YASH; ದೊಡ್ಡ ಅಪ್ಡೇಟ್ ಕೊಟ್ಟ ರಾಕಿಂಗ್ ಸ್ಟಾರ್; ಯಶ್19 ಗೆ ಇವರೇ ಪ್ರೊಡ್ಯೂಸರ್
Team Udayavani, Dec 4, 2023, 10:57 AM IST
ಬೆಂಗಳೂರು: ಕಳೆದೊಂದು ವರ್ಷದಿಂದ ಕೇವಲ ಕನ್ನಡಿಗರು ಮಾತ್ರವಲ್ಲದೆ, ಇಡೀ ದೇಶದ ಜನರು ಕೇಳುತ್ತಿದ್ದ ಪ್ರಶ್ನೆ ಯಶ್ ಅವರ ಮುಂದಿನ ಸಿನಿಮಾ ಯಾವಾಗ ಎಂದು. ಕೆಜಿಎಫ್-2 ಚಿತ್ರದ ನಂತರ ಯಾವುದೇ ಸಿನಿಮಾ ಘೋಷಣೆ ಮಾಡದ ರಾಕಿಂಗ್ ಸ್ಟಾರ್ ಇದೀಗ ದೊಡ್ಡ ಅಪ್ಡೇಟ್ ನೀಡಿದ್ದಾರೆ.
ಯಶ್ ಅವರು ನರ್ತನ್ ಜೊತೆ ಸಿನಿಮಾ ಮಾಡುತ್ತಾರೆ, ಯಶ್ ಅವರು ಬಾಲಿವುಡ್ ಸಿನಿಮಾ ಮಾಡುತ್ತಾರೆ, ಯಶ್ ಅವರು ಹಾಲಿವುಡ್ ನಲ್ಲಿ ಸಿನಿಮಾ ಮಾಡುತ್ತಾರೆ ಎಂದೆಲ್ಲಾ ಸುದ್ದಿಯಾಗಿತ್ತು. ಆದರೆ ಇದೀಗ ಸ್ವತಃ ಯಶ್ ತನ್ನ 19ನೇ ಸಿನಿಮಾದ ಬಗ್ಗೆ ದೊಡ್ಡ ಸುಳಿವು ನೀಡಿದ್ದಾರೆ.
ಡಿಸೆಂಬರ್ 8ರಂದು ಬೆಳಗ್ಗೆ 9.55ಕ್ಕೆ ಯಶ್ 19 ಸಿನಿಮಾದ ಬಗ್ಗೆ ತಿಳಿಸಲಾಗುವುದು ಎಂದು ಯಶ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಕೆವಿಎನ್ ಪ್ರೊಡಕ್ಷನ್ ನಲ್ಲಿ ಮುಂದಿನ ಸಿನಿಮಾ ಮಾಡುವುದಾಗಿ ಯಶ್ ತಿಳಿಸಿದ್ದಾರೆ.
ಯಶ್ ಅವರು ರವಿವಾರ ತನ್ನ ಸೋಷಿಯಲ್ ಮೀಡಿಯಾ ಡಿಪಿಯನ್ನು ಬದಲು ಮಾಡಿಕೊಂಡಿದ್ದರು. LOADING ಎಂದು ಬರೆದ ಪೋಸ್ಟರ್ ನ್ನು ಯಶ್ ಹಾಕಿದ್ದರು. ಇದು ದೊಡ್ಡ ಮಟ್ಟದ ಕ್ರೇಜ್ ಗೆ ಕಾರಣವಾಗಿತ್ತು.
It’s time… 8th December, 9:55 AM.
Stay tuned to @KvnProductions #Yash19 pic.twitter.com/stZYBspuxY— Yash (@TheNameIsYash) December 4, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.