ಯಶ್‌ಗೆ ನಾಯಕಿಯಾಗಿ ಶ್ರೀನಿಧಿ
Team Udayavani, Jan 2, 2017, 10:59 AM IST
ಅಂತೂ ಇಂತೂ ಯಶ್ ಅಭಿನಯದ “ಕೆಜಿಎಫ್’ ಚಿತ್ರಕ್ಕೆ ನಾಯಕಿ ಫಿಕ್ಸ್ ಆಗಿದೆ. ಈ ಹಿಂದೆ ಯಶ್‌ಗೆ ರಾಧಿಕಾ ಪಂಡಿತ್ ನಾಯಕಿಯಾಗಲಿದ್ದಾರಂತೆ. ಅವರ ಬದಲು ಇನ್ಯಾರೋ ಹೊಸ ಹುಡುಗಿಯೊಬ್ಬಳು ನಾಯಕಿ ಆಗುತ್ತಿದ್ದಾರಂತೆ, ಅವರಂತೆ, ಇವರಂತೆ ಎಂಬಿತ್ಯಾದಿ ಸುದ್ದಿಗಳೆಲ್ಲಾ ಹರಿದಾಡುತ್ತಿದ್ದವು. ಈಗ ಆ ಎಲ್ಲಾ ಅಂತೆಕಂತೆಗಳ ಮಾತುಗಳಿಗೆ ಚಿತ್ರತಂಡ ಬ್ರೇಕ್ ಹಾಕಿದೆ.
ಹೌದು, “ಕೆಜಿಎಫ್’ ಚಿತ್ರಕ್ಕೆ ಹೊಸ ಹುಡುಗಿಯೊಬ್ಬಳನ್ನು ನಾಯಕಿಯನ್ನಾಗಿ ಆಯ್ಕೆ ಮಾಡುವ ಮೂಲಕ ಎಲ್ಲಾ ಗೊಂದಲಗಳನ್ನು ಬಗೆಹರಿಸಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಅಂದಹಾಗೆ, ಆ ಹುಡುಗಿ ಬೇರಾರೂ ಅಲ್ಲ, ಶ್ರೀನಿಧಿ ಶೆಟ್ಟಿ. “ಕೆಜಿಎಫ್’ ಚಿತ್ರದ ಮೂಲಕ ಶ್ರೀನಿಧಿ ಶೆಟ್ಟಿ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಶ್ರೀನಿಧಿ ಶೆಟ್ಟಿ, ಮಾಡೆಲ್ ಕ್ಷೇತ್ರದಿಂದ ಬಂದವರು.
ಈಗಾಗಲೇ ಶ್ರೀನಿಧಿ ಶೆಟ್ಟಿ ಮಿಸ್ ಮಿಸ್‌ಸುಪ್ರನ್ಯಾಷನಲ್ 2016 ಮತ್ತು ಮಿಸ್ ದಿವಾ 2016 ಸೌಂದರ್ಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮೂಲತಃ ಮಂಗಳೂರಿನ ಬೆಡಗಿಯಾಗಿರುವ ಶ್ರೀನಿಧಿ ಶೆಟ್ಟಿ, 2015 ರಲ್ಲಿ ಮಣಪ್ಪುರಂ ಮಿಸ್ ಸೌತ್ ಇಂಡಿಯಾ ಬ್ಯೂಟಿ ಕಾಂಟೆಸ್ಟ್ ಆಗಿ ಭಾಗವಹಿಸಿ ಮಿಸ್ ಕರ್ನಾಟಕ ಮತ್ತು ಮಿಸ್‌ಬ್ಯೂಟಿಫುಲ್ ಸ್ಟೈಲ್ ಪ್ರಶಸ್ತಿ ಗೆದ್ದಿದ್ದರು. ಶ್ರೀನಿಧಿ ಶೆಟ್ಟಿ ಯಶ್ ಅವರ ಅಭಿಮಾನಿಯಂತೆ.
ಈಗ ಯಶ್ ಚಿತ್ರಕ್ಕೆ ನಾಯಕಿಯಾಗಿದ್ದಾರೆ. ಇನ್ನು, “ಉಗ್ರಂ’ ನಂತರ ಪ್ರಶಾಂತ್ ನೀಲ್ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಒಂದು ಕಡೆ ಯಶ್ ಹೀರೋ, ಇನ್ನೊಂದು ಕಡೆ ಪ್ರಶಾಂತ್ ನೀಲ್ ನಿರ್ದೇಶಕರು. ಇಬ್ಬರೂ ಯಶಸ್ಸು ಕಂಡವರು. ಈಗ ಇಬ್ಬರ ಕಾಂಬಿನೇಷನ್‌ನಲ್ಲಿ “ಕೆಜಿಎಫ್’ ಸೆಟ್ಟೇರುತ್ತಿದೆ. ವಿಜಯ್ ಕಿರಗಂದೂರು ಚಿತ್ರದ ನಿರ್ಮಾಪಕರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.