ಯಾವುದೇ ವಿವಾದ ಇಲ್ಲ, ಎಲ್ಲವೂ ಪಕ್ಕಾ ಇದೆ: ಜಯಣ್ಣ


Team Udayavani, Aug 7, 2018, 11:04 AM IST

jayanna.jpg

ಒಂದು ಕಡೆ ಪ್ರದೀಪ್‌ ರಾಜ್‌, ಟೈಟಲ್‌ ಕೊಡುವುದಿಲ್ಲ, ಅದೇ ಹೆಸರಿನಲ್ಲಿ ಚಿತ್ರ ಮಾಡುತ್ತೀನಿ ಎಂದರೆ, ಇನ್ನೊಂದು ಕಡೆ ಯಶ್‌ ಅಭಿನಯದ “ಕಿರಾತಕ 2′ ಚಿತ್ರವನ್ನು ನಿರ್ಮಿಸುತ್ತಿರುವ ನಿರ್ಮಾಪಕ ಜಯಣ್ಣ, ಆ ಟೈಟಲ್‌ ತಮ್ಮ ಬಳಿಯೇ ಇದೆ ಎನ್ನುತ್ತಾರೆ. ಈ ಕುರಿತು ಮಾತನಾಡುವ ಅವರು, “ಇದರಲ್ಲಿ ಯಾವುದೇ ವಿವಾದ ಇಲ್ಲ. ಎಲ್ಲವೂ ಪಕ್ಕಾ ಇದೆ. ಈಗಾಗಲೇ ಟೈಟಲ್‌ ರಿಜಿಸ್ಟರ್‌ ಆಗಿದೆ.

ಚಿತ್ರದ ಕೆಲಸಗಳು ನಡೆಯುತ್ತಿದ್ದು, ಆಗಸ್ಟ್‌ 27ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ’ ಎನ್ನುತ್ತಾರೆ. ಅಷ್ಟೇ ಅಲ್ಲ, ಚಿತ್ರದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಅವರು ನಿರ್ದೇಶಕ ಅನಿಲ್‌ ಜೊತೆಗೆ ದುಬೈನಲ್ಲಿ ಲೊಕೇಶನ್‌ಗಳ ಹುಡುಕಾಟದಲ್ಲಿದ್ದಾರೆ. ದುಬೈನಿಂದ “ಉದಯವಾಣಿ’ಯ ಜೊತೆಗೆ ಮಾತನಾಡಿದ ಅವರು, “ಇದೊಂಥರಾ “ಕಿರಾತಕ’ ಚಿತ್ರದ ಮುಂದುವರೆದ ಭಾಗದಂತಿರುತ್ತದೆ.

ಆ ಚಿತ್ರದಲ್ಲಿ ನಟಿಸಿದ್ದ ಟಿ.ಎಸ್‌. ನಾಗಾಭರಣ, ತಾರಾ ಮುಂತಾದವರು ಈ ಚಿತ್ರದಲ್ಲೂ ನಟಿಸುತ್ತಿದ್ದಾರೆ. 30 ದಿನಗಳ ಕಾಲ ಮಂಡ್ಯ, ಪಾಂಡವಪುರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ಆ ನಂತರ 50 ದಿನಗಳ ಕಾಲ ದುಬೈನಲ್ಲಿ ಚಿತ್ರೀಕರಣ ನಡೆಯಲಿದೆ. ಲೊಕೇಶನ್‌ ಹುಡುಕುವುದಕ್ಕೆಂದೇ ದುಬೈಗೆ ಬಂದಿದ್ದೇವೆ’ ಎನ್ನುತ್ತಾರೆ ಜಯಣ್ಣ. ಅಂದಹಾಗೆ, ಜಯಣ್ಣ ಮತ್ತು ಯಶ್‌ ಜೋಡಿಯ ಆರನೇ ಚಿತ್ರ ಇದು.

ಇದಕ್ಕೂ ಮುನ್ನ ಯಶ್‌ ಅಭಿನಯದಲ್ಲಿ “ಗೂಗ್ಲಿ’, “ಡ್ರಾಮ’, “ಗಜಕೇಸರಿ’, “ಮಿಸ್ಟರ್‌ ಆ್ಯಂಡ್‌ ಮಿಸಸ್‌ ರಾಮಾಚಾರಿ’ ಹಾಗೂ “ಜಾನು’ ಚಿತ್ರಗಳನ್ನು ಅವರು ನಿರ್ಮಿಸಿದ್ದು, ಈಗ ಯಶ್‌ ಮತ್ತು ಜಯಣ್ಣ ಆರನೇ ಬಾರಿಗೆ ಜೊತೆಯಾಗಿ ಚಿತ್ರ ಮಾಡುತ್ತಿದ್ದಾರೆ. “ಕಿರಾತಕ 2′ ಚಿತ್ರದ ಇನ್ನೊಂದು ವಿಶೇಷವೆಂದರೆ, “ನಂದ ಲವ್ಸ್‌ ನಂದಿತಾ’ ಖ್ಯಾತಿಯ ