ಚಿತ್ರರಂಗದಲ್ಲಿ ನೆಲೆ ನಿಲ್ಲುವ ವಿಶ್ವಾಸವಿದೆ
Team Udayavani, Jan 7, 2019, 6:04 AM IST
ಯೋಗೇಶ್ ನಾಯಕರಾಗಿರುವ “ಲಂಬೋದರ’ ಹಾಗೂ ಧನ್ವೀರ್ ನಾಯಕರಾಗಿರುವ “ಬಜಾರ್’ ಈ ವಾರ ತೆರೆಕಾಣುತ್ತಿದೆ. ಈ ಇಬ್ಬರಿಗೂ ಈ ಸಿನಿಮಾ ತುಂಬಾನೇ ಮುಖ್ಯ. ಒಬ್ಬರದು ಲಾಂಚ್ ಆದರೆ, ಇನ್ನೊಬ್ಬರದು ರೀಲಾಂಚ್. ಹೌದು, ಸುನಿ ನಿರ್ದೇಶನದ “ಬಜಾರ್’ ಮೂಲಕ ಧನ್ವೀರ್ ಲಾಂಚ್ ಆಗುತ್ತಿದ್ದಾರೆ.
ಇನ್ನು, ನಾಯಕ ಯೋಗಿಗೆ “ಲಂಬೋದರ’ ಚಿತ್ರದ ಗೆಲುವು ಅನಿವಾರ್ಯ. ಇತ್ತೀಚೆಗೆ ಬಂದ ಯೋಗಿ ಚಿತ್ರಗಳ್ಯಾವುವು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಯೋಗಿ ಕೂಡಾ ದೊಡ್ಡ ಗೆಲುವಿಗೆ ಎದುರು ನೋಡುತ್ತಿದ್ದಾರೆ. ಹಾಗಾಗಿ, “ಲಂಬೋದರ’ ಮೂಲಕ ರೀಲಾಂಚ್ ಆಗುತ್ತಿದ್ದಾರೆಂದರೂ ತಪ್ಪಲ್ಲ. ಈ ಎರಡು ಚಿತ್ರಗಳ ಬಗ್ಗೆ ಆಯಾ ಚಿತ್ರದ ನಾಯಕ ನಟರು ಮಾತನಾಡಿದ್ದಾರೆ …
* ಸಿನಿಮಾ ಬಿಡುಗಡೆಯ ದಿನ ಹತ್ತಿರ ಬರುತ್ತಿದೆ. ಹೇಗನಿಸುತ್ತಿದೆ?
ತುಂಬಾ ಎಕ್ಸೈಟ್ ಆಗಿದ್ದೇನೆ. ಮೊದಲ ಸಿನಿಮಾನಾ ಜನ ಹೇಗೆ ತಗೋತ್ತಾರೆ ಎಂಬ ಕುತೂಹಲ ಇದೆ. ಈಗಾಗಲೇ ಟೀಸರ್, ಟ್ರೇಲರ್ ಬಿಡುಗಡೆಯಾಗಿದೆ. ನೋಡಿದವರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
* ಬಜಾರ್ ಮೂಲಕ ಲವರ್ ಬಾಯ್ ಆಗುತ್ತಿರೋ, ಆ್ಯಕ್ಷನ್ ಹೀರೋನಾ?
ಆ್ಯಕ್ಷನ್ ಹೀರೋ ಆಗುತ್ತಿದ್ದೇನೆ. ಅದಕ್ಕೆ ಕಾರಣ ಚಿತ್ರದ ಕಥೆ. ಕಥೆಯಲ್ಲಿ ರೌಡಿಸಂ ಅಂಶ ಅಡವಾಗಿರುವುದರಿಂದ ಅದಕ್ಕೆ ತಕ್ಕಂತಹ ಪಾತ್ರ ಸಿಕ್ಕಿದೆ. ಹೊಸ ತರಹದ ಕಥೆ ಪಾತ್ರ ಈ ಚಿತ್ರದಲ್ಲಿದೆ.
* ಟ್ರೇಲರ್ ನೋಡಿದವರಿಂದ ಬಂದ ಮುಕ್ತವಾದ ಕಾಮೆಂಟ್ ಏನು?
