![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 20, 2018, 11:20 AM IST
ಕಳೆದ ಕೆಲ ದಿನಗಳಿಂದ ತನ್ನ ಶೀರ್ಷಿಕೆ ಮತ್ತು ಟೀಸರ್ ಮೂಲಕ ಚಿತ್ರಪ್ರೇಮಿಗಳ ಗಮನ ಸೆಳೆಯಲು ಯಶಸ್ವಿಯಾಗಿರುವ “ಮಟಾಶ್’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಅಂತಿಮ ಕಸರತ್ತು ನಡೆಸುತ್ತಿದೆ. ಇತ್ತೀಚೆಗಷ್ಟೇ “ಮಟಾಶ್” ಚಿತ್ರದಲ್ಲಿ ಬರುವ “ಚವಳಿಕಾಯಿ..’, “ನಮೋ ವೆಂಕಟೇಶಾ…’ ಹಾಡುಗಳನ್ನು ಬಿಡುಗಡೆ ಮಾಡಿ ಸಿನಿಪ್ರಿಯರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದ್ದ ಚಿತ್ರತಂಡ, ಇದೀಗ “ವಾಟ್ ಎ ಟ್ರ್ಯಾಜಿಡಿ… ವಾಟ್ ಎ ಟ್ರ್ಯಾಜಿಡಿ..,’ ಎಂಬ ಚಿತ್ರದ ಮತ್ತೂಂದು ಹಾಡನ್ನು ಬಿಡುಗಡೆ ಮಾಡಿದೆ.
ಸಮರ್ಥ್ ನರಸಿಂಹರಾಜು, ಐಶ್ವರ್ಯ ಸಿಂಧೋಗಿ ನಡುವೆ ಮೂಡಿ ಬಂದಿರುವ ಈ ವಿಶಿಷ್ಠ ಪ್ರೇಮಗೀತೆಗೆ ನಿರ್ದೇಶಕ ಎಸ್.ಡಿ ಅರವಿಂದ್ ಸಂಗೀತ ಸಂಯೋಜನೆ, ಕವಿರಾಜ್ ಸಾಹಿತ್ಯವಿದೆ. ವಿಜಯ್ ಪ್ರಕಾಶ್ ಮತ್ತು ಉಷಾ ಪ್ರಕಾಶ್ ಈ ಹಾಡಿಗೆ ಧ್ವನಿಯಾಗಿದ್ದಾರೆ. ಈ ಹಾಡಿಗೆ ಕಲೈ ನೃತ್ಯ ನಿರ್ದೇಶನವಿದ್ದು, ಅವಿನಾಶ್ ನರಸಿಂಹರಾಜು ಕಲಾ ನಿರ್ದೇಶನ ಮಾಡಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ನಿಧಾನವಾಗಿ ವೈರಲ್ ಆಗುತ್ತಿರುವ ಈ ಹಾಡಿನ ಬಗ್ಗೆಯೂ ಸಿನಿಪ್ರಿಯರಿದ ಮೆಚ್ಚುಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.
ಅಂದಹಾಗೆ, “ಮಟಾಶ್’ ನೋಟ್ ಬ್ಯಾನ್ ಆದ ನಂತರ ನಡೆದ ಕೆಲವು ನೈಜಘಟನೆಗಳನ್ನ ಸ್ಪೂರ್ತಿಯಾಗಿಟ್ಟುಕೊಂಡು ಮಾಡಿದ ಚಿತ್ರವಾಗಿದ್ದು, ಚಿತ್ರ ಮನರಂಜನಾತ್ಮಕವಾಗಿ ಗಂಭೀರ ವಿಷಯವೊಂದನ್ನು ತೆರೆಮೇಲೆ ತೆರೆದಿಡಲಿದೆಯಂತೆ. “ಗೋಲ್ಸ್ ಅಂಡ್ ಡ್ರೀಮ್ಸ್’, “ಕ್ರೋಮ್ಸ್ ಅಂಡ್ ಬಲ್ಮಾನಿ’ ಬ್ಯಾನರ್‌ನಲ್ಲಿ ಸತೀಶ್ ಪಾಠಕ್, ಗಿರೀಶ್ ಪಟೇಲ್, ಚಂದ್ರಶೇಖರ್ ಮನೂರ್, ಎಸ್.ಡಿ ಅರವಿಂದ್, ಆನಂದ್ ಚಿಟ್ಟವಾಡಗಿ, ರೂಪಾ ಬಡಿಗೇರ್, ಉಮೇಶ್ ಸುರೇಬಾನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. “ಲಾಸ್ಟ್‌ಬಸ್’ ಚಿತ್ರವನ್ನು ನಿರ್ದೇಶಿಸಿದ್ದ ಅರವಿಂದ್ ಎಸ್.ಡಿ ಈ ಚಿತ್ರವನ್ನೂ ನಿರ್ದೇಶಿಸಿದ್ದಾರೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.