ಮಹಾನುಭಾವರಿಗೆ ಸ್ಟಾರ್‌ಗಳ ಸ್ಪರ್ಶ
Team Udayavani, Oct 31, 2017, 10:35 AM IST
ಈಗಂತೂ ಹೊಸಬರ ಸಿನಿಮಾಗಳದ್ದೇ ಸುದ್ದಿ. ಅದರಲ್ಲೂ, ಹೊಸಬರು ಅಂದಾಕ್ಷಣ, ಕನ್ನಡದ ಬಹುತೇಕ ಸ್ಟಾರ್ ನಟರು ಪ್ರೀತಿಯಿಂದಲೇ ಅವರನ್ನು ಪ್ರೋತ್ಸಾಹಿಸುತ್ತಿರುವುದು ಹೊಸ ಬೆಳವಣಿಗೆಯೂ ಹೌದು. ಈಗಿಲ್ಲಿ ಹೇಳ ಹೊರಟಿರುವ ವಿಷಯ “ಮಹಾನುಭಾವರು’ ಚಿತ್ರದ್ದು. ಹೌದು, ಇದು ಸಂಪೂರ್ಣ ಹೊಸಬರು ಸೇರಿ ಮಾಡಿರುವ ಚಿತ್ರ.
ನವೆಂಬರ್‌ನಲ್ಲಿ ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾದಲ್ಲಿ ಹಲವು ವಿಶೇಷತೆಗಳಿವೆ. ಮೊದಲಿಗೆ ಪುನೀತ್‌ರಾಜ್‌ಕುಮಾರ್ ಹಾಗೂ ಶ್ರೀಮುರಳಿ ಇಬ್ಬರು ಒಂದೊಂದು ಹಾಡನ್ನು ಹಾಡುವ ಮೂಲಕ ಚಿತ್ರ ತಂಡವನ್ನು ಪ್ರೋತ್ಸಾಹಿಸಿದ್ದರು. ಇತ್ತೀಚೆಗೆ ಸಿನಿಮಾದ ಟ್ರೇಲರ್‌ವೊಂದನ್ನು ಸುದೀಪ್ ಅವರು ಬಿಡುಗಡೆ ಮಾಡುವ ಮೂಲಕ ಹೊಸಬರ ಕೆಲಸವನ್ನು ಮೆಚ್ಚಿಕೊಂಡಿದ್ದರು.
ಈಗ ಹೊಸ ಸುದ್ದಿಯೆಂದರೆ, ಪ್ರಜ್ವಲ್ ದೇವರಾಜ್, ಶರಣ್, ನೆನಪಿರಲಿ ಪ್ರೇಮ್, ಧನಂಜಯ್ ಮತ್ತು ಹರಿಪ್ರಿಯ ಅವರು ಚಿತ್ರದ ಲಿರಿಕಲ್ ವೀಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಹೊಸಬರ ಪ್ರಯತ್ನಕ್ಕೆ ಶುಭ ಹಾರೈಸಿದ್ದಾರೆ. ರಾಜೇಶ್‌ಕೃಷ್ಣ ಹಾಡಿದ “ಬರದ ಬೇಸಿಗೆಯಲ್ಲಿ’ ಹಾಡು ಕೇಳಿದ ಪ್ರಜ್ವಲ್, ಪ್ರೇಮ್,ಧನಂಜಯ್ ಮತ್ತು ಹರಿಪ್ರಿಯ ಆ ಲಿರಿಕಲ್ ವೀಡಿಯೋವನ್ನು ಬಿಡುಗಡೆ ಮಾಡಿದ್ದಲ್ಲದೆ, ಚಿತ್ರತಂಡಕ್ಕೆ ಗೆಲುವು ಸಿಗಲಿ ಎಂದು ಹಾರೈಸಿದ್ದಾರೆ.
ಅತ್ತ ಶರಣ್ ಕೂಡ ಅನುರಾಧ ಭಟ್ ಹಾಗು ಹೊ ಗಾಯಕ ಮಾಗಡಿ ಲೋಕೇಶ್ ಹಾಡಿದ “ಕಣ್ಣಲ್ಲೇ ಕಂಡೆನು’ ಎಂಬ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಸದ್ಯಕ್ಕೆ ಫುಲ್ ಖುಷಿಯಲ್ಲಿರುವ ಚಿತ್ರತಂಡ, ವಿತರಕ ಜಾಕ್‌ಮಂಜು ಅವರ ಮೂಲಕ ಸುಮಾರು 80 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.
ಅಂದಹಾಗೆ, ಚಿಕ್ಕ ಬಜೆಟ್‌ನಲ್ಲೊಂದು ಚಂದದ ಸಿನಿಮಾ ಮಾಡಲು ಅಣಿಯಾದ ಚಿತ್ರತಂಡ, ಯಾವುದಕ್ಕೂ ಹೊಂದಾಣಿಕೆ ಮಾಡಿಕೊಳ್ಳದೆ ಎಲ್ಲವನ್ನೂ ಪೂರೈಸಿದ್ದರಿಂದ ಚಿತ್ರದ ಬಜೆಟ್ ಈಗ ದೊಡ್ಡದಾಗಿದೆ. ಹಾಗಂತ ಹಣ ಜಾಸ್ತಿ ಖರ್ಚಾಗಿದೆ ಎಂಬ ಬೇಸರ ಚಿತ್ರತಂಡಕ್ಕಿಲ್ಲ. ಆದರೆ, ಸಿನಿಮಾ ಅಂದುಕೊಂಡಿದ್ದಕ್ಕಿಂತ ಚೆನ್ನಾಗಿ ಬಂದಿರುವ ತೃಪ್ತಿ ಇದೆ ಎಂಬುದು ನಾಯಕ ಬಾಲಚಂದರ್ ಅವರ ಮಾತು.
ಇನ್ನು, ಈ ಚಿತ್ರವನ್ನು ಸಂದೀಪ್ ನಾಗಲೀಕರ್ ನಿರ್ದೇಶನ ಮಾಡಿದ್ದಾರೆ. ಗೋಕುಲ್‌ರಾಜ್ ಕೂಡ ನಟಿಸಿದ್ದಾರೆ. ಚಿತ್ರದಲ್ಲಿ ಪ್ರಿಯಾಂಕ ಮತ್ತು ಅನೂಷ ರೈ ನಾಯಕಿಯರು. ಇಲ್ಲಿ ದೊಡ್ಡ ಸಾಧನೆ ಮಾಡಿದವರು “ಮಹಾನುಭಾವರು’ ಅಲ್ಲ, ಸಣ್ಣ ಸಣ್ಣ ಆಸೆ, ಆಕಾಂಕ್ಷೆ ಈಡೇರಿಸಿಕೊಳ್ಳುವವರು “ಮಹಾನುಭಾವರು’ ಎಂಬ ವಿಷಯ ಇಲ್ಲಿದೆ ಎನ್ನುತ್ತಾರೆ ಅವರು. ಚಿತ್ರಕ್ಕೆ ಸತೀಶ್ ಮೌರ್ಯ ಸಂಗೀತವಿದೆ. ವೀರೇಶ್ ಕ್ಯಾಮೆರಾ ಹಿಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.