“ಸಲಗ’ಕ್ಕೆ ಸಿಕ್ಕ ನಾಯಕಿ
ಸಂಜನಾ ಆನಂದ್ ಈಗ ದುನಿಯಾ ವಿಜಿಗೆ ಜೋಡಿ
Team Udayavani, Jun 3, 2019, 3:00 AM IST
“ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಮೂಲಕ ನಾಯಕ ನಟಿಯಾಗಿ ಚಂದನವನಕ್ಕೆ ಪರಿಚಯವಾದ ಸಂಜನಾ ಆನಂದ್ ನಿಧಾನವಾಗಿ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆ ಪಡೆದುಕೊಳ್ಳುತ್ತಿದ್ದಾರೆ. ಸದ್ಯ ಸಂಜನಾ ಆನಂದ್ “ಸಲಗ’ ಚಿತ್ರಕ್ಕೆ ನಾಯಕ ನಟಿಯಾಗಿ ಆಯ್ಕೆಯಾಗಿರುವ ಸುದ್ದಿ ಇದೀಗ ಹೊರಬಿದ್ದಿದೆ.
ದುನಿಯಾ ವಿಜಯ್ ಇದೇ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ “ಸಲಗ’ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಮುಗಿಯುವ ಹಂತ ತಲುಪಿದ್ದು, ಜೂನ್ 6ರಂದು ಅದ್ಧೂರಿಯಾಗಿ ಮುಹೂರ್ತವನ್ನು ನೆರವೇರಿಸುವ ಮೂಲಕ ಚಿತ್ರೀಕರಣಕ್ಕೆ ಹೊರಡಲಿದೆ.
ಈಗಾಗಲೇ ಚಿತ್ರದ ಕಲಾವಿದರು, ತಂತ್ರಜ್ಞರ ಅಂತಿಮ ಆಯ್ಕೆ ನಡೆಸುತ್ತಿರುವ ಚಿತ್ರತಂಡ, “ಸಲಗ’ ಚಿತ್ರಕ್ಕೆ ಸಂಜನಾ ಆನಂದ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದೆ. ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.