![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Aug 11, 2024, 11:33 AM IST
ಬೆಂಗಳೂರು: ಸ್ಯಾಂಡಲ್‌ವುಡ್ (Sandalwood) ನಿರ್ದೇಶಕ ತರುಣ್ ಸುಧೀರ್(Tharun Sudhir), ಸೋನಲ್ ಮೊಂಥೆರೋ(Sonal Monteiro) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಶನಿವಾರ (ಆಗಸ್ಟ್ 10ರಂದು) ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಆರತಕ್ಷತೆ ನಡೆಯಿತು. ಈ ಕಾರ್ಯಕ್ರಮಕ್ಕೆ ಸ್ಯಾಂಡಲ್ ವುಡ್ ತಾರೆಯರು, ರಾಜಕೀಯ ಗಣ್ಯರು ಸೇರಿದಂತೆ ಹತ್ತಾರು ಮಂದಿ ಶುಭಕೋರಿ ನವ ಜೋಡಿಗೆ ಹಾರೈಸಿದ್ದರು.
ಭಾನುವಾರ(ಆ.11ರಂದು) ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಅದ್ಧೂರಿಯಾಗಿ ನಡೆಯಿತು. ಹಿಂದೂ ಸಂಪ್ರದಾಯದಂತೆ ಎರಡು ಕುಟುಂಬದ ಗುರು – ಹಿರಿಯರ ಸಮ್ಮುಖದಲ್ಲಿ ನವಜೋಡಿ ಹೊಸ ಜೀವನಕ್ಕೆ ಕಾಲಿಟ್ಟರು. ಬೆಳಗ್ಗೆ 10:50 ರಿಂದ 11:35 ಸಮಯದ ತುಲಾ ಲಗ್ನದಲ್ಲಿ ಮಾಂಗಲ್ಯ ಧಾರಣೆ ನೆರವೇರಿದೆ.
ಯಾರೆಲ್ಲಾ ಭಾಗಿಯಾಗಿದ್ದರು..?
ವಿವಾಹ ಕಾರ್ಯಕ್ರಮದಲ್ಲಿ ಹಿರಿಯ ನಟಿ ಶ್ರುತಿ, ಸುಧಾರಾಣಿ, ಮಾಳವಿಕ ಅವಿನಾಶ್, ನಟ ಅವಿನಾಶ್, ಮೇಘನಾ ಗಾಂವ್ಕರ್, ಪ್ರೇಮ್, ಅಮೃತಾ ಪ್ರೇಮ್, ನಟಿ ನಿಶ್ವಿಕಾ ನಾಯ್ಡು, ನಟಿ ಆಶಿಕಾ ರಂಗನಾಥ್, ನಟ ಸಾಧುಕೋಕಿಲಾ, ಸಂಗೀತ ನಿರ್ದೇಶಕ ವಿ.ಹರಿಕೃಷ್ಣ,ತೆಲುಗು ನಟ ಜಗಪತಿ ಬಾಬು, ನಟ ಶರಣ್, ಗೋಲ್ಡನ್ ಸ್ಟಾರ್ ಗಣೇಶ್, ನಟ ವಿನೋದ್ ರಾಜ್, ಗಾಯಕ ಚೇತನ್, ಗಾಯಕ ವಿಜಯ್ ಪ್ರಕಾಶ್ ಸೇರಿದಂತೆ ಹಲವು ಸ್ಯಾಂಡಲ್ ವುಡ್ ತಾರೆಯರು ಹಾಗೂ ಗಣ್ಯರು ಈ ಕ್ಷಣಕ್ಕೆ ಸಾಕ್ಷಿಯಾದರು.
ಮಂಗಳೂರು ಮೂಲದ ಸೋನಲ್ ಕೋಸ್ಟಲ್ ವುಡ್ ಚಿತ್ರರಂಗದಲ್ಲ ಮಿಂಚಿ, ಆ ಬಳಿಕ ಸ್ಯಾಂಡಲ್ ವುಡ್ ನಲ್ಲಿ ʼರಾಬರ್ಟ್ʼ, ʼಗರಡಿʼ, ʼಪಂಚತಂತ್ರʼದಂತಹ ಹಲವು ಸಿನಿಮಾಗಳಲ್ಲಿ ಕಾಣಿಸಿಕೊಂಡು, ಬೇಡಿಕೆಯ ನಟಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ʼರಾಬರ್ಟ್ʼ ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಅವರಿಗೆ ಜೋಡಿಯಾಗಿ ಸೋನಲ್ ನಟಿಸಿದ್ದರು. ಈ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದರು.
ಪ್ರೇಮ್ ಕಹಾನಿ ಶುರುವಾಗಿದ್ದು ಹೇಗೆ..?:
ಈ ಸಿನಿಮಾದ ಸೆಟ್ ನಲ್ಲೇ ಇಬ್ಬರ ನಡುವೆ ಆತ್ಮೀಯತೆ ಬೆಳೆದಿದೆ ಎನ್ನಲಾಗಿದೆ. ತರುಣ್ ಸುಧೀರ್ ಗೆ ಮದುವೆ ಮಾಡಿಸಬೇಕೆಂದು ಆಗಾಗ ನಟ ದರ್ಶನ್ (Darshan Thoogudeepa) ತಮಾಷೆ ಮಾಡುತ್ತಿದ್ದರಂತೆ. ಸೋನಲ್ ಹಾಗೂ ತರುಣ್ ಇಬ್ಬರನ್ನು ತಮಾಷೆಯಾಗಿ ಮದುವೆ ವಿಚಾರವಾಗಿ ಮಾತನಾಡುತ್ತಿದ್ದರಂತೆ. ದರ್ಶನ್ ಅವರ ಮಾತಿನ ನಂತರ ಇಬ್ಬರು ಮತ್ತಷ್ಟು ಆತ್ಮೀಯರಾಗಿದ್ದು, ಈ ಸಂದರ್ಭದಲ್ಲೇ ಸೋನಲ್ ಹಾಗೂ ತರುಣ್ ಅವರ ನಡುವೆ ಪ್ರೀತಿ ಹುಟ್ಟಿತ್ತು.
ತರುಣ್ ಸ್ವಾತಂತ್ರ್ಯ ಹೋರಾಟಗಾರ ಸಿಂಧೂರ ಲಕ್ಷ್ಮಣನ ಜೀವನಾಧರಿತ ಚಿತ್ರ ತಯಾರಿಯಲ್ಲಿದ್ದರೆ, ಇತ್ತ ಸೋನಲ್ ‘ಬುದ್ಧಿವಂತ-2’ ಹಾಗೂ ‘ಮಾರ್ಗರೆಟ್ ಲವರ್ ಆಫ್ ರಾಮಾಚಾರಿ’ ಸೇರಿದಂತೆ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
You seem to have an Ad Blocker on.
To continue reading, please turn it off or whitelist Udayavani.