ಪಂಟಗೆ ಸಿಕ್ತು ಸೊಂಟ
Team Udayavani, Jun 14, 2017, 11:58 AM IST
ಎಸ್. ನಾರಾಯಣ್ ನಿರ್ದೇಶನದ “ಪಂಟ’ ರಿಲೀಸ್ಗೆ ರೆಡಿಯಾಗಿ, ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿ ನಿಂತಿರುವಾಗಲೇ ಮುಂದಕ್ಕೆ ಹೋಗಿದ್ದ ವಿಷಯ ಎಲ್ಲರಿಗೂ ಗೊತ್ತೇ ಇದೆ. ಅದಕ್ಕೆ ಕಾರಣ, “ಕುಲುಕು ಕಲುಕು’ ಎಂಬ ಐಟಂ ಸಾಂಗು! ಹೌದು, ಆ ಐಟಂ ಸಾಂಗ್ಗೂ ಚಿತ್ರ ಬಿಡುಗಡೆ ಮುಂದೆ ಹೋಗುವುದಕ್ಕೂ ಏನು ಕಾರಣ ಅಂತ ಕೇಳಬಹುದು. ವಿಷಯ ಇರೋದೇ ಇಲ್ಲಿ. ಚಿತ್ರದಲ್ಲಿ ನಾರಾಯಣ್ “ಕುಲುಕು ಕುಲುಕು’ ಎಂಬ ಐಟಂ ಹಾಡು ಬರೆದಿದ್ದರು.
ಆದರೆ, ಆ ಹಾಡನ್ನು ಚಿತ್ರೀಕರಿಸುವುದು ಬೇಡ ಅಂತೆನಿಸಿ, ಆ ಹಾಡು ಕೈ ಬಿಟ್ಟು, ಸಿನಿಮಾ ರಿಲೀಸ್ಗೆ ಅಣಿಯಾಗಿದ್ದರು. ಅದೇ ವೇಳೆ, ಯೋಗರಾಜ್ಭಟ್ ಬರೆದ “ಅಲ್ಲಾಡ್ಸು ಅಲ್ಲಾಡ್ಸು’ ಹಾಡು ಸಿಕ್ಕಾಪಟ್ಟೆ ಹಿಟ್ ಆಗೋಯ್ತು. ಇದಕ್ಕಿಂತ ಮೊದಲೇ ನಾರಾಯಣ್ “ಕುಲುಕು ಕುಲುಕು’ ಎಂಬ ಹಾಡು ಬರೆದಿದ್ದರೂ, ಅದನ್ನು ಚಿತ್ರದಲ್ಲಿ ಅಳವಡಿಸಿರಲಿಲ್ಲ. ಆದರೆ ನಿರ್ಮಾಪಕ ಸುಬ್ರಹ್ಮಣ್ಯಂ ಅವರಿಗೆ ಆ ಹಾಡು ಬೇಕಿತ್ತು. ಏನಾದರೂ ಸರಿ, ಆ ಹಾಡನ್ನು ಚಿತ್ರದಲ್ಲಿ ಬಳಸಬೇಕು ಅಂತ ನಿರ್ಮಾಪಕರು, ಬೇಡ ಅಂತ ನಿರ್ದೇಶಕರು.
ಕೊನೆಗೆ ನಿರ್ಮಾಪಕರಿಗೆ ಮಣಿದು, ನಾರಾಯಣ್ ಹಾಡನ್ನು ಚಿತ್ರೀಕರಿಸಲು ಹೊರಟರು. ಆ ಟೈಮ್ನಲ್ಲಿ ನಾಯಕ ಅನೂಪ್ ರೇವಣ್ಣ ವಿದೇಶಕ್ಕೆ ಹೋಗಿದ್ದರು. ಅವರು ಬರೋವರೆಗೆ ಕಾದು, ಆ ಹಾಡನ್ನು ಚಿತ್ರೀಕರಿಸಿ ಈಗ ಜೂ.23 ಕ್ಕೆ ರಿಲೀಸ್ ಮಾಡಲು ತಯಾರಿ ನಡೆಸಿದ್ದಾರೆ. ಈಗ ವಿಷಯ ಇದಲ್ಲ. ನಾರಾಯಣ್ ಬರೆದ “ಕುಲುಕು ಕುಲುಕು’ ಹಾಡಲ್ಲಿ “ತಿಥಿ’ ಖ್ಯಾತಿಯ ಗಡ್ಡಪ್ಪ ಹಾಗೂ ಸೆಂಚುರಿಗೌಡರು ಸ್ಟೆಪ್ ಹಾಕಿದ್ದಾರೆ. ಸಖತ್ ಜೋಶ್ ಇರುವ ಆ ಹಾಡಿಗೆ ಜೋಶ್ನಲ್ಲೇ ಕುಣಿದಿದ್ದಾರೆ.
ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಹಾಕಿದ್ದ ಸೆಟ್ನಲ್ಲಿ ಮೂರು ದಿನಗಳ ಕಾಲ ಆ ಕಲರ್ಫುಲ್ ಸಾಂಗ್ ಚಿತ್ರೀಕರಣಗೊಂಡಿದೆ. ಆ ಹಾಡಲ್ಲಿ ತಾರಾ ಶುಕ್ಲ ಎಂಬ ಡ್ಯಾನ್ಸರ್ ಜತೆ ಗಡ್ಡಪ್ಪ ಮತ್ತು ಸೆಂಚುರಿ ಗೌಡ ಅವರು ಸ್ಟೆಪ್ ಹಾಕಿದ್ದಾರೆ. ಅನೂಪ್ ರೇವಣ್ಣ, ವಿಶ್ವ ಕೂಡ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಮೊದಮೊದಲು ಹಾಡು ಬೇಡ ಅಂತ ಸುಮ್ಮನಿದ್ದ ನಾರಾಯಣ್ಗೆ, ಈಗ ಆ ಹಾಡು ನೋಡಿ ಖುಷಿಯಾಗಿದೆ.
ಕಾರಣ, ಸೆಟ್ನಲ್ಲಿ ಗಡ್ಡಪ್ಪ, ಸೆಂಚುರಿ ಗೌಡ ಅವರು ಉತ್ಸಾಹದಿಂದ ಹಾಡು ಗುನುಗುತ್ತ ಸ್ಟೆಪ್ ಹಾಕಿದ್ದು ಮತ್ತು ಎಲ್ಲರೂ ಆ ಹಾಡಿನ ಬಗ್ಗೆ ಗುಣಗಾನ ಮಾಡಿದ್ದು. ಅದೇನೆ ಇರಲಿ, ಮಾಲೂರು ಶ್ರೀನಿವಾಸ್, ಆ ಗಡ್ಡಪ್ಪ, ಸೆಂಚುರಿ ಗೌಡರಿಗೂ ಐಟಂ ಸಾಂಗ್ನ ರುಚಿ ತೋರಿಸುವ ಮೂಲಕ ಗಾಂಧಿನಗರದ ಇನ್ನೊಂದು ಮುಖವನ್ನೂ ತೋರಿಸಿಬಿಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.