ಪ್ರಭುತ್ವಕ್ಕಾಗಿ ಗಡಿನಾಡು ಹೋರಾಟ
ನಿರೀಕ್ಷೆಯ ಕಂಗಳಲ್ಲಿ ಸೂರ್ಯ
Team Udayavani, Jan 19, 2020, 7:01 AM IST
“ಸಂಯುಕ್ತ-2′ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕ ನಟನಾಗಿ ಪರಿಚಯವಾಗಿರುವ ಪ್ರಭು ಸೂರ್ಯ ಈಗ ಮತ್ತೂಂದು ಮಾಸ್ ಚಿತ್ರ “ಗಡಿನಾಡು’ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಬೆಂಗಳೂರಿನಲ್ಲಿ ಕಾಲೇಜ್ ಮುಗಿಸಿ ಬೆಳಗಾವಿಗೆ ಹೋಗುವ ಹುಡುಗನೊಬ್ಬ ಅಲ್ಲಿ ಕರ್ನಾಟಕ-ಮಹರಾಷ್ಟ್ರ ಗಡಿ ಸಮಸ್ಯೆಯ ವಿರುದ್ದ ಹೇಗೆ ಹೋರಾಡುತ್ತಾನೆ ಅನ್ನೋದು ಪ್ರಭು ಸೂರ್ಯ ಅವರ ಪಾತ್ರವಂತೆ.
ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುವ ಪ್ರಭು ಸೂರ್ಯ, “ನಿರ್ದೇಶಕ ನಾಗ್ ಹುಣಸೋಡ್ ನನಗೆ ಮೊದಲಿನಿಂದಲೂ ಸ್ನೇಹಿತರು. ಒಮ್ಮೆ ಅಚಾನಕ್ಕಾಗಿ ಈ ಚಿತ್ರದಲ್ಲಿ ಅಭಿನಯಿಸುವಂತೆ ಆಫರ್ ಕೊಟ್ಟರು. ಚಿತ್ರದ ಕಥೆಗೆ ಒಂದಷ್ಟು ತಯಾರಿ ಬೇಕಾಗಿದ್ದರಿಂದ, ಡ್ಯಾನ್ಸ್-ಫೈಟ್ಸ್ ಎಲ್ಲವನ್ನೂ ಕಲಿತುಕೊಂಡು ಸಿನಿಮಾ ಒಪ್ಪಿಕೊಂಡೆ. ಇದರಲ್ಲಿ ನನ್ನದು ಪಕ್ಕಾ ಮಾಸ್ ಇಮೇಜ್ ಇರುವ ಪಾತ್ರ. ಒಬ್ಬ ಲವರ್‌ಬಾಯ್ ಆಗಿ, ಮತ್ತೂಬ್ಬ ಆ್ಯಕ್ಷನ್ ಹೀರೋ ಆಗಿ ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತೇನೆ.
ಲವ್, ಸೆಂಟಿಮೆಂಟ್, ಆ್ಯಕ್ಷನ್, ರೊಮ್ಯಾನ್ಸ್, ಕಾಮಿಡಿ ಹೀಗೆ ಒಂದು ಕಮರ್ಶಿಯಲ್ ಎಂಟರ್‌ಟೈನ್ಮೆಂಟ್ ಸಿನಿಮಾದಲ್ಲಿ ಏನೇನು ನಿರೀಕ್ಷಿಸಬಹುದೋ, ಅದೆಲ್ಲವನ್ನೂ ಈ ಚಿತ್ರದಲ್ಲಿ ನೋಡಬಹುದು’ ಎಂದು ತಮ್ಮ ಪಾತ್ರದ ಬಗ್ಗೆ ವಿವರಣೆ ಕೊಡುತ್ತಾರೆ. ಈಗಾಗಲೇ ಬಿಡುಗಡೆಯಾಗಿರುವ “ಗಡಿನಾಡು’ ಚಿತ್ರದ ಟ್ರೇಲರ್, ಹಾಡುಗಳಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಜ. 24ಕ್ಕೆ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ.
