ಶಾಂತಿಸಾಗರ ಮಹಾರಾಜರ ಜೀವನ ಚಿತ್ರ
Team Udayavani, Sep 11, 2018, 11:28 AM IST
ಹಲವು ಮಹನೀಯರ ಜೀವನ ಚರಿತ್ರೆ ಕುರಿತು ಸಾಕಷ್ಟು ಚಿತ್ರಗಳು ಬಂದಿವೆ. ಈಗಲೂ ಬರುತ್ತಲೇ ಇವೆ. ಆ ಸಾಲಿಗೆ ಈಗ “ಸ್ವಸ್ತಿ’ ಎಂಬ ಹೊಸ ಚಿತ್ರವೊಂದು ಸದ್ದಿಲ್ಲದೆಯೇ ಶುರುವಾಗಿ, ಇದೀಗ ಚಿತ್ರೀಕರಣನ್ನು ಪೂರೈಸಿದೆ. ಈ ಚಿತ್ರಕ್ಕೆ ರಾಜು ಪಾಟೀಲ್ ನಿರ್ದೇಶಕರು. ನಿರ್ಮಾಣ ಕೂಡ ಅವರದೇ. ಇದು ಇಪ್ಪತ್ತನೇ ಶತಮಾನದ ಕಥೆ. ಜೈನ ಧರ್ಮದ ಪ್ರಥಮ ಆಚಾರ್ಯ ಶ್ರೀ ಶಾಂತಿಸಾಗರ ಮಹಾರಾಜರ ಜೀವನ ಆಧಾರಿತ ಚಿತ್ರ. ರಾಜು ಪಾಟೀಲ್ ಈ ಹಿಂದೆ “ಸುನಾಮಿ’ ಎಂಬ ಚಿತ್ರ ನಿರ್ಮಿಸಿ, ನಟಿಸಿದ್ದರು.
“ಸ್ವಸ್ತಿ’ ಕನ್ನಡ, ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಾಣವಾಗಿರುವುದು ವಿಶೇಷ. ಶ್ರೀ ಶಾಂತಿಸಾಗರ ಮಹಾರಾಜರ ಜೀವಿತಾವಧಿಯ 1872-1955 ರ ಮಧ್ಯದಲ್ಲಿ ನಡೆಯುವ ಕಥೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಭೋಜ್ ಗ್ರಾಮದ ಸಾತಗೌಡ ಪಾಟೀಲರು ಸಂಸಾರ ತ್ಯಾಗ ಮಾಡಿ ಮುನಿ ದೀಕ್ಷೆ ಪಡೆದು ಆಚಾರ್ಯ ಶಾಂತಿಸಾಗರರಾಗುತ್ತಾರೆ. ಆಮೇಲೆ ಏನೆಲ್ಲಾ ಆಗುತ್ತೆ ಎಂಬುದು ಕಥಾಹಂದರ. ಈ ಚಿತ್ರದಲ್ಲಿ ಶಾಂತಿಸಾಗರ ಮಹಾರಾಜರ ಪಾತ್ರವನ್ನು ನಿರ್ದೇಶಕ ರಾಜು ಪಾಟೀಲ್ ನಿರ್ವಹಿಸುತ್ತಿದ್ದಾರೆ.
ಉಳಿದಂತೆ ದತ್ತಣ್ಣ, ಬಿರಾದರ್, ಡಿಂಗ್ರಿ ನಾಗರಾಜ್, ಜಯಣ್ಣ, ಶಂಕರ್ ಪಾಟೀಲ್, ಶೃಂಗೇರಿ ರಾಮಣ್ಣ , ಕೆ.ಎಲ್.ಕುಂದರಗಿ, ವಿದ್ಯಾ, ಮಾಧುರಿ ಹಾಗು ಶೃತಿ ಇತರರು ನಟಿಸುತ್ತಿದ್ದಾರೆ. ಬೆಂಗಳೂರು, ತುಮಕೂರು, ಶ್ರವಣಬೆಳಗೊಳ, ಹುಕ್ಕೇರಿ, ಎಲಿಮುನೊಳ್ಳಿ, ಹಳಿಂಗಳಿಯ ಭದ್ರಗಿರಿ, ಬಾಹುಬಲಿ ಮತ್ತು ಕುಂತುಗಿರಿಯಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಕುಮಾರ್ ಈಶ್ವರ್ ಸಂಗೀತ ನೀಡಿದ್ದಾರೆ. ಪಿ.ಎಸ್. ಧರಣೇಂದ್ರಕುಮಾರ್, ಪ್ರಸನ್ನ ಜೈನ್ ಗೀತೆ ರಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.