ಹಾಡಿನಲ್ಲಿ ತನಿಖೆ
Team Udayavani, May 11, 2020, 11:06 AM IST
ಕರ್ನಾಟಕದಲ್ಲಿ ಈಗ ಲಾಕ್‌ಡೌನ್ ಸಡಿಲ ಆದ ಮೇಲೆ ಮಧ್ಯ ಮಾರಾಟಕ್ಕೆ ನೂಕು ನುಗ್ಗಲು ಶುರು ಆಗಿ ಬಿಟ್ಟಿದೆ. ಈಗ “ತನಿಖೆ’ ಚಿತ್ರದ ಎಣ್ಣೆ ಸಾಂಗ್‌ವೊಂದು ಯು ಟ್ಯೂಬ್‌ನಲ್ಲಿ ಬಿಡುಗಡೆಯಾಗಿ ಹಿಟ್‌ಲಿಸ್ಟ್ ಸೇರಿದೆ. ಅದೇ “ಎಣ್ಣೆ ಹೊಡೆಯೋದ ಹೆಂಡ್ತಿ ಬಿಡೋದ….’ ಗೀತೆ ನವೀನ್ ಸಜ್ಜು ಅವರು ಹಾಡಿರುವುದು ವೈರಲ್ ಆಗಿದೆ. ಹಾಡು ಟಿಕ್ ಟಾಕ್ ಅಲ್ಲೂ ಸಹ ರಂಜನೆಗೆ ಬಳಸಲಾಗುತ್ತಿದೆ.
“ತನಿಖೆ’ ಕನ್ನಡ ಸಿನಿಮಾ ಸೆನ್ಸಾರ್ ಕೂಡಾ ಆಗಿದ್ದು, ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಆಗಬೇಕಿತ್ತು. ಆದರೆ ಕೋವಿಡ್ 19 ವೈರಸ್ ಲಾಕ್ ಡೌನ್ ಇಂದ ಬಿಡುಗಡೆಯನ್ನು ಜುಲೈ ಅಥವಾ ಆಗಸ್ಟ್ ತಿಂಗಳಿಗೆ ಎಂದು ನಿರ್ಮಾಪಕ ಕಲಿ ಗೌಡ ಅವರು ತಿಳಿಸಿದ್ದಾರೆ. ಕಲಿ ಸಿನಿಮಾಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ. “ತನಿಖೆ’ ಪಕ್ಕ ಕಮರ್ಷಿಯಲ್ ಸಿನಿಮಾ. ನಾಲ್ಕು ಸಾಹಸ ಸನ್ನಿವೇಶ ಅಲ್ಟಿಮೇಟ್ ಶಿವು ನಿರ್ವಹಿಸಿದ್ದಾರೆ, ಕ್ರಿಸ್ಟೋಫರ್ ಲೀ ಸಂಗೀತ ನಿರ್ದೇಶನದಲ್ಲಿ ಸಂತೋಷ್ ವೆಂಕಿ “ಒಟ್ಟಾರೆ…. ಹಾಡನ್ನು, ಯಾರೋ ಇವಳು ಗೆಳೆಯ… ಚಿಂತನ್ ವಿಕಾಸ್, ಎಣ್ಣೆ ಹೊಡೆಯೋದ…ನವೀನ್ ಸಜ್ಜು ಹಾಗೂ ಯಾರೋ ನೀನು….ವಾಣಿ ಹರಿಕೃಷ್ಣ ಹಾಡಿದ್ದಾರೆ. “ತನಿಖೆ’ ಹಳ್ಳಿಯಲ್ಲಿ ನಡೆಯುವ ಆರು ಯುವ ಸ್ನೇಹಿತರ ಜೀವನ ಪಯಣ. ಆರರಲ್ಲಿ ಒಬ್ಬ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ಅವನ ಹುಡುಗಿ ಮಿಕ್ಕ ಐವರಲ್ಲಿ ಒಬ್ಬನನ್ನು ಪ್ರೀತಿ ಮಾಡುತ್ತಾ ಇರುತ್ತಾಳೆ. ಪ್ರೀತಿಯ ವಿಚಾರದಲ್ಲಿ ಸ್ನೇಹಿತರಲ್ಲಿ ಮನಸ್ತಾಪ ಹರಡುತ್ತದೆ. ಆಕಸ್ಮಿಕವಾಗಿ ಆರು ಸ್ನೇತರಲ್ಲಿ ಒಬ್ಬನ ಹತ್ಯೆ ಸಹ ಆಗುತ್ತದೆ. ಇದರಿಂದ ಉಳಿದ ಐವರು ಸ್ನೇಹಿತರು ಹಳ್ಳಿಯನ್ನು ಬಿಡುವಂತೆ ಆಗುತ್ತದೆ.
ಆನಂತರ “ತನಿಖೆ’ ಆಗಿ ಐವರನ್ನು ಸಹ ಅರ್ರೆಸ್ಟ್ ಮಾಡಲಾಗುವುದು. “ತನಿಖೆ’ ಮಾಡುವಾಗ ಅನೇಕ ತಿರುವುಗಳು ಚಿತ್ರಕತೆಯಲ್ಲಿ ಅನಾವರಣ ಆಗುತ್ತಾ ಹೋಗುತ್ತದೆ. “ತನಿಖೆ’ ಚಿತ್ರದ ಕಥೆ, ಚಿತ್ರಕಥೆ, ಗೀತರಚನೆ ಹಾಗೂ ನಿರ್ದೇಶನ ಕಲಿ ಗೌಡ ಅವರೇ ಮಾಡಿದ್ದಾರೆ. ಶ್ಯಾಮ್ ಸಿಂದನೂರ್ ಛಾಯಾಗ್ರಹಣ, ಸಂಕಲನ ಹಾಗೂ ಡಿ ಐ ಕೆಲಸವನ್ನು ವೇದ್ ನಿರ್ವಹಿಸಿದ್ದಾರೆ. ತಾರಾಗಣದಲ್ಲಿ ಅನಿಲ್ ಕುಮಾರ್, ಗುಲ್ಶನ್, ಚಂದನ, ಮುನಿರಾಜು, ಸಂತೋಷ್ ಜಯಕುಮಾರ್, ಪ್ರಭಿಕ್ ಮೊಗವೀರ್, ನಿಖೀಲ್, ಕಾಲ್ಕೆರೆ ಗಂಗಾಧರ್, ಅಪ್ಪು ಬಡಿಗರ್, ಗೋಪಿ ಹಾಗೂ ಇತರರು ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.