ಈ ಬಗ್ಗೆ ಮಾತನಾಡುವ ಪ್ರಭು ಸೂರ್ಯ, “ಈಗಾಗಲೇ ಚಿತ್ರದ ಪ್ರಮೋಶನ್ ಕೆಲಸಗಳು ಜೋರಾಗಿ ನಡೆಯುತ್ತಿದ್ದು, ಎಲ್ಲೆಡೆಯಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ. ಫಸ್ಟ್‌ಲುಕ್, ಟೀಸರ್, ಹಾಡುಗಳು, ಟ್ರೇಲರ್ ಹೀಗೆ ಎಲ್ಲದಕ್ಕೂ ಸೋಶಿಯಲ್ ಮೀಡಿಯಾಗಳಲ್ಲಿ ಒಳ್ಳೆಯ ವೀವ್ಸ್ ಸಿಗುತ್ತಿದೆ. ಒಳ್ಳೆಯ ಟೀಮ್‌ನಿಂದಾಗಿ ಇಂಥದ್ದೊಂದು ಸಿನಿಮಾ ಮಾಡೋದಕ್ಕೆ ಸಾಧ್ಯವಾಯ್ತು’ ಎನ್ನುತ್ತಾರೆ.
ಇನ್ನು ಈಗಾಗಲೇ ಬಿಡುಗಡೆಯಾಗಿರುವ “ಗಡಿನಾಡು’ ಚಿತ್ರದ ಫಸ್ಟ್‌ಲುಕ್, ಟೀಸರ್, ಹಾಡುಗಳು, ಟ್ರೇಲರ್‌ಗಳಲ್ಲಿ ಪ್ರಭು ಸೂರ್ಯ ಅವರ ರಗಡ್ ಲುಕ್ ನೋಡಿದವರು ಅವರಿಗೆ “ಡ್ಯಾಶಿಂಗ್ ಸ್ಟಾರ್’ ಎಂಬ ಬಿರುದನ್ನು ನೀಡಿ ದ್ದಾರಂತೆ. “ಬಹುಶಃ ಮಾಸ್ ಆಡಿಯನ್ಸ್‌ಗೆ ಇಷ್ಟವಾಗುವಂಥ ಕಂಟೆಂಟ್ ಸಿನಿಮಾದಲ್ಲಿ ಇರುವ ಕಾರಣದಿಂದ ಮತ್ತು ಅದಕ್ಕೆ ಬೇಕಾದಂತೆ ನಾನು ಕಾಣುತ್ತಿರುವುದರಿಂದಲೋ, ಏನೋ ಅನೇಕರು “ಡ್ಯಾಶಿಂಗ್ ಸ್ಟಾರ್’ ಅಂಥ ಕರೆಯುತ್ತಾರೆ.
ನನಗೆ ಸಿಕ್ಕ ಪಾತ್ರವನ್ನು ಎಷ್ಟು ಚೆನ್ನಾಗಿ ಮಾಡಬಹುದೋ, ಅಷ್ಟು ಚೆನ್ನಾಗಿ ನನ್ನ ಪ್ರಯತ್ನ ಹಾಕಿ ನಿರ್ವಹಿಸಿದ್ದೇನೆ. ನನ್ನ ಪ್ರಕಾರ ಮಾಸ್ ಆಡಿಯನ್ಸ್‌ಗೆ ಈ ಸಿನಿಮಾ ಖಂಡಿತ ಇಷ್ಟವಾಗುತ್ತದೆ’ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ. ಒಟ್ಟಾರೆ “ಗಡಿನಾಡು’ ಮೂಲಕ ಹೊಸವರ್ಷದ ಆರಂಭದಲ್ಲಿ ಹೊಸ ಜೋಶ್‌ನಲ್ಲಿ ಎಂಟ್ರಿಯಾಗುತ್ತಿರುವ ಪ್ರಭು ಸೂರ್ಯ ಪ್ರೇಕ್ಷಕ ಪ್ರಭುಗಳಿಗೆ ಹೊಸಲುಕ್‌ನಲ್ಲಿ ಎಷ್ಟರ ಮಟ್ಟಿಗೆ ಇಷ್ಟವಾಗುತ್ತಾರೆ ಅನ್ನೋದು ಇದೇ ತಿಂಗಳ ಕೊನೆಗೆ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.