
“ದಿ ವಿಲನ್’ ಫಸ್ಟ್ ಲುಕ್ ಬಿಡುಗಡೆ
Team Udayavani, Apr 2, 2017, 2:57 PM IST

ಪ್ರೇಮ್ ನಿರ್ದೇಶನದ “ದಿ ವಿಲನ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಫಸ್ಟ್‌ಲುಕ್‌ಗೆ ಸಿಗುತ್ತಿರುವ ಮೆಚ್ಚುಗೆಯಿಂದ ಪ್ರೇಮ್ ಖುಷಿಯಾಗಿದ್ದಾರೆ. ಈ ಖುಷಿಯಲ್ಲೇ ಪ್ರೇಮ್ ಚಿತ್ರೀಕರಣಕ್ಕೆ ಅಣಿಯಾಗಿದ್ದಾರೆ. ಸೋಮವಾರದಿಂದ “ದಿ ವಿಲನ್’ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಮೊದಲ ಹಂತವಾಗಿ ಬೆಂಗಳೂರಿನಲ್ಲಿ ಹದಿಮೂರು ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ.
ಸಹಜವಾಗಿಯೇ ಒಂದು ಕುತೂಹಲವಿದೆ. ಅದೇನೆಂದರೆ ಮೊದಲ ಹಂತದ ಚಿತ್ರೀಕರಣದಲ್ಲೇ ಸುದೀಪ್ ಹಾಗೂ ಶಿವರಾಜಕುಮಾರ್ ಜೊತೆಯಾಗಿ ನಟಿಸುತ್ತಾರಾ ಎಂದು. ಆದರೆ, ಮೊದಲ ಹಂತದ ಚಿತ್ರೀಕರಣದಲ್ಲಿ ಸುದೀಪ್ ಅಷ್ಟೇ ಭಾಗವಹಿಸುತ್ತಿದ್ದಾರೆ. ಅವರ ಜೊತೆ ತೆಲುಗು ನಟ ಶ್ರೀಕಾಂತ್ ಕೂಡಾ ನಟಿಸುತ್ತಿದ್ದಾರೆ. ಅವರಿಗೂ ಇಲ್ಲಿ ಪ್ರಮುಖ ಪಾತ್ರವಿದೆ. ಸದ್ಯ ಶಿವರಾಜಕುಮಾರ್ “ಟಗರು’ ಚಿತ್ರೀಕರಣದಲ್ಲಿ ಬಿಝಿ ಇದ್ದು ಮೇನಲ್ಲಿ “ದಿ ವಿಲನ್’ ತಂಡ ಸೇರಿಕೊಳ್ಳಲಿದ್ದಾರೆ.
ಬೆಂಗಳೂರಿನಲ್ಲಿ ಹದಿಮೂರು ದಿನಗಳ ಚಿತ್ರೀಕರಣ ಮುಗಿಸಿದ ನಂತರ “ವಿಲನ್’ ತಂಡ ಲಂಡನ್‌ಗೆ ಹಾರಲಿದೆ. ಅಲ್ಲಿ ಸುಮಾರು 20 ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಸುದೀಪ್ ಹಾಗೂ ಶಿವರಾಜಕುಮಾರ್ ಇಬ್ಬರು ಈ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಲಂಡನ್‌ನಿಂದ ವಾಪಾಸ್ ಆದ ಚಿತ್ರತಂಡ ಮತ್ತೆ ಬ್ಯಾಂಕಾಕ್‌ಗೆ ಪ್ರಯಾಣ ಬೆಳೆಸಲಿದ್ದು, ಹಾಡು ಹಾಗೂ ಕೆಲವು ಪ್ರಮುಖ ದೃಶ್ಯಗಳನ್ನು ಅಲ್ಲಿ ಚಿತ್ರೀಕರಿಸಿಕೊಳ್ಳಲಿದೆ. ಉಳಿದಂತೆ ಕೇರಳ ಅಥವಾ ಚೈನಾದಲ್ಲೂ ಚಿತ್ರೀಕರಣ ಮಾಡುವ ಉದ್ದೇಶ ಪ್ರೇಮ್‌ಗಿದೆ. ಚಿತ್ರದಲ್ಲಿ ಸುದೀಪ್ ಮೂರು ವಿಭಿನ್ನ ಗೆಟಪ್‌ಗ್ಳಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಹೇರ್‌ಸ್ಟೈಲ್ ಕೂಡಾ ಬದಲಾಗಿದೆ.
ಪ್ರೇಮ್ ಹೇಳುವಂತೆ ಈ ಹಿಂದೆ ಪ್ರೇಕ್ಷಕರು ನೋಡಿರದ ರೀತಿಯಲ್ಲಿ ಶಿವಣ್ಣ ಹಾಗೂ ಸುದೀಪ್ ಅವರನ್ನು ತೋರಿಸುತ್ತಾರಂತೆ. “ಎಲ್ಲವೂ ಪಕ್ಕಾ ಆಗಿದೆ. ಹೋಂವರ್ಕ್ ಚೆನ್ನಾಗಿ ಮಾಡಿಕೊಂಡೇ ಚಿತ್ರೀಕರಣಕ್ಕೆ ಅಣಿಯಾಗಿದ್ದೇವೆ. ತುಂಬಾ ಲೊಕೇಶನ್‌ಗಳಲ್ಲಿ ಚಿತ್ರೀಕರಣ ಮಾಡಲಿದ್ದೇವೆ. ಕನ್ನಡ ಚಿತ್ರರಂಗಕ್ಕೆ “ದಿ ವಿಲನ್’ ಒಂದು ಹೊಸ ಬಗೆಯ ಸಿನಿಮಾವಾಗಲಿದೆ’ ಎಂಬುದು ಪ್ರೇಮ್ ವಿಶ್ವಾಸ.
ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದೆ. ಇನ್ನು, ಪ್ರೇಮ್ ಈ ಚಿತ್ರದ ಮೂಲಕ ಗಿರಿ ಎಂಬ ಹೊಸ ಛಾಯಾಗ್ರಾಹಕರೊಬ್ಬರನ್ನು ಪರಿಚಯಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರ ಸಂಗೀತವಿದೆ. ಚಿತ್ರದಲ್ಲಿ ಪರಭಾಷೆಯ ಜನಪ್ರಿಯ ನಟಿಯೊಬ್ಬರು ನಟಿಸಲಿದ್ದಾರೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.