ಇಂದಿನಿಂದ “ಭೂಮಿ ತಾಯಾಣೆ’ ಆರಂಭ
Team Udayavani, Oct 14, 2019, 3:00 AM IST
ಸದ್ಯ ಕಿರುತೆರೆ ಪ್ರೇಕ್ಷಕರು ಹಳ್ಳಿ ಸೊಬಗು, ಗ್ರಾಮೀಣ ಸೊಗಡಿನ ಕಥೆಗಳತ್ತ ಹೆಚ್ಚು ಆಸಕ್ತರಾಗುತ್ತಿದ್ದಾರೆ. ಇದಕ್ಕೆ ತಕ್ಕಂತೆ ವಾಹಿನಿಗಳು ಕೂಡ ಗ್ರಾಮೀಣ ಹಿನ್ನೆಲೆಯ ಕಾರ್ಯಕ್ರಮಗಳಿಗೆ ಹೆಚ್ಚು ಮಹತ್ವ ಕೊಡುತ್ತಿವೆ. ಈಗ ಕಲರ್ ಸೂಪರ್ ವಾಹಿನಿ ಕೂಡ ಇಂಥದ್ದೇ ಕಥಾಹಂದರದ “ಭೂಮಿ ತಾಯಾಣೆ’ ಧಾರಾವಾಹಿಯನ್ನು ಪ್ರೇಕ್ಷಕರ ಮುಂದೆ ತರುವ ತಯಾರಿ ಮಾಡಿಕೊಳ್ಳುತ್ತಿದೆ.
ಒಬ್ಬ ಹಳ್ಳಿ ಹುಡುಗಿಯ ಮುಗ್ಧತೆ, ಆಕೆಯ ಬದುಕಿನ ಏರಿಳಿತಗಳು, ತನ್ನ ಅಕ್ಕರೆ ತುಂಬಿದ ಮನಸ್ಸಿನಲ್ಲೇ ಆಕೆ ಸಂಬಂಧಗಳನ್ನು ಕಾಯ್ದುಕೊಳ್ಳುವ ರೀತಿ ಮೊದಲಾದ ಸಂಗತಿಗಳ ಸುತ್ತ ನಡೆಯುವ ಕಥೆ ಭೂಮಿ ತಾಯಾಣೆ ಧಾರಾವಾಹಿಯಲ್ಲಿದೆ. ಇದೇ ಅ. 14ರಿಂದ ಸಂಜೆ 7ಕ್ಕೆ ಪ್ರತೀ ಸೋಮವಾರದಿಂದ ಶನಿವಾರದವರೆಗೆ ಪ್ರಸಾರವಾಗಲಿರುವ “ಭೂಮಿ ತಾಯಾಣೆ’ ಧಾರಾವಾಹಿಯಲ್ಲಿ ನವನಟಿ ಅಶ್ವಿನಿ, ಅಭಿನವ್, ಶರತ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಅಶ್ವಿನಿ ಗೌಡ, ಮೈಕೋ ಮಂಜು, ಮಹಾಲಕ್ಷ್ಮೀ, ಶ್ವೇತಾ ಶ್ರೀನಿವಾಸ್, ಅಂಬರೀಶ್ ಸಾರಂಗಿ, ಸುಮಾ ಶಾಸ್ತ್ರಿ ಮುಂತಾದವರು ಇತರೆ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ರಘು ಚರಣ್ ತಿಪಟೂರು ಭೂಮಿ ತಾಯಾಣೆ ಧಾರಾವಾಹಿಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಪ್ರಧಾನ ನಿರ್ದೇಶನವನ್ನ ಮಾಡುತ್ತಿದ್ದು, ಪಿ.ಎಲ್. ಸೋಮಶೇಖರ ಧಾರಾವಾಹಿಯ ನಿರ್ಮಾಣದ ಹೊಣೆವಹಿಸಿಕೊಂಡಿದ್ದಾರೆ. ಮಂಡ್ಯ, ಪಾಂಡವಪುರ, ಚನ್ನಪಟ್ಟಣ, ಶ್ರೀರಂಗಪಟ್ಟಣ, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಚಿತ್ರೀಕರಣ ಭೂಮಿ ತಾಯಾಣೆ ಚಿತ್ರೀಕರಣ ನಡೆಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.