ಕನ್ನಡ ಚಿತ್ರರಂಗದಲ್ಲಿ ನೀರವ ಮೌನ
Team Udayavani, Nov 27, 2018, 11:39 AM IST
ಕನ್ನಡ ಚಿತ್ರರಂಗದಲ್ಲಿ ನೀರವ ಮೌನ ಆವರಿಸಿದೆ. ಮನೆಯ ಯಜಮಾನನ್ನು ಕಳೆದುಕೊಂಡ ಸೂತಕದಲ್ಲಿದೆ ಚಂದನವನ. ಆ ಸೂತಕದ ಛಾಯೆ ಅಂಬರೀಶ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಚಿತ್ರರಂಗದ ಮಂದಿಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ಚಿತ್ರರಂಗದಲ್ಲಿ ಏನೇ ಸಮಸ್ಯೆ ಆದರೂ “ರೆಬೆಲ್‌ಸ್ಟಾರ್ ಇದ್ದಾರೆ, ಅವರು ಸರಿ ಮಾಡ್ತಾರೆ’ ಎಂದು ನಿಟ್ಟುಸಿರು ಬಿಡುತ್ತಿದ್ದ ಮಂದಿಗೆ ಮುಂದೆ ಹೇಗೋ ಎಂಬ ಪ್ರಶ್ನೆ ಕಾಡುತ್ತಿದೆ.
ಚಿತ್ರರಂಗದ ಹಾಗೂ ಚಿತ್ರರಂಗದ ಮಂದಿಯ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸುತ್ತಾ ಅಂಬರೀಶ್ ಚಿತ್ರರಂಗದ ಟ್ರಬಲ್‌ಶೂಟರ್ ಎನಿಸಿಕೊಂಡಿದ್ದೇ ಈ ಪ್ರಶ್ನೆಗೆ ಕಾರಣ. ಕಲರ್‌ಫುಲ್ ವ್ಯಕ್ತಿತ್ವದ, ಖಡಕ್ ನುಡಿಯ, ಮೃದು ಮನಸಿನ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿರುವ ಅಂಬರೀಶ್ ಕನ್ನಡ ಚಿತ್ರರಂಗದಲ್ಲಿದ್ದಾರೆ, ಎಲ್ಲರ ಜೊತೆ ಆತ್ಮೀಯವಾಗಿ ಬೆರೆಯುತ್ತಿದ್ದಾರೆಂಬುದೇ ಒಂದು ಹೆಮ್ಮೆಯಾಗಿತ್ತು.
ಅದಕ್ಕೆ ಪೂರಕವಾಗಿ ಅಂಬಿ ಕೂಡಾ ಮುನಿಸಿಕೊಳ್ಳದೇ, ತುಂಬಾ ಪ್ರೀತಿಯಿಂದಲೇ ಚಿತ್ರರಂಗದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ಅಂಬರೀಶ್‌ಗೆ ಸ್ಟಾರ್‌ಗಳು ಎಷ್ಟು ಆತ್ಮೀಯರಾಗಿದ್ದರೋ, ಚಿತ್ರರಂಗಕ್ಕೆ ಆಗಷ್ಟೇ ಬಂದ ಹೊಸಬರು ಕೂಡಾ ಅಂಬಿಯವರನ್ನು ಪ್ರೀತಿಸುತ್ತಿದ್ದರು. ಆ ಪ್ರೀತಿಗೆ ಕಾರಣ ಕನ್ನಡ ಚಿತ್ರರಂಗಕ್ಕೆ ಬರುತ್ತಿದ್ದ ಹೊಸಬರಿಗೆ ಅಂಬರೀಶ್ ನೀಡುತ್ತಿದ್ದ ಪ್ರೋತ್ಸಾಹ. ಹೊಸಬರ ಅದೆಷ್ಟೋ ಸಿನಿಮಾ ಕಾರ್ಯಕ್ರಮಗಳಿಗೆ ಹೋಗಿ ಪ್ರೋತ್ಸಾಹ ನೀಡುತ್ತಿದ್ದರು.
