ಮಲಯಾಳಂಗೆ “ದಿ ವಿಲನ್’
Team Udayavani, Jul 29, 2017, 10:54 AM IST
ಶಿವರಾಜಕುಮಾರ್-ಸುದೀಪ್ ಕಾಂಬಿನೇಶನ್ನ “ದಿ ವಿಲನ್’ ಚಿತ್ರ ಮೊನ್ನೆಯಷ್ಟೇ ಲಂಡನ್ ಚಿತ್ರೀಕರಣ ಬೆಂಗಳೂರಿಗೆ ವಾಪಸ್ಸಾಗಿದೆ. ಇನ್ನೂ ಸಾಕಷ್ಟು ದಿನಗಳ ಚಿತ್ರೀಕರಣ ಬಾಕಿ ಇದೆ. ಸದ್ಯ ಕನ್ನಡದಲ್ಲಷ್ಟೇ “ದಿ ವಿಲನ್’ ತಯಾರಾಗುತ್ತಿದ್ದು, ಮುಂದೆ ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲೂ “ದಿ ವಿಲನ್’ ಮಾಡುವ ಆಲೋಚನೆ ಚಿತ್ರತಂಡಕ್ಕಿದೆ. ಹಾಗಾದರೆ, ಮಲಯಾಳಂ, ತಮಿಳಿನಲ್ಲಿ ಯಾರು ನಟಿಸುತ್ತಾರೆ, ಇದೇ ಕಾಂಬಿನೇಶನ್ ಮುಂದುವರಿಯುತ್ತಾ ಎಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ.
ಮೂಲಗಳ ಪ್ರಕಾರ, ಮಲಯಾಳಂ, ತಮಿಳು, ತೆಲುಗಿನಲ್ಲಿ ಮೋಹನ್ ಲಾಲ್ ನಟಿಸಲಿದ್ದಾರಂತೆ. ಹಾಗಾದರೆ ಯಾವ ನಟ ಬದಲಾಗುತ್ತಾನೆಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. “ದಿ ವಿಲನ್’ನಲ್ಲಿ ಶಿವರಾಜಕುಮಾರ್ ಮಾಡುತ್ತಿರುವ ಪಾತ್ರವನ್ನು ಬೇರೆ ಭಾಷೆಯಲ್ಲಿ ಮೋಹನ್ ಲಾಲ್ ಮಾಡಲಿದ್ದು, ಸುದೀಪ್ ಹಾಗೂ ಮೋಹನ್ ಲಾಲ್ ಕಾಂಬಿನೇಶನ್ನಲ್ಲಿ ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲಿ “ದಿ ವಿಲನ್’ ಮೂಡಿಬರಲಿದೆ ಎಂಬ ಲೇಟೆಸ್ಟ್ ಸುದ್ದಿಯೊಂದು ಓಡಾಡುತ್ತಿದೆ.
ಹಾಗಂತ ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಮಾತನಾಡಿಲ್ಲ. ಬದಲಾಗಿ, ಗಾಂಧಿನಗರದಲ್ಲಿ “ದಿ ವಿಲನ್’ ಪರಭಾಷಾ ವರ್ಶನ್ಗೆ ಮೋಹನ್ ಲಾಲ್ ಬರಲಿದ್ದಾರೆಂಬ ಸುದ್ದಿಯಂತೂ ಜೋರು ಸದ್ದು ಮಾಡುತ್ತಿದೆ. ಸದ್ಯ ಲಂಡನ್ನಿಂದ “ದಿ ವಿಲನ್’ ತಂಡ ಬಂದಿದ್ದು, ಲೇಹ್ ಲಡಾಕ್ನಲ್ಲಿ ಚಿತ್ರೀಕರಣಕ್ಕೆ ಹೊರಡಲು ಅಣಿಯಾಗುತ್ತಿದೆ. ಸುಮಾರು 130 ದಿನಗಳ ಶೆಡ್ನೂಲ್ ಹಾಕಿಕೊಳ್ಳಲಾಗಿದ್ದು, ಡಿಸೆಂಬರ್ ಹೊತ್ತಿಗೆ ಸಿನಿಮಾ ಮುಗಿಸಿ, ತೆರೆಗೆ ತರುವ ಆಲೋಚನೆ ಪ್ರೇಮ್ಗಿದೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್ಎಫ್ಡಿಪಿ ಪೋರ್ಟಲ್ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.