“ಇರುವುದೆಲ್ಲ ಬಿಟ್ಟು’ ಮೇಘನಾ ಕಾಯ್ತಿರೋ ಸಿನಿಮಾವಿದು
Team Udayavani, Sep 18, 2018, 11:29 AM IST
ಮೇಘನಾ ರಾಜ್ ಸಿಕ್ಕಾಪಟ್ಟೆ ಎಕ್ಸೈಟ್ ಆಗಿದ್ದಾರೆ. ಅದು ಯಾವ ಮಟ್ಟಿಗೆಂದರೆ ಬಂದ ಅವಕಾಶಗಳನ್ನೆಲ್ಲಾ ಸೈಡಿಗಿಟ್ಟು ಸಿನಿಮಾವೊಂದರ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಅಷ್ಟಕ್ಕೂ ಮೇಘನಾ ಅಷ್ಟೊಂದು ಇಷ್ಟಪಟ್ಟಿರುವ ಸಿನಿಮಾ ಯಾವುದೆಂದರೆ “ಇರುವುದೆಲ್ಲವ ಬಿಟ್ಟು’. ಹೌದು, “ಇರುವುದೆಲ್ಲವ ಬಿಟ್ಟು’ ಸಿನಿಮಾ ಬಗ್ಗೆ ಮೇಘನಾ ರಾಜ್ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಕಾರಣ ಪಾತ್ರ.
ಇತ್ತೀಚಿನ ದಿನಗಳಲ್ಲಿ ಮೇಘನಾಗೆ ಸಿಕ್ಕ ವಿಭಿನ್ನ ಪಾತ್ರಗಳಲ್ಲಿ “ಇರುವುದೆಲ್ಲವ ಬಿಟ್ಟು’ ಚಿತ್ರ ಒಂದಂತೆ. “ಎರಡ್ಮೂರು ಹೊಸ ಸಿನಿಮಾಗಳ ಕಥೆ ಕೇಳಿ ಓಕೆ ಮಾಡಿದ್ದೇನೆ. ಆದರೆ, “ಇರುವುದೆಲ್ಲವ ಬಿಟ್ಟು’ ಬಿಡುಗಡೆಯಾದ ಮೇಲೆ ಚಿತ್ರೀಕರಣಕ್ಕೆ ಹೋಗೋದೆಂದು ನಿರ್ಧರಿಸಿದ್ದೇನೆ. ಏಕೆಂದರೆ, ನಾನು ತುಂಬಾ ನಿರೀಕ್ಷೆ ಇಟ್ಟಿರುವ ಸಿನಿಮಾವಿದು. ನನ್ನದೇ ನಿರ್ಮಾಣ, ನಿರ್ದೇಶನದ ಸಿನಿಮಾವಾದರೆ ಎಷ್ಟು ಪ್ರೀತಿ, ಎಕ್ಸೈಟ್‌ಮೆಂಟ್ ಇರಬಹುದೋ, ಅದೇ ತರಹದ ಪ್ರೀತಿ ಈ ಸಿನಿಮಾ ಮೇಲೆ ಇದೆ.
ಅದಕ್ಕೆ ಕಾರಣ ಚಿತ್ರದ ಪಾತ್ರ. ಇಲ್ಲಿ ನಾನು ಪೂರ್ವಿ ಎನ್ನುವ ಪಾತ್ರ ಮಾಡಿದ್ದೇನೆ. ಸಂಬಂಧಗಳಿಗಿಂತ ಸಾಧನೆ ಮುಖ್ಯ ಎಂದುಕೊಂಡಿರುವ ಪಾತ್ರ. ಸಾಧನೆ ಮಾಡುತ್ತಾ ಹೋದಂತೆ ಸಂಬಂಧಗಳನ್ನು ಕಳೆದುಕೊಳ್ಳುವ ಹಾಗೂ ಆ ನಂತರದ ಘಟನೆಗಳ ಸುತ್ತ ನನ್ನ ಪಾತ್ರ ಸಾಗುತ್ತದೆ. 25 ರಿಂದ 35 ವಯಸ್ಸಿನ ಮಹಿಳೆಯರಿಗೆ ಈ ಪಾತ್ರ ಹೆಚ್ಚು ಹತ್ತಿರವಾಗುತ್ತದೆ’ ಎಂದು ಚಿತ್ರದ ಬಗ್ಗೆ ಖುಷಿಯಿಂದ ಹೇಳುತ್ತಾರೆ ಮೇಘನಾರಾಜ್.
