ಅಭಿಮಾನಿಗಳು ಗಲಾಟೆ ಮಾಡೋದಾದ್ರೆ ನಮ್ ತಾಯಾಣೆಗೂ ಥಿಯೇಟ್ರಿಗೆ ಬರೋಲ್ಲ
Team Udayavani, Oct 2, 2018, 11:09 AM IST
ಶಿವರಾಜಕುಮಾರ್ ಹಾಗೂ ಸುದೀಪ್ ನಟನೆಯ ದಿ ವಿಲನ್ ಚಿತ್ರ ಇದೇ 18ರಂದು ಬಿಡುಗಡೆಯಾಗುತ್ತಿದೆ. ಸುದೀಪ್ ಹಾಗೂ ಶಿವಣ್ಣ ಇಬ್ಬರು ಮೊದಲ ಬಾರಿ ನಟಿಸಿರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಶಿವರಾಜಕುಮಾರ್, “ಅಭಿಮಾನಿಗಳು ಸಿನಿಮಾವನ್ನು ಸಿನಿಮಾವಾಗಿ ನೋಡಬೇಕು.
ಯಾವುದೇ ಕಾರಣಕ್ಕೂ ನಾನಾ-ನೀನಾ, ಅವರಿಗೆ ಹೆಚ್ಚು ಪ್ರಾಮುಖ್ಯತೆ-ಇವರಿಗೆ ಕೊಟ್ಟಿಲ್ಲ ಎಂಬ ಲೆಕ್ಕಾಚಾರಕ್ಕೆ ಹೋಗಬಾರದು. ಯಾವ ಜಾಗದಲ್ಲಿ ಯಾವ ನಟ ಸ್ಕೋರ್ ಮಾಡಬೇಕೋ ಅವರು ಮಾಡಿರ್ತಾರೆ. ಅದು ಬಿಟ್ಟು ಅಭಿಮಾನಿಗಳು ಥಿಯೇಟರ್‌ಗೆ ಬಂದು ಏನಾದ್ರೂ ಗಲಾಟೆ ಮಾಡೋದಾದ್ರೆ, ನಾನು ನಮ್ಮ ತಾಯಾಣೆಗೂ ಥಿಯೇಟರ್‌ಗೆ ಬರೋದಿಲ್ಲ. ನಾನು ತಾಯಿ ಆಣೆ ಇಟ್ರೆ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡ್ತೇನೆ.
ಒಂದು ವೇಳೆ ಗಲಾಟೆ ಮಾಡ್ತೀರಂತಾದ್ರೆ ಖಂಡಿತ ಬರೋದಿಲ್ಲ. ಈ ಸಿನಿಮಾವನ್ನು ಒಂದು ಕಾಂಬಿನೇಷನ್ ಸಿನಿಮಾವಾಗಿ ಎಂಜಾಯ್ ಮಾಡಿ. ಈ ಥರದ ಸಿನಿಮಾಗಳನ್ನು ಅಭಿಮಾನಿಗಳು ಪ್ರೋತ್ಸಾಹಿಸಬೇಕೇ ವಿನಾ, ಅವರೇ ವಿಲನ್‌ಗಳಾಗಬಾರದು. ಒಂದುವೇಳೆ ಆ ರೀತಿ ಏನಾದ್ರೂ ಅಡ್ಡಿ ಮಾಡೋದಾದ್ರೆ ಇನ್ನೊಮ್ಮೆ ಹೇಳ್ತಿದ್ದೀನಿ, ಖಂಡಿತಾ ನಾನು ಥಿಯೇಟ್ರಿಗೆ ಬರೋದಿಲ್ಲ’ ಎಂದು ಎಚ್ಚರಿಕೆ ಕೊಟ್ಟರು.
ಮುಂದೆ ಮಾತನಾಡಿದ ಶಿವಣ್ಣ, “ನನ್ನ ಅಭಿಮಾನಿಗಳಾಗಲಿ, ಸುದೀಪ್ ದಿ ವಿಲನ್ ಬಿಡುಗಡೆ ಹಿನ್ನೆಲೆಯಲ್ಲಿ ಶಿವರಾಜ್‌ಕುಮಾರ್ ಖಡಕ್ ನುಡಿ ಅಭಿಮಾನಿಗಳಾಗಲಿ, ಪುನೀತ್ ಅಭಿಮಾನಿಗಳಾಗಲೀ… ದರ್ಶನ್ ಅಭಿಮಾನಿಗಳಾಗಲಿ… ಯಾರದೇ ಅಭಿಮಾನಿಗಳಾಗಲಿ, ಸಿನಿಮಾವನ್ನು ಸಿನಿಮಾವಾಗೇ ನೋಡಬೇಕು. ನಾವೆಲ್ಲರೂ ಒಂದಾಗೇ ಇದ್ದೇವೆ. ಸಣ್ಣ ಪುಟ್ಟ ವಿಚಾರಗಳನ್ನು ದೊಡ್ಡದು ಮಾಡಿ ವಿವಾದಕ್ಕೆಡೆ ಮಾಡಿಕೊಡಬಾರದು’ ಎಂದರು ಶಿವಣ್ಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Bagheera: ಮುರಳಿಗೆ ಮತ್ತೆ ಗೆಲುವಾಗಿದೆ..: ಗೆದ್ದು ನಕ್ಕ ʼಬಘೀರʼ
Bhairathi Ranagal; ಶಿವಣ್ಣ ಡ್ರೀಮ್ ಪ್ರಾಜೆಕ್ಟ್ ಭೈರತಿ ಮೈಲುಗಲ್!
BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ
Sandalwood: 99 ರೂಪಾಯಿಗೆ ಆರಾಮ್ ಸಿನಿಮಾ: ಅರವಿಂದ ಸ್ವಾಮಿ ಹೊಸ ಪ್ಲ್ರಾನ್
MUST WATCH
ಹೊಸ ಸೇರ್ಪಡೆ
Cricket: ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲೇ ಖಚಿತ; ತನ್ನ ನಿರ್ಧಾರ ತಿಳಿಸಿದ ಬಿಸಿಸಿಐ
Mangaluru: ನಿಷ್ಪ್ರಯೋಜಕವಾಗಿದೆ ಸ್ಥಳ ಸೂಚನ ಫಲಕಗಳು
Aligarh ಮುಸ್ಲಿಮ್ ವಿವಿ ಅಲ್ಪಸಂಖ್ಯಾತ ಸ್ಥಾನಮಾನ ವಿಚಾರ ಹೊಸ ಪೀಠ ನಿರ್ಧರಿಸಲಿದೆ:ಸುಪ್ರೀಂ
Baikampady: ಇಲ್ಲಿ ಅಜ್ಜಿಯರೂ ರೈಲಿನಡಿ ನುಸುಳಿಯೇ ಹಳಿ ದಾಟಬೇಕು!
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.