂ’ ಚಿತ್ರದಲ್ಲಿ ನಟಿಸಿದ್ದೆ. ಮದುವೆ ನಂತರ ಕನ್ನಡದ “ನನ್ನ ಪ್ರಕಾರ’ ಚಿತ್ರದಲ್ಲಿ ನಟಿಸುತ್ತಿದ್ದೇನೆ. ಮದುವೆಯ ಬಳಿಕ ಮೂರು ಚಿತ್ರ ಒಪ್ಪಿಕೊಂಡಿದ್ದೇನೆ. ಕನ್ನಡ, ಮಲಯಾಳಂ ಹಾಗು ಹಿಂದಿಯಲ್ಲೊಂದು ಓಕೆಯಾಗಿದೆ. ಈ ಪೈಕಿ ಮಲಯಾಳಂ ಚಿತ್ರ ಮುಗಿದಿದೆ, ಈಗ ಕನ್ನಡ ಶುರುವಾಗುತ್ತಿದೆ.

ಇಷ್ಟರಲ್ಲೇ ಹಿಂದಿ ಸಿನಿಮಾ ಬಗ್ಗೆ ಹೇಳುತ್ತೇನೆ. ಮದುವೆ ನಂತರ ಒಳ್ಳೆಯ ಕಥೆ, ಪಾತ್ರ ಹುಡುಕಿ ಬರುತ್ತಿವೆ. ಹಾಗಂತ ಮೊದಲು ಬರುತ್ತಿರಲಿಲ್ಲವಂತಲ್ಲ. ಈಗ ನನಗೆ ಸರಿಹೊಂದುವ ಕಥೆ ಬರುತ್ತಿರುವುದರಿಂದ ಮಾಡುತ್ತಿದ್ದೇನೆ. ನಿಜ ಹೇಳುವುದಾದರೆ, ಈಗ ಸಿಕ್ಕಿರುವ ಪಾತ್ರದಲ್ಲಿ ತೂಕವಿದೆ. ಹಾಗಾಗಿ ನಾನು ಖುಷಿಯಾಗಿದ್ದೇನೆ.  ಮದುವೆ ನಂತರ ನಾನು ಐದು ಕಥೆ ಬಿಟ್ಟಿದ್ದೇನೆ. ಕಾರಣ, ಇಷ್ಟವಾಗದ ಕಥೆ, ಪಾತ್ರ.

ನನಗೆ ಕಥೆ ಇಷ್ಟವಾದಲ್ಲಿ ಮಾತ್ರ ಒಪ್ಪುತ್ತೇನೆ. ಇಲ್ಲವಾದರೆ ಇಲ್ಲ. ಈಗ ಕಥೆಯಲ್ಲಿ ಗಟ್ಟಿತನವಿರಬೇಕು. ಎಲ್ಲೂ ವಲ್ಗರ್‌ ಅನಿಸಬಾರದು. ಕಿಸ್ಸಿಂಗ್‌, ಹಗ್ಗಿಂಗ್‌ ಬಗ್ಗೆಯೂ ಎಚ್ಚರವಹಿಸಿಕೊಂಡು ಪಾತ್ರ ಒಪ್ಪಬೇಕು. ನಮ್ಮ ಪತಿ ಹಾಗು ಕುಟುಂಬದ ಸಹಕಾರ ಇರದಿದ್ದರೆ ನಾನು ಸಿನಿಮಾ ಮಾಡುತ್ತಿರಲಿಲ್ಲ. ಅವರ ಸಹಕಾರದಿಂದಲೇ ನಾನು ಕೆಲಸ ಮಾಡುತ್ತಿದ್ದೇನೆ. ಒಳ್ಳೆಯ ಕಥೆ ಬಂದರೆ ಸಿನಿಮಾ ಮಾಡು ಅಂತ ಹೇಳಿದ್ದಾರೆ.

ಇರುವುದು ಒಂದೇ ಲೈಫ‌ು. ಇರುವ ಈ ಲೈಫ್ನಲ್ಲಿ ನನಗೆ ಇಷ್ಟ ಬಂದಂತೆ ಇರಬೇಕು ಎಂಬುದು ಮನೆಯವರ ಆಸೆ. ಹಾಗಾಗಿ ಮಾಡುತ್ತಿದ್ದೇನೆ. ನಾನು ಇಷ್ಟು ವರ್ಷಗಳಿಂದಲೂ ಸಿನಿಮಾ ರಂಗದಲ್ಲಿದ್ದೇನೆ. ತಕ್ಷಣವೇ ಬಿಡುವುದಕ್ಕೆ ಆಗೋದಿಲ್ಲ. ಮದುವೆ ಬಳಿಕ ಕೆಲವರು ಬ್ರೇಕ್‌ ತಗೊಂಡಿದ್ದಾರೆ. ಆಮೇಲೆ ಬಂದಿದ್ದಾರೆ. ನಾನು ಮದುವೆಯಾದ ಮೂರೇ ದಿನಕ್ಕೆ ಸಿನಿಮಾ ಮಾಡಿದ್ದೇನೆ ಅಂದರೆ, ಅದು ನನಗಿರುವ ಸಿನಿಮಾ ಪ್ರೀತಿಯಷ್ಟೇ.

