ಡಬ್ಬಲ್ ಇಂಜಿನ್ ಹತ್ತಿದ ಚಿರಯೌವ್ವನೆ
Team Udayavani, Jun 13, 2018, 11:09 AM IST
ಈಯಮ್ಮನಿಗೆ ವಯಸ್ಸೇ ಆಗಲ್ಲ ಬಿಡಿ … ಸುಮನ್ ರಂಗನಾಥನ್ ನೋಡಿದವರು ಮೊದಲು ಹೇಳುವ ಮಾತಿದೆ. ಅದಕ್ಕೆ ಕಾರಣ ಗ್ಲಾಮರ್. ಹರೆಯದ ಯಾವ ನಟಿಗೂ ಕಮ್ಮಿ ಇಲ್ಲದಂತಹ ಗ್ಲಾಮರ್‌ನಲ್ಲಿ ಮಿಂಚುವ ಮೂಲಕ ಸುಮನ್ ರಂಗನಾಥ್ ಇಂದಿಗೂ ಬೇಡಿಕೆಯ ನಟಿಯಾಗಿದ್ದಾರೆ. 1989ರಲ್ಲಿ ಆರಂಭವಾದ ಸುಮನ್ ರಂಗನಾಥ್ ಅವರ ಜರ್ನಿ ಇಲ್ಲಿವರೆಗೆ ಯಶಸ್ವಿಯಾಗಿ ಸಾಗಿಬಂದಿದೆ.
ಕನ್ನಡ, ತೆಲುಗು, ತಮಿಳು, ಹಿಂದಿ … ಹೀಗೆ ಎಲ್ಲಾ ಭಾಷೆಯ ಚಿತ್ರರಂಗದಲ್ಲೂ ಸುಮನ್ ರಂಗನಾಥ್ ನಟಿಸಿ ಬಂದಿದ್ದಾರೆ. ಸುಮನ್ ಅವರಿಗೆ ಇತ್ತೀಚಿನ ವರ್ಷಗಳಲ್ಲಿ ಹೆಸರು ಕೊಟ್ಟ ಸಿನಿಮಾ “ಸಿದ್ಲಿಂಗು’. ಆ ಚಿತ್ರದ ಆಂಡಲಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದರು ಸುಮನ್. ಆ ನಂತರ “ನೀರ್ ದೋಸೆ’ಯಲ್ಲೂ ಸುಮನ್ ಅವರಿಗೆ ಒಳ್ಳೆಯ ಪಾತ್ರ ಸಿಕ್ಕಿತ್ತು. ಸದ್ಯ ಸುಮನ್ ರಂಗನಾಥ್ “ಡಬಲ್ ಇಂಜಿನ್’ ಎಂಬ ಸಿನಿಮಾದಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ.
ಇಲ್ಲಿ ಚಿಕ್ಕಣ್ಣ ಅವರ ಕಾಂಬಿನೇಶನ್‌ನಲ್ಲಿ ಅವರ ದೃಶ್ಯಗಳು ಸಾಗಿ ಬರಲಿದೆ. ಹೆಸರಿಗೆ ತಕ್ಕಂತೆ ಕಾಮಿಡಿ ಹಿನ್ನೆಲೆಯಲ್ಲಿ ಸಾಗುವ ಸಿನಿಮಾ ಇದಾಗಿರುವುದರಿಂದ ಸಾಕಷ್ಟು ಫನ್ನಿ ಸನ್ನಿವೇಶಗಳು ಚಿಕ್ಕಣ್ಣ ಹಾಗೂ ಸುಮನ್ ಕಾಂಬಿನೇಶನ್‌ನಲ್ಲಿ ಮೂಡಿಬಂದಿವೆ. ಈ ಹಿಂದೆ “ಬಾಂಬೆ ಮಿಠಾಯಿ’ ಎಂಬ ಸಿನಿಮಾ ಮಾಡಿದ್ದ ಚಂದ್ರಮೋಹನ್ ಈ ಚಿತ್ರದ ನಿರ್ದೇಶಕರು.
ಇದೊಂದು ಮೂವರು ಮುಗ್ಧ ಹುಡುಗರ ಸುತ್ತ ನಡೆಯುವ ಕಥೆ. ಹಳ್ಳಿಯಲ್ಲಿರುವ ಮೂವರು ಮುಗ್ಧ ಯುವಕರಿಗೆ ಅದೊಂದು ದಿನ, ತಾವು ದಿಢೀರ್ ಶ್ರೀಮಂತರಾಗಿಬಿಡಬೇಕು ಎಂಬ ಆಸೆ ಚಿಗುರುತ್ತದೆ. ಶ್ರೀಮಂತರಾಗೋದು ಸುಲಭವಲ್ಲ. ಆದರೆ, ಕೆಟ್ಟದಾರಿ ಹಿಡಿದರೆ, ಬೇಗನೇ ಶ್ರೀಮಂತರಾಗಿಬಿಡಬಹುದು ಎಂಬ ಆಸೆಯಿಂದ ಕೆಟ್ಟದಾರಿ ಹಿಡಿಯುತ್ತಾರೆ. ಆಮೇಲೆ ಏನೆಲ್ಲಾ ಆಗಿಹೋಗುತ್ತೆ ಎಂಬುದು ಚಿತ್ರದ ಕಥಾ ಸಾರಾಂಶ.
ಕಥೆ ಗಂಭೀರವಾಗಿದ್ದರೂ, ಹಾಸ್ಯದ ಮೂಲಕವೇ ಚಿತ್ರ ಸಾಗುವುದರಿಂದ ನೋಡುಗರಿಗೆ ಎಲ್ಲೂ ಬೋರ್ ಎನಿಸುವುದಿಲ್ಲ ಎಂಬುದು ಚಿತ್ರತಂಡದ ಮಾತು. ಮುಖ್ಯವಾಗಿ ಇಲ್ಲಿ ಯುವಕರಿಗೊಂದು ಸಂದೇಶವಿದೆ. ಅದಕ್ಕೆ ಪೂರಕವಾಗಿಯೇ ಶೀರ್ಷಿಕೆ ಇಡಲಾಗಿದೆಯಂತೆ. ಅದೇನೇ ಆದರೂ ಸುಮನ್ ರಂಗನಾಥ್ ಮತ್ತೂಮ್ಮೆ “ಡಬಲ್ ಇಂಜಿನ್’ನಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿರುವುದಂತೂ ಸತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.