ಜಿಲೇಬಿ ಕಥೆ ಹೇಳಿದ ಪೂಜಾ
Team Udayavani, Jan 24, 2017, 11:30 AM IST
ಪೂಜಾ ಗಾಂಧಿ ಎಲ್ಲೋ ಕಳೆದು ಹೋದ್ರು ಅನ್ನೋ ಸುದ್ದಿ ಗಾಂಧಿನಗರದಲ್ಲಿ ಸುಳಿದಾಡಿದ್ದು ನಿಜ. “ಅಭಿನೇತ್ರಿ’ ಬಳಿಕ ಪೂಜಾ ಗಾಂಧಿ ಸದ್ದು ಮಾಡಲಿಲ್ಲ ಅನ್ನೋದು ಅಷ್ಟೇ ನಿಜ. ಈಗ ಅವರು “ಜಿಲೇಬಿ’ ಹಿಡಿದು ನಿಂತಿದ್ದಾರೆ! ಹೀಗೆಂದರೆ, ಅಚ್ಚರಿ ಸಹಜ. ಆದರೆ, ಪೂಜಾಗಾಂಧಿ “ಜಿಲೇಬಿ’ ಹಿಡಿಯೋಕೆ ಕಾರಣ. ಮತ್ತದೇ “ಜಿಲೇಬಿ’. ಹೌದು, ಲಕ್ಕಿ ಶಂಕರ್ ನಿರ್ದೇಶನದ “ಜಿಲೇಬಿ’ ಚಿತ್ರ ಸದ್ದಿಲ್ಲದೆಯೇ ಚಿತ್ರೀಕರಣಗೊಂಡು, ಇದೀಗ ಬಿಡುಗಡೆಗೆ ರೆಡಿಯಾಗಿದೆ.
“ಜಿಲೇಬಿ’ ಅಂದಾಕ್ಷಣ, ಹಾಟ್ ಸ್ವೀಟ್ ರುಚಿಯ ನೆನಪಾಗೋದು ದಿಟ. ಇದೊಂದು ಪಕ್ಕಾ ಮನರಂಜನಾತ್ಮಕ ಸಿನಿಮಾ ಅನ್ನೋದು ಲಕ್ಕಿ ಶಂಕರ್ ಮಾತು. ಇತ್ತೀಚೆಗೆ ಚಿತ್ರದ ಟ್ರೇಲರ್ ಕೂಡ ಬಿಡುಗಡೆ ಮಾಡಲಾಯಿತು. ಅಂದಹಾಗೆ, ಪೂಜಾಗಾಂಧಿ ಅವರ “ಜಿಲೇಬಿ’ಯಲ್ಲಿ ಯಾವುದೇ ಸಂದೇಶವಿಲ್ಲ. ಆದರೆ, ಮನರಂಜನೆಗೆ ಮಾತ್ರ ಯಾವುದೇ ಕಡಿಮೆ ಮಾಡಿಲ್ಲವಂತೆ. ಪೂಜಾಗಾಂಧಿ ಅವರಿಲ್ಲಿ ತುಂಬಾನೇ ಎಂಜಾಯ್ ಮಾಡಿಕೊಂಡು ಕೆಲಸ ಮಾಡಿದ್ದಾರೆ ಎಂಬುದು ಚಿತ್ರತಂಡದ ಮಾತು.
ಅವರಿಲ್ಲಿ ಹೊಸ ತರಹದ ಪಾತ್ರ ಮಾಡುವ ಮೂಲಕ ಅವರ ಅಭಿಮಾನಿಗಳಿಗೊಂದು ಹೊಸ ವರ್ಷದ ಗಿಫ್ಟ್ ಈ “ಜಿಲೇಬಿ’ಯಂತೆ. ಪೂಜಾಗಾಂಧಿ ಇಲ್ಲಿ ತುಂಬಾ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಅವರೊಂದಿಗೆ ಮೂವರು ಹುಡುಗರು ಕಾಣಿಸಿಕೊಳ್ಳಲಿದ್ದಾರಂತೆ. ಆ ಸನ್ನಿವೇಶಗಳೆಲ್ಲವೂ ಫನ್ನಿಯಾಗಿರಲಿವೆ ಎಂಬುದು ಅವರ ಮಾತು. ಯಶಸ್ ಸೂರ್ಯ ಅವರಿಗೂ ಇಲ್ಲೊಂದು ಹೊಸ ತರಹದ ಪಾತ್ರ ಸಿಕ್ಕಿದೆಯಂತೆ.
ಕಾಮಿಡಿ ಮಾಡೋದು ತುಂಬಾ ಸುಲಭದ ಕೆಲಸವಲ್ಲ ಎಂಬುದು ಯಶಸ್ ಸೂರ್ಯ ಮಾತು. ವಿಜಯ್ ಚೆಂಡೂರ್ ಅವರ ಕಾಮಿಡಿ ಕೂಡ ಇಲ್ಲಿ ಹೈಲೆಟ್ ಆಗಿದೆಯಂತೆ. ನಿರ್ದೇಶಕರು ಕೊಟ್ಟ ಕೆಲ ಸನ್ನಿವೇಶಗಳಿಗೆ ಇನ್ನಷ್ಟು ಕಾಮಿಡಿ ಪಂಚ್‌ಗಳನ್ನು ಕೊಟ್ಟು ಕ್ಯಾಮೆರಾ ಮುಂದೆ ಕೆಲಸ ಮಾಡಿದ್ದಾರಂತೆ. ಉಳಿದಂತೆ ಇನ್ನೊಬ್ಬ ನಟ ನಾಗೇಂದ್ರ ಕೂಡ ಇಲ್ಲಿ ನಟಿಸಿದ್ದು, ಅವರಿಗೂ ಇದು ಹೊಸ ಅನುಭವ ಕಟ್ಟಿಕೊಟ್ಟಿದೆಯಂತೆ.
ಇನ್ನು, ಇಲ್ಲಿ ರಾಕ್‌ಲೈನ್ ಸುಧಾಕರ್ ಅವರದು ಚಪಲ ಚೆನ್ನಿಗರಾಯನ ಪಾತ್ರವಂತೆ. ಎಂದಿನಂತೆ, ಇಲ್ಲೂ ಅವರ ಹಾಸ್ಯ ಜರ್ನಿ ಮುಂದುವರೆದಿದೆಯಂತೆ. ನಿರ್ಮಾಪಕ ಶಿವು ಕಬ್ಬಿn ಅವರಿಗೆ ಒಳ್ಳೆಯ ಟೀಮ್ ಜತೆ ಕೆಲಸ ಮಾಡಿದ ಖುಷಿ. ಅದೇ ಖುಷಿಯಲ್ಲಿ ಅವರು ಸಿನಿಮಾವನ್ನು ಬಿಡುಗಡೆ ಮಾಡಲು ರೆಡಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ
BJP Politics: ಬಿ.ಎಸ್.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ
Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ “ಗುರಿ’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.