ಟ್ರೇಲರ್ ನೋಡಿದವರು ಈ ಚಿತ್ರದ ಮೂಲಕ ನನಗೆ ಚಿತ್ರರಂಗದಲ್ಲೊಂದು ಗಟ್ಟಿ ನೆಲೆ ಸಿಗುತ್ತದೆ ಎಂದಿದ್ದಾರೆ. ಅದಕ್ಕೆ ಕಾರಣ, ಟ್ರೇಲರ್ ಮೂಡಿಸಿದ ಭರವಸೆ. ನಾನು ಕೂಡಾ ಅದೇ ನಿರೀಕ್ಷೆಯಲ್ಲಿ ಎದುರು ನೋಡುತ್ತಿದ್ದೇನೆ.
* ಚಿತ್ರದಲ್ಲಿ ರೊಮ್ಯಾನ್ಸ್ ಮಾಡುವಾಗ ತುಂಬಾ ಕಷ್ಟಪಡ್ತಾ ಇದ್ರಂತೆ?
ಹೌದು, ಮೊದಲ ಸಿನಿಮಾ. ಹಾಗಾಗಿ, ತುಂಬಾ ನರ್ವಸ್ ಆಗುತ್ತಿದ್ದೆ. ಬೇರೆ ದೃಶ್ಯಗಳನ್ನು ಸುಲಭವಾಗಿ ಮಾಡುತ್ತಿದ್ದೆ. ಚಿತ್ರದಲ್ಲಿ ನನಗೆ ಕಷ್ಟವಾಗುತ್ತಿದ್ದ ಅಂಶವೆಂದರೆ ರೊಮ್ಯಾನ್ಸ್.
* ನಿರ್ದೇಶಕ ಸುನಿ ಜೊತೆ ಕೆಲಸ ಮಾಡಿದ ಅನುಭವ?
ಅವರು ಯಾವತ್ತೂ ನಿರ್ದೇಶಕರ ತರಹ ವರ್ತಿಸಿಲ್ಲ. ನನ್ನ ಅಣ್ಣನ ತರಹ ಪ್ರೀತಿಯಿಂದ ನಡೆದುಕೊಂಡು ನಡೆದುಕೊಳ್ಳುತ್ತಿದ್ದರು. ಒಂದು ಒಡನಾಟದೊಂದಿಗೆ ಕೆಲಸ ಮಾಡಿದ ಖುಷಿ ಇದೆ.
* ನಿಮ್ಮ ಹೋಂಬ್ಯಾನರ್‌ನಲ್ಲಿ ಮುಂದೆ ಬೇರೆಯವರಿಗೆ ಸಿನಿಮಾ ಮಾಡೋ ಐಡಿಯಾ ಇದ್ಯಾ?
ನನ್ನನ್ನು ಲಾಂಚ್ ಮಾಡುವ ಉದ್ದೇಶದಿಂದ ಬ್ಯಾನರ್ ಹುಟ್ಟುಹಾಕಿದರೂ ಮುಂದೆ ಒಳ್ಳೆಯ ಕಥೆ ಸಿಕ್ಕರೆ ಬೇರೆ ಹೀರೋಗಳಿಗೂ ಸಿನಿಮಾ ಮಾಡುವ ಉದ್ದೇಶವಿದೆ.
* ನಿಮ್ಮ ಬಜಾರ್‌ನ ಜನ ಯಾಕೆ ನೋಡಬೇಕು?
ಯೂತ್ಸ್ಗೆ ಈ ಕಥೆ ಹೆಚ್ಚು ಕನೆಕ್ಟ್ ಆಗುತ್ತದೆ. ಚಿತ್ರದಲ್ಲಿ ಒಂದೊಳ್ಳೆಯ ಸಂದೇಶವೂ ಇದೆ. ಆ್ಯಕ್ಷನ್ ಪ್ರಿಯರಿಗೆ ಭರ್ಜರಿ ಫೈಟ್, ಪ್ರೇಮಿಗಳಿಗಾಗಿ ಒಳ್ಳೆಯ ಹಾಡುಗಳು ಈ ಚಿತ್ರದಲ್ಲಿವೆ. ಎಲ್ಲಾ ವರ್ಗದವರಿಗೂ ಇಷ್ಟವಾಗುವಂತಹ ಅಂಶ ಈ ಚಿತ್ರದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.