ತಮಿಳಿಗೆ ಹೊರಟ ತಾರಕಾಸುರ
Team Udayavani, Jan 19, 2019, 5:33 AM IST
ಕಳೆದ ಅಕ್ಟೋಬರ್ ಕೊನೆಯ ವಾರ ತೆರೆಗೆ ಬಂದಿದ್ದ “ತಾರಕಾಸುರ’ ಚಿತ್ರ ಸದ್ದಿಲ್ಲದೆ ಐವತ್ತು ದಿನಗಳ ಯಶಸ್ವಿ ಪ್ರದರ್ಶನವನ್ನು ಪೂರ್ಣಗೊಳಿಸಿ ಮುನ್ನುಗ್ಗುತ್ತಿದೆ. ಇದರ ನಡುವೆಯೇ “ತಾರಕಾಸುರ’ ಚಿತ್ರದ ಬಗ್ಗೆ ಮತ್ತೂಂದು ವಿಷಯ ಹೊರಬಿದ್ದಿದೆ. ಅದೇನೆಂದರೆ, “ತಾರಕಾಸುರ’ ಚಿತ್ರ ತಮಿಳಿಗೆ ರಿಮೇಕ್ ಆಗುತ್ತಿದೆ.
ಈ ವಿಷಯವನ್ನು ಸ್ವತಃ ಖಚಿತಪಡಿಸಿರುವ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ, “ಈಗಾಗಲೇ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ “ತಾರಕಾಸುರ’ ಉತ್ತಮ ಪ್ರದರ್ಶನ ಕಾಣುತ್ತಾ ಮುನ್ನಡೆಯುತ್ತಿದೆ. ಚಿತ್ರವನ್ನು ನೋಡಿದವರು ಚಿತ್ರದ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.
ಇದೇ ವೇಳೆ ಚಿತ್ರವನ್ನು ನೋಡಿ ಖುಷಿಪಟ್ಟಿರುವ ತಮಿಳು ನಿರ್ಮಾಪಕರೊಬ್ಬರು ಈ ಚಿತ್ರವನ್ನು ತಮಿಳಿನಲ್ಲಿ ನಿರ್ಮಿಸಲು ಮುಂದೆ ಬಂದಿದ್ದಾರೆ. ಈಗಾಗಲೇ ಇದರ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಶೀಘ್ರದಲ್ಲೇ ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ನೀಡಲಿದ್ದೇವೆ’ ಎನ್ನುತ್ತಾರೆ.
ಇನ್ನು ತಮಿಳಿನಲ್ಲೂ “ತಾರಕಾಸುರ’ ಚಿತ್ರವನ್ನು ಚಂದ್ರಶೇಖರ ಬಂಡಿಯಪ್ಪ ಅವರೇ ನಿರ್ದೇಶಿಸಲಿದ್ದು, ಚಿತ್ರಕ್ಕೆ ತಮಿಳು ನಟ ಪ್ರಭು ಅವರ ಪುತ್ರ ವಿಕ್ರಂ ಪ್ರಭು ನಾಯಕ ನಟನಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆ ಚಿತ್ರ ಮುಗಿಸಿಕೊಂಡು ಚಂದ್ರಶೇಖರ್, ಶಿವರಾಜಕುಮಾರ್ ಅವರ ಜೊತೆಗಿನ “ವೈರಮುಡಿ’ ಕೈಗೆತ್ತಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.