“ದಿ ವಿಲನ್’ಗೆ ಪಾರ್ಕರ್ ಚೇಸ್!
Team Udayavani, Oct 26, 2017, 1:36 PM IST
“ದಿ ವಿಲನ್’ ಚಿತ್ರಕ್ಕಾಗಿ ಥಾಯ್ಲೆಂಡ್‌ನ ಜನಪ್ರಿಯ ಫೈಟ್ ಮಾಸ್ಟರ್ ನ್ಯೂಂಗ್ ಅವರ ಸಾಹಸ ನಿರ್ದೇಶನದಲ್ಲಿ ಸಾಹಸ ದೃಶ್ಯಗಳ ಚಿತ್ರೀಕರಣ ಮಾಡಲಾಗಿದೆ. ಅದಲ್ಲದೆ ಮಾಸ್ ಮಾದ ಸಾಹಸ ಸಂಯೋಜನೆಯಲ್ಲಿ ಬ್ಯಾಂಕಾಕ್‌ನಲ್ಲಿ ಒಂದು ಚೇಸ್ ಚಿತ್ರೀಕರಣ ಮಾಡಲಾಗಿದೆ.
ಇದೀಗ ಚಿತ್ರತಂಡವು ಬೆಂಗಳೂರಿನಲ್ಲಿ ಇನ್ನೊಂದು ವಿಶೇಷವಾದ ಚೇಸ್ ಚಿತ್ರೀಕರಣ ಮಾಡುತ್ತಿದ್ದು, ಸಾಹಸ ನಿರ್ದೇಶಕ ರವಿವರ್ಮ, ಈ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾರೆ. ಪಾರ್ಕರ್ ಚೇಸ್ ಎಂದು ಕರೆಯಲ್ಪಡುವ ಈ ಚೇಸ್‌ನಲ್ಲಿ ಶಿವರಾಜಕುಮಾರ್, 25 ವರ್ಷದ ಯುವಕರನ್ನು ಬೆನ್ನಟ್ಟುವ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ. ಈ ಚೇಸ್‌ನಲ್ಲಿ ನೂರಾರು ಅಡೆತಡೆಗಳಿದ್ದು, ಅದನ್ನೆಲ್ಲಾ ದಾಟಿ ಫೈಟ್ ಮಾಡಲಾಗುತ್ತದೆ.
“ದಿ ವಿಲನ್’ ಚಿತ್ರಕ್ಕೆ ಪ್ರೇಮ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು, ಸಿ.ಆರ್. ಮನೋಹರ್ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತವಿದ್ದು, ಚಿತ್ರದಲ್ಲಿ ಸುದೀಪ್, ಆ್ಯಮಿ ಜಾಕ್ಸನ್, ಮಿಥುನ್ ಚಕ್ರವರ್ತಿ, ಶ್ರೀಕಾಂತ್, ಶ್ರುತಿ ಹರಿಹರನ್ ಮುಂತಾದವರು ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.