ತಮ್ಮ ಸಿನಿಮಾ ಮುಹೂರ್ತದ ಮೊದಲ ಆಹ್ವಾನ ಪತ್ರಿಕೆಯನ್ನು ಅಂಬರೀಶ್ ಅವರಿಗೆ ನೀಡಬೇಕು, ಅವರಿಂದ ಆಶೀರ್ವಾದ ಪಡೆಯಬೇಕು ಎಂದು ಬಯಸುತ್ತಿದ್ದ ಹೊಸಬರ ಮುಖ ಮಂಕಾಗಿದೆ. ನೀವೆಷ್ಟು ಸಂಪಾದಿಸಿದ್ದೀರಿ ಎನ್ನುವುದಕ್ಕಿಂತ ನೀವು ಸಂಪಾ ದಿಸಿದ ಅಭಿಮಾನ, ಸ್ನೇಹ, ಆತ್ಮೀಯತೆ ಎಂಥದ್ದು ಎಂಬುದು ಮುಖ್ಯವಾಗುತ್ತದೆ.
ಅಂಬರೀಶ್ ಸಂಪಾದಿಸಿದ ಜನರ ಸ್ನೇಹ, ಅಭಿಮಾನ, ಪ್ರೀತಿ ಯಾವ ಮಟ್ಟದ್ದು, ಅವರ ವ್ಯಕ್ತಿತ್ವ ಏನು ಎಂಬುದಕ್ಕೆ ಅಂಬರೀಶ್ ಅವರ ಅಂತಿಮ ಯಾತ್ರೆ ಸಾಕ್ಷಿಯಾಯಿತು. ಶನಿವಾರ ರಾತ್ರಿ ಅಂಬರೀಶ್ ಅವರ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ ಅವರ ಅಂತಿಮ ದರ್ಶನ ಪಡೆಯಲು ಲಕ್ಷೋಪಾದಿಯಲ್ಲಿ ಅಭಿಮಾನಿಗಳು, ಆಪ್ತರು, ಹಿತೈಷಿಗಳು ಆಗಮಿಸಿದರು. ಅದಕ್ಕೆ ಕಾರಣ ಅಂಬಿ ಅವರ ನೇರನಡೆ, ನುಡಿ ಹಾಗೂ ವರ್ಣರಂಜಿತ ವ್ಯಕ್ತಿತ್ವ.
ಅದರಲ್ಲೂ ಚಿತ್ರರಂಗದ ಮಂದಿ ಅಂಬರೀಶ್ ಅವರ ಮೇಲಿಟ್ಟಿರುವ, ಪ್ರೀತಿ, ಅಭಿಮಾನ ಅವರ ಅಂತ್ಯಕ್ರಿಯೆಯಲ್ಲಿ ಎದ್ದು ಕಾಣುತ್ತಿತ್ತು. ತಮ್ಮ ಕುಟುಂಬದ ಯಜಮಾನನ್ನು ಸಕಲ ಗೌರವಗಳೊಂದಿಗೆ ಕಳುಹಿಸಿಕೊಡಬೇಕು ಎಂಬ ಭಾವದೊಂದಿಗೆ ಕನ್ನಡ ಚಿತ್ರರಂಗದ ಬಹುತೇಕ ಎಲ್ಲರೂ ತೊಡಗಿಸಿಕೊಂಡಿದ್ದರು. ಪ್ರತಿಯೊಬ್ಬರು ಯಜಮಾನನ್ನು ಕಳೆದುಕೊಂಡ ನೋವು, ಅನಾಥ ಭಾವದೊಂದಿಗೆ ರೆಬೆಲ್‌ಸ್ಟಾರ್‌ಗೆ ಅಂತಿಮ ನಮನ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.