ಮತ್ತೆ ಬಂದ “ದುಷ್ಟ’ನ ಸುರಭಿ
Team Udayavani, Sep 29, 2017, 6:00 PM IST
ನಟಿ ಸುರಭಿ ಮತ್ತೆ ಬಂದಿದ್ದಾರೆ. ಇದನ್ನು ಅವರ “ಸೆಕೆಂಡ್’ ಇನ್ನಿಂಗ್ಸ್ ಎಂದು ಕರೆಯಲು ಅಡ್ಡಿಯಿಲ್ಲ. ಅಷ್ಟಕ್ಕೂ ಯಾವ ಸುರಭಿ ಎಂದರೆ “ದುಷ್ಟ’ ಹಾಗೂ “ಜಟಾಯು’ ಸಿನಿಮಾ ತೋರಿಸಬೇಕು. ಎಸ್.ನಾರಾಯಣ್ ನಿರ್ದೇಶನದ “ದುಷ್ಟ’ ಚಿತ್ರದ ಮೂಲಕ ಲಾಂಚ್ ಆದ ಈ ಮಲಯಾಳಿ ಬೆಡಗಿ ಸುರಭಿ ತಮಿಳಿನಲ್ಲೂ ಒಂದು ಸಿನಿಮಾ ಮಾಡಿದ್ದಾರೆ. ಜೊತೆಗೆ ಮಲಯಾಳಂನಲ್ಲಿ ಅವರು ನಟಿಸಿರುವ ಒಂದು ಸಿನಿಮಾ ಮುಂದಿನ ತಿಂಗಳು ಬಿಡುಗಡೆಯಾಗಲಿದೆಯಂತೆ.
“ಜಟಾಯು’ ನಂತರ ದೊಡ್ಡ ಗ್ಯಾಪ್ ತಗೊಂಡಿದ್ದ ಸುರಭಿ ಈಗ “ಸೆಕೆಂಡ್ ಹಾಫ್’ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ಗೆ ಜೋಡಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆಂದು ನಿರ್ದೇಶಕರು ಹೇಳಿದ ಕೂಡಲೇ ಸುರಭಿ, ಖುಷಿಯಿಂದ ಸಿನಿಮಾ ಒಪ್ಪಿಕೊಂಡರಂತೆ.
ಅಷ್ಟಕ್ಕೂ ಯಾಕೆ ಈ ಗ್ಯಾಪ್ ಎಂದರೆ ಎಜುಕೇಶನ್ ಎನ್ನುತ್ತಾರೆ. ಸುರಭಿಯವರಿಗೆ ಎಜುಕೇಶನ್ ಮುಗಿಸೋದು ಹಾಗೂ ಅವರ ಕನಸಿನ ಕ್ರಿಮಿನಲ್ ಲಾಯರ್ ಆಗೋದು ಇಷ್ಟವಿತ್ತಂತೆ. ಆ ಕಾರಣಕ್ಕಾಗಿ ಅವರು ಎಲ್ಎಲ್ಬಿ ಮುಗಿಸಿದ್ದಾರೆ. ಸದ್ಯ ಕೋರ್ಟ್ಗೆ ಹೋಗಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ ಸುರಭಿ. ಅಂದಹಾಗೆ, ಸುರಭಿಯವರು ನಟಿಯಾಗಬೇಕೆಂಬ ಆಸೆ ಹೊಂದಿರಲಿಲ್ಲವಂತೆ.
ಏಕೆಂದರೆ ಅವರು ಭರತನಾಟ್ಯ ಪ್ರವೀಣೆ. ತನ್ನ ಆರನೇ ವಯಸ್ಸಿನಿಂದಲೇ ಭರತನಾಟ್ಯ ಅಭ್ಯಾಸಿಸುತ್ತಾ ಬಂದ ಸುರಭಿ ಅನೇಕ ಸ್ಟೇಜ್ ಶೋಗಳನ್ನು ಕೂಡಾ ಕೊಟ್ಟಿದ್ದಾರೆ. ಅಂದಹಾಗೆ, ಸುರಭಿಯವರ ತಂದೆ ಮಿಲಿಟರಿಯಲ್ಲಿದ್ದ ಕಾರಣ ಬೇರೆ ಬೇರೆ ಕಡೆ ಬಾಲ್ಯ ಶಿಕ್ಷಣ ಮಾಡಬೇಕಾಯಿತಂತೆ. ಕೊನೆಗೆ ಅವರ ತಂದೆ ಸೇನೆಯಿಂದ ಸ್ವಯಂ ನಿವೃತ್ತಿ ಪಡೆದ ನಂತರ ಬೆಂಗಳೂರಿನಲ್ಲೇ ನೆಲೆಸಿದರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.