ಪ್ರಜ್ವಲ್ ಕನಸಲ್ಲಿ ಬಂದ ಹೆಣ್ಣು ದೆವ್ವ !
ವಿಭಿನ್ನ ಪ್ರಚಾರದಲ್ಲಿ ಜಂಟಲ್‌ಮನ್
Team Udayavani, Jan 1, 2020, 7:04 AM IST
ನಟ ಪ್ರಜ್ವಲ್ ದೇವರಾಜ್ ಅವರ ಕನಸಲ್ಲೊಂದು ಬ್ಯೂಟಿಫುಲ್ ಹೆಣ್ಣು ದೆವ್ವ ಬಂದಿದೆ..! ಹಾಗೊಂದು ಸುತ್ತು ಹೋಗಿ ಬರೋಣ ಅಂತಾನೂ ಹೇಳಿಬಿಟ್ಟಿದೆ. ಪ್ರಜ್ವಲ್‌ಗೆ ನಡುಕ ಶುರುವಾಗಿದೆ. ಧೈರ್ಯ ಮಾಡಿ ಆ ಹೆಣ್ಣು ದೆವ್ವದ ಜೊತೆ ಹೋಗೋದಾ ಅಥವಾ, ಜೋರಾಗಿ ಕಿರುಚೋದ ಎಂಬ ಸಮಸ್ಯೆಗೆ ಸಿಲುಕಿದ್ದಾರೆ ಪ್ರಜ್ವಲ್. ಈ ಸಮಸ್ಯೆಗೊಂದು ಪರಿಹಾರ ಕೊಟ್ಟರೆ, ಸ್ವತಃ ಪ್ರಜ್ವಲ್ ಒಂದು ಬಹುಮಾನ ಕೊಡಲಿದ್ದಾರೆ.
ಹೌದು, ಪ್ರಜ್ವಲ್ ಅಭಿನಯದ “ಜಂಟಲ್‌ಮನ್’ ಸದ್ಯಕ್ಕೆ ಜೋರು ಸುದ್ದಿಯಾಗುತ್ತಿದೆ. ಅದಕ್ಕೆ ಕಾರಣ, ಪ್ರಜ್ವಲ್ ಕನಸಿನ ಕಥೆ. ವಿಷಯವಿಷ್ಟೇ, ಇದು ವಿನೂತನ ಪ್ರಚಾರಕ್ಕೆ ಬಳಸಿಕೊಂಡಿರುವ ಅಂಶ. ಸ್ಲಿಪಿಂಗ್ ಸಿಂಡ್ರೋಮ್ ಕಾಯಿಲೆ ಇರುವ ಹುಡುಗನೊಬ್ಬನ ಸುತ್ತ ನಡೆಯುವ ಕಥೆ ಇಲ್ಲಿದೆ. ದಿನದಲ್ಲಿ ಹೆಚ್ಚು ಕಾಲ ನಿದ್ದೆಯಲ್ಲೇ ಕಾಲ ಕಳೆದು, ಉಳಿದ ಬೆರಳೆಣಿಕೆ ಗಂಟೆಯಲ್ಲಿ ಆ ಯುವಕ ಏನೆಲ್ಲಾ ಮಾಡುತ್ತಾನೆ. ಅವನಿಗೆ ಎದುರಾಗುವ ಸಮಸ್ಯೆಗಳು ಎಂಥವು.
ಅವುಗಳನ್ನು ಹೇಗೆಲ್ಲಾ ಎದುರಿಸುತ್ತಾನೆ ಅನ್ನೋದು ಕಥೆ. ಜಡೇಶ್ ಕುಮಾರ್ ಈ ಚಿತ್ರ ನಿರ್ದೇಶಿಸಿದ್ದು, ಗುರುದೇಶಪಾಂಡೆ ಅವರು ನಿರ್ಮಾಣ ಮಾಡಿದ್ದಾರೆ. ಸದ್ಯಕ್ಕೆ ಚಿತ್ರದ ಹೀರೋ ನಿದ್ದೆ ಮಾಡುವ ವಿಚಾರಗಳನ್ನೇ ಇಟ್ಟುಕೊಂಡು ಚಿತ್ರದ ಪ್ರಚಾರ ಕಾರ್ಯ ಶುರು ಮಾಡಲಾಗಿದೆ. ಕಾರ್ಟೂನ್ ಮೂಲಕ “ಜಂಟಲ್‌ಮನ್’ ಮಾಡುವ ಕಿತಾಪತಿಗಳ ಮೂಲಕ ಈಗಾಗಲೇ ಪ್ರಚಾರ ಜೋರಾಗಿ ನಡೆದಿದೆ. ಅಂದಹಾಗೆ, ಚಿತ್ರತಂಡ ಇಲ್ಲೊಂದು ಸ್ಪರ್ಧೆ ಏರ್ಪಡಿಸಿದೆ.
ಯಾರಾದರೂ ಸಿಕ್ಕಾಪಟ್ಟೆ ನಿದ್ದೆ ಮಾಡಿ ಯಾವುದಾದರೊಂದು ಎಡವಟ್ಟು ಮಾಡಿಕೊಂಡಿದ್ದರೆ, ಆ ಸನ್ನಿವೇಶವನ್ನು ವಿಡಿಯೋ ಮಾಡಿ, ಅದನ್ನು ಜಂಟಲ್‌ಮನ್ ನಿದ್ದೆ ಎಡವಟ್ಟುಗೆ ಟ್ಯಾಗ್ ಮಾಡಿ ಶೇರ್ ಮಾಡುವ ಮೂಲಕ ಪ್ರಜ್ವಲ್ ಅವರೊಂದಿಗೆ “ಜಂಟಲ್‌ಮನ್’ ಚಿತ್ರ ನೋಡುವ ಅವಕಾಶ ಪಡೆಯಬಹುದಾಗಿದೆ. ಅಂದಹಾಗೆ, ಜನವರಿ ಮೂರನೇ ವಾರದಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ನಿರ್ಮಾಪಕರದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.