ನಟಿಸುವ ಆಸೆ ಇದೆ: ಅವಕಾಶ ಮಾತ್ರ ಇಲ್ಲ
Team Udayavani, Oct 2, 2017, 10:00 PM IST
ಹಿರಿಯ ನಟಿ ರೇಖಾ ದಾಸ್ ಬೇಸರದಲ್ಲಿದ್ದಾರೆ! ಹೌದು, ಸ್ವತಃ ಅವರೇ ಈ ಮಾತನ್ನು ಹೇಳಿಕೊಂಡಿದ್ದಾರೆ. ಅದಕ್ಕೆ ಕಾರಣ, ಅವರು ನಟಿಸಲು ಸಿದ್ಧವಿದ್ದರೂ, ಯಾವೊಬ್ಬ ನಿರ್ದೇಶಕ, ನಿರ್ಮಾಪಕರು ಅವರನ್ನು ಗಮನಹರಿಸದಿರುವುದೇ ಆ ಬೇಸರಕ್ಕೆ ಕಾರಣ. ಈ ಬೇಸರ ಹೊರಹಾಕುತ್ತಲೇ ಕ್ಷಣಕಾಲ ಭಾವುಕರಾದರು ರೇಖಾದಾಸ್. ಸಂದರ್ಭ, “ಮತ್ತೆ ಮತ್ತೆ’ ಚಿತ್ರದ ಪತ್ರಿಕಾಗೋಷ್ಠಿ.
“ನಾನು ಬರೋಬ್ಬರಿ ಆರು ವರ್ಷಗಳಿಂದ ಯಾವುದೇ ಚಿತ್ರಗಳಲ್ಲಿ ನಟಿಸಿಲ್ಲ. ಅದೇಕೋ ಗೊತ್ತಿಲ್ಲ. ನಿರ್ದೇಶಕ, ನಿರ್ಮಾಪಕರು ನನ್ನನ್ನು ಸಂಪೂರ್ಣ ಮರೆತಿದ್ದಾರೆ. ನನ್ನ ಗೆಳೆಯ ಟೆನ್ನಿಸ್ ಕೃಷ್ಣ ಅವರು ಒಮ್ಮೆ ಫೋನ್ ಕಾಲ್ ಮಾಡಿ, “ನಾನೊಂದು ಸಿನಿಮಾ ಮಾಡ್ತಾ ಇದೀನಿ. ನಿನಗೊಂದು ಪ್ರಮುಖ ಪಾತ್ರವಿದೆ’ ಅಂದಾಗ ಖುಷಿಯಾಯ್ತು. “ಮತ್ತೆ ಮತ್ತೆ’ ಮೂಲಕ ನಾನು ರೀ ಎಂಟ್ರಿಯಾಗುತ್ತಿದ್ದೇನೆ. ಕ್ರಿಕೆಟ್ ಕ್ರೀಡೆಯಲ್ಲಿ ಮಾತ್ರ ಹಂಡ್ರೆಡ್ ರನ್ ಹೊಡೆಯೋಕೆ ಸಾಧ್ಯ ಅಂತಂದುಕೊಳ್ಳುವಂತಿಲ್ಲ.
ಸಿನಿಮಾ ರಂಗದಲ್ಲೂ ಕೂಡ ನಾನು ಮತ್ತು ಟೆನ್ನಿಸ್ ಕೃಷ್ಣ ಅವರು ಜೋಡಿಯಾಗಿ ನೂರು ಸಿನಿಮಾ ಮಾಡಿದ್ದೇವೆ. ಇದು ನಿಜಕ್ಕೂ ದಾಖಲೆ. ಸುಮಾರು 70, 80ರ ದಶಕದಿಂದಲೂ ನೋಡಿಕೊಂಡು ಬಂದರೆ, ಯಾವ ಜೋಡಿಯೂ ನೂರು ಸಿನಿಮಾಗಳನ್ನು ಜೋಡಿಯಾಗಿ ನಟಿಸಿಲ್ಲ. ಆದರೆ, ಟೆನ್ನಿಸ್ ಕೃಷ್ಣ ಹಾಗೂ ನನ್ನ ಜೋಡಿ ನೂರು ಸಿನಿಮಾಗಳನ್ನು ಯಶಸ್ವಿಯಾಗಿ ಮುಗಿಸಿದೆ. ಆ ನಂತರ ದುರಾದೃಷ್ಟ, ಇಬ್ಬರಿಗೂ ಜೊತೆಯಾಗಿ ನಟಿಸುವ ಅವಕಾಶ ಸಿಗಲಿಲ್ಲ.
ನನಗಂತೂ ಆರು ವರ್ಷಗಳಿಂದಲೂ ಯಾವ ಸಿನಿಮಾದಲ್ಲೂ ನಟಿಸಲು ಅವಕಾಶ ಸಿಗಲಿಲ್ಲ. ಯಾರೂ ಕರೆದೂ ಇಲ್ಲ. ನಟಿಸೋ ಉತ್ಸಾಹವಿದೆ. ಆದರೆ, ಕೆಲಸ ಕೊಡುತ್ತಿಲ್ಲ. “ಮತ್ತೆ ಮತ್ತೆ’ ಚಿತ್ರದ ಬಳಿಕ ನಿರ್ದೇಶಕರು ಮತ್ತೆ ನನ್ನನ್ನು ಪಾತ್ರ ಮಾಡಲು ಕರೆಯುತ್ತಾರೆ ಎಂಬ ವಿಶ್ವಾಸವಂತೂ ಇದೆ’ ಎನ್ನುತ್ತಲೇ ಕಣ್ಣಂಚಲ್ಲಿದ್ದ ಹನಿಯನ್ನು ಒರೆಸಿಕೊಂಡು ಸುಮ್ಮನಾದರು ರೇಖಾ ದಾಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂದು ಪ್ರತಾಪ್ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್ಬಾಸ್ ಕಪ್?
New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ
Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ
VijayHazareTrophy: ಪಡಿಕ್ಕಲ್ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ
Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.