ಶರಾಣುರ್ಜುನ ವಿಜಯ
ಅವತಾರ್ ಪುರುಷದಲ್ಲಿ ಹಿಟ್ ಜೋಡಿ
Team Udayavani, Nov 5, 2019, 6:04 AM IST
ಚಿತ್ರರಂಗದಲ್ಲಿ ಸಾಕಷ್ಟು ಹಿಟ್ ಜೋಡಿಗಳು ಸಿಗುತ್ತವೆ. ಅದು ನಾಯಕ-ನಾಯಕಿ ಇರಬಹುದು, ನಿರ್ಮಾಪಕ, ನಿರ್ದೇಶಕ ಇರಬಹುದು ಅಥವಾ ನಾಯಕ-ನಿರ್ದೇಶಕರಾಗಿರಬಹುದು. ಸದ್ಯ ಈ ತರಹದ ಹಿಟ್ ಕಾಂಬಿನೇಶನ್ ಮೂಲಕ ಗಮನ ಸೆಳೆಯುತ್ತಿರುವ ಜೋಡಿ ಎಂದರೆ ಶರಣ್ ಹಾಗೂ ಅರ್ಜುನ್ ಜನ್ಯಾ. ನಾಯಕ ಹಾಗೂ ಸಂಗೀತ ನಿರ್ದೇಶಕರಾಗಿ ಈ ಜೋಡಿ ಕನ್ನಡ ಚಿತ್ರರಂಗದ ಹಿಟ್ ಕಾಂಬಿನೇಶನ್ ಲಿಸ್ಟ್‌ಗೆ ಸೇರಿದೆ.
ಹೌದು, ಶರಣ್ ಹಾಗೂ ಅರ್ಜುನ್ ಜನ್ಯಾ ಕಾಂಬಿನೇಶನ್‌ನಲ್ಲಿ ಬಂದ ಚಿತ್ರಗಳ ಹಾಡುಗಳು ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ. “ರ್‍ಯಾಂಬೋ’, “ವಿಕ್ಟರಿ’,”ಅಧ್ಯಕ್ಷ’, “ಬುಲೆಟ್ ಬಸ್ಯಾ’, “ಜೈ ಮಾರುತಿ 800′, “ವಿಕ್ಟರಿ -2′, “ರ್‍ಯಾಂಬೋ- 2′ ಹೀಗೆ ಶರಣ್ ಅವರ ಬಹುತೇಕ ಸಿನಿಮಾಗಳಿಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದಾರೆ. ಆ ಚಿತ್ರಗಳ ಹಾಡುಗಳು ಹಿಟ್ ಆಗುವ ಮೂಲಕ ಇವರಿಬ್ಬರು ಯಶಸ್ವಿ ಜೋಡಿ ಎನಿಸಿಕೊಂಡಿದ್ದರು. ಈಗ “ಅವತಾರ್ ಪುರುಷ’ ಚಿತ್ರದಲ್ಲೂ ಶರಣ್ ಹಾಗೂ ಅರ್ಜುನ್ ಜನ್ಯಾ ಕಾಂಬಿನೇಶನ್ ಮುಂದುವರೆಯುತ್ತಿದೆ.
ಪುಷ್ಕರ್ ನಿರ್ಮಾಣದ “ಅವತಾರ್ ಪುರುಷ’ ಸಿನಿಮಾವನ್ನು ಸುನಿ ನಿರ್ದೇಶಿಸುತ್ತಿದ್ದಾರೆ. ಆರಂಭದಲ್ಲಿ ಈ ಚಿತ್ರಕ್ಕೆ ಚರಣ್ ರಾಜ್ ಸಂಗೀತ ಎನ್ನಲಾಗಿತ್ತು. ಆದರೆ, ಈಗ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸುತ್ತಿದ್ದಾರೆ. ಅದಕ್ಕೆ ಕಾರಣ, ಹಿಟ್ ಕಾಂಬಿನೇಶನ್. ಯಶಸ್ವಿಯಾಗಿ ಸಾಗುತ್ತಿರುವ ಜೋಡಿಯನ್ನು ಬ್ರೇಕ್ ಮಾಡಬಾರದೆಂಬ ಕಾರಣಕ್ಕೆ ಪುಷ್ಕರ ಹಾಗೂ ತಂಡ ಅರ್ಜುನ್ ಜನ್ಯಾ ಅವರೊಂದಿಗೆ ಕೆಲಸ ಮಾಡಲು ಮುಂದಾಗಿದೆ. ಈ ಮೂಲಕ ಮತ್ತೊಂದು ಹಿಟ್ ಆಲ್ಬಂ ಹೊರಬರುವ ನಿರೀಕ್ಷೆ ಚಿತ್ರತಂಡಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
Poonch; ಸೇನಾ ವಾಹನ ದುರಂತ: ಕೊಡಗಿನ ಯೋಧ ಚಿಂತಾಜನಕ
Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.