ಇತ್ತೀಚೆಗೆ ಚಿತ್ರತಂಡ “ಇರುವುದೆಲ್ಲವ ಬಿಟ್ಟು’ ಎಂಬ ಸ್ಪರ್ಧೆಯೊಂದನ್ನು ಆಯೋಜಿಸಿತ್ತಂತೆ. ಒಂದಷ್ಟು ಮಂದಿಯಲ್ಲಿ, “ನೀವು ನಿಮ್ಮ ನಾಳಿನ ಎಲ್ಲಾ ಕಾರ್ಯಗಳನ್ನು ಬಿಟ್ಟು ಕುಟುಂಬ ಸಮೇತ ಸಿನಿಮಾ ನೋಡಲು ಬರಬೇಕೆಂಬುದು’ ಆ ಸ್ಪರ್ಧೆ. ಅದರಂತೆ ಒಂದಷ್ಟು ಮಂದಿ ಭಾನುವಾರದ ತಮ್ಮ ಕಾರ್ಯಗಳನ್ನೆಲ್ಲಾ ಬದಿಗೊತ್ತಿ ಕುಟುಂಬ ಸಮೇತರಾಗಿ “ಇರುವುದೆಲ್ಲವ ಬಿಟ್ಟು’ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಭಾಗಿಯಾದರಂತೆ.
ಸಿನಿಮಾ ನೋಡಿದ ಪ್ರತಿಯೊಬ್ಬರಿಂದಲೂ, “ಈ ಸಿನಿಮಾ ನಮ್ಮ ಜೀವನಕ್ಕೆ ತುಂಬಾ ಹತ್ತಿರವಾಗಿದೆ’ ಎಂಬ ಮಾತುಗಳು ಕೇಳಿಬಂದುವಂತೆ. ಇದು ಕೂಡಾ ಮೇಘನಾ ರಾಜ್‌ಗೆ “ಇರುವುದೆಲ್ಲವ ಬಿಟ್ಟು’ ಸಿನಿಮಾ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ. ಚಿತ್ರದಲ್ಲಿ ಗ್ಲಾಮರ್‌ಗಿಂತ ಹೆಚ್ಚಾಗಿ ಜೀವನಕ್ಕೆ ಸಂಬಂಧಪಟ್ಟ ಅಂಶಗಳ ಸುತ್ತ ಈ ಸಿನಿಮಾ ಸಾಗಲಿದೆ ಎನ್ನುವುದು ಮೇಘನಾ ರಾಜ್ ಮಾತು.
ಎಲ್ಲಾ ಓಕೆ, ಮದುವೆಯಾದ ಮೇಲೆ ಕಥೆಯ ಆಯ್ಕೆಯಲ್ಲಿ ಚಿರು ಪಾತ್ರವಿದೆಯಾ ಎಂದರೆ, ಇಲ್ಲ ಎನ್ನುತ್ತಾರೆ ಮೇಘನಾ. “ಕಥೆಯ ಆಯ್ಕೆ ನನ್ನದೇ. ಅವರು, “ಪಾತ್ರ ನಿನಗೆ ಹೊಂದಿಕೆಯಾದರೆ ಮಾಡು’ ಎನ್ನುತ್ತಾರೆ. ಅದು ಬಿಟ್ಟರೆ ಸಿನಿಮಾ ಬಗೆಗಿನ ಸಹಜ ಚರ್ಚೆಗಳು ನಡೆಯುತ್ತವೆಯೇ ಹೊರತು ಉಳಿದಂತೆ ನನ್ನ ಸಿನಿಮಾ ಆಯ್ಕೆಯಲ್ಲಿ ನಾನು ಸ್ವತಂತ್ರಳು’ ಎನ್ನುತ್ತಾರೆ ಮೇಘನಾ ರಾಜ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮೊದಲು ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.