ನ.1ರಿಂದ ಸಲಗ ಯಶಸ್ಸು ಅಭಿಯಾನ
Team Udayavani, Oct 29, 2021, 5:38 PM IST
ಮೈಸೂರು: ರಾಜ್ಯಾದ್ಯಂತ ಸಲಗ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಉತ್ತಮ ಪ್ರತಿಕ್ರಿಯೆ ಬಂದಿದೆ. ನ.1ರ ರಾಜ್ಯೋತ್ಸವ ದಂದು ಮೈಸೂರಿನಿಂದಲೇ ಸಲಗ ಯಶಸ್ಸು ಅಭಿಯಾನ ಆರಂಭಿ ಸುವುದಾಗಿ ನಟ, ನಿರ್ದೇಶಕ ದುನಿಯಾ ವಿಜಯ್ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದಲ್ಲಿ ಮೈಸೂರಿನ ಪ್ರತಿಭೆಗಳು ನಟಿಸಿದ್ದು, ಅವರೇ ಚಿತ್ರದ ಬೆನ್ನೆಲುಬು ಎಂದು ಹೇಳಿದರು. ನ.1 ರಾಜ್ಯೋತ್ಸವ ದಿನ ಮೈಸೂರಿನ ಸಲಗ ಚಿತ್ರ ಪ್ರದರ್ಶನವಿರುವ ಚಿತ್ರಮಂದಿರಗಳಲ್ಲಿ ಇಡೀ ಚಿತ್ರ ತಂಡ ಆಗಮಿಸಿ ಜನರನ್ನು ಭೇಟಿಯಾಗಲಿದೆ. ಸಲಗ ಪಾರ್ಟ್ -2 ಬಗ್ಗೆ ಸದ್ಯಕ್ಕೆ ಯೋಜನೆ ರೂಪಿ ಸಿಲ್ಲ ಮುಂದೆ ನೋಡೋಣ ಎಂದರು.
ಇದನ್ನೂ ಓದಿ;- ಗೋವಾ : ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಟಿಎಂಸಿ ಸೇರ್ಪಡೆಯಾದ ಲಿಯಾಂಡರ್ ಪೇಸ್
ಚಿತ್ರದಲ್ಲಿ ಬಾಲನಟರು ಮನೋಜ್ಞವಾಗಿ ಅಭಿನಯಿಸಿದ್ದು, ಬಾಲ ಕಲಾವಿದರನ್ನು ರಂಗಾಯಣ, ನಟನದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಚಿತ್ರದಲ್ಲಿ 18 ನಿಮಿಷ ಮಕ್ಕಳೇ ಬರುತ್ತಾರೆ ಎಂದು ತಿಳಿಸಿದರು. ಭೂಗತ ಲೋಕದ ಕುರಿತು ಚಿತ್ರವಿದ್ದು, ಮಕ್ಕಳ ಬದುಕು ಹಾಳಾಗಬಾರದು, ಅಂತೆಯೇ ಮಕ್ಕಳು ರೌಡಿಸಂ ಜೀವನಕ್ಕೆ ಪ್ರೇರಣೆ ಪಡೆಯಬಾರದೆಂಬ ದೃಷ್ಟಿಕೋನದಿಂದ ಚಿತ್ರವನ್ನು ಮಾಡಿದ್ದೇನೆ.
ಭೂಗತ ಲೋಕದ ಬಗ್ಗೆ ಚಿತ್ರವಾಗಿರುವುದರಿಂದ ಚಿತ್ರಕ್ಕೆ ಎ ಪ್ರಮಾಣ ಪತ್ರ ದೊರೆತಿದೆ. ಭೂಗತ ಲೋಕದ ಚಿತ್ರ ಎಂಬ ಕಾರಣಕ್ಕಾಗಿ ಚಿತ್ರದಲ್ಲಿ ಅಶ್ಲೀಲ ಸಂಭಾಷಣೆ ಇದೆ. ಚಿತ್ರ ಮಕ್ಕಳು ಸುಳ್ಳು ಹೇಳಿ ಹೇಗೆ ದಾರಿ ತಪ್ಪುತ್ತಾರೆ ಎಂಬುದನ್ನು ಹೇಳುತ್ತದೆ ಎಂದರು. ಜೀವನದಲ್ಲಿ ತಂದೆ ತಾಯಿಯೇ ದೇವರು, ಕೊನೆಗಾಲದಲ್ಲಿ ಅವರು ಮಕ್ಕಳಂತರಾಗುತ್ತಾರೆ. ಅವರನ್ನು ಮಕ್ಕಳಂತೆ ಆರೈಕೆ ಮಾಡಬೇಕು ಎಂದು ಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Vijay Hazare; ವಾಸುಕಿ,ಗೋಪಾಲ್ ಬೊಂಬಾಟ್ ಬೌಲಿಂಗ್; ಸೌರಾಷ್ಟ್ರ ವಿರುದ್ದ ಗೆದ್ದ ಕರ್ನಾಟಕ
ಗದಗ: ಮಾವು ಬಂಪರ್ ಬೆಳೆ ನಿರೀಕ್ಷೆ- ಬೆಳೆಗಾರರಿಗೆ ಸಂತಸ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.