ನಾನು ಬ್ರೇಕ್‌ ತೆಗೆದುಕೊಳ್ಳದೆ ಕೆಲಸ ಮಾಡ್ತೀನಿ. ಇಷ್ಟು ಬೇಗ ಸಿನಿಮಾಗೆ ಟಾಟಾ ಹೇಳ್ಳೋದಿಲ್ಲ. ಮದುವೆಯಾಗಿದ್ದೇನೆ ಅಂತ ಕಥೆಗಳು ಬರುವುದು ನಿಂತಿಲ್ಲ. ಈಗಲೂ ತೆಲುಗು, ಕನ್ನಡ, ಮಲಯಾಳಂನಿಂದ ಕಥೆ ಬರುತ್ತಿವೆ. ಒಳ್ಳೆಯ ಕಥೆ ಇದ್ದರೆ ಆಯ್ಕೆ ಮಾಡಿಕೊಂಡು ಸಿನಿಮಾ ಮಾಡ್ತೀನಿ. ನಾನಿನ್ನೂ ಇಂಡಸ್ಟ್ರಿಯಲ್ಲಿರಬೇಕು. ನನ್ನ ಪತಿ ಹಿಂದಿಯಲ್ಲೊಂದು ಸಿನಿಮಾ ಮಾಡಿದ್ದಾರೆ. ಮುಂದೆ ಪ್ರೊಡಕ್ಷನ್‌ ಮಾಡುವ ಯೋಚನೆ ಇದೆ. ಆದರೆ, ಯಾವಾಗ, ಏನು ಎಂಬುದು ಗೊತ್ತಿಲ್ಲ. ಇಬ್ಬರು ಚರ್ಚಿಸಬೇಕಿದೆ.

ಟಾಪ್ ನ್ಯೂಸ್

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

1-supri

Crypto funds ಡೀಲ್ ಆಡಿಯೋ ಆರೋಪ: ನನ್ನ ಧ್ವನಿಯಲ್ಲ ಎಂದು ಕಿಡಿಯಾದ ಸುಪ್ರಿಯಾ ಸುಳೆ

1-leo

Football;ಕೇರಳದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ದಿಗ್ಗಜ ಲಿಯೋನೆಲ್ ಮೆಸ್ಸಿ

delhi air

Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ

1-wqewqe

BBK11: ದೊಡ್ಮನೆಯಲ್ಲಿ ಸೆಡೆ ಜಗಳ.. ಬಿಗ್ ಬಾಸ್ ನಿಂದ ಅಚೆ ಬರಲು ರೆಡಿಯಾದ ಸುರೇಶ್

1-wewqewq

Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಸಂತು ಡಬಲ್‌ ಧಮಾಕಾ: ಡಿಸ್ಕೋ ಜೊತೆ ಕಂಗ್ರಾಜ್ಯುಲೇಶನ್ಸ್‌ ಬ್ರದರ್‌!

Sandalwood: ಸಂತು ಡಬಲ್‌ ಧಮಾಕಾ: ಡಿಸ್ಕೋ ಜೊತೆ ಕಂಗ್ರಾಜ್ಯುಲೇಶನ್ಸ್‌ ಬ್ರದರ್‌!

BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ

BBK11: ಮಂಜು ಮಾತಿಗೆ ಕೆರಳಿ ಕೆಂಡವಾದ ಶೋಭಾ; ಒಂದೇ ದಿನದಲ್ಲಿ ಡಾಮಿನೇಟ್ ಆಟ

Mahaveera Hanuma: ಆಲ್ಬಂನಲ್ಲಿ ಹನುಮ ಗಾನ

Mahaveera Hanuma: ಆಲ್ಬಂನಲ್ಲಿ ಹನುಮ ಗಾನ

Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ

Tribanadhari Barbarik: ತ್ರಿಬಾಣಧಾರಿ ಬಾರ್ಬರಿಕದಲ್ಲಿ ವಸಿಷ್ಠ

Bangalore Premier League: ಡಿಸೆಂಬರ್‌ 12ರಿಂದ ಬಿಪಿಎಲ್‌ ಟೂರ್ನಿ

Bengaluru Premier League: ಡಿಸೆಂಬರ್‌ 12ರಿಂದ ಬಿಪಿಎಲ್‌ ಟೂರ್ನಿ

MUST WATCH

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

ಹೊಸ ಸೇರ್ಪಡೆ

13

UV Fusion: ಹಿರಿಜೀವಗಳ ಕಾಳಜಿ ವಹಿಸಿ

12

UV Fusion: ಇಂಗ್ಲೆಂಡ್‌ ಟು ಕೋಲ್ಕತಾ ಬಸ್‌ ಒಂದು ನೆನಪು

11

UV Fusion: ಮರೆಯಾಗದಿರಲಿ ಪಾಡ್ದನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್‌!

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್‌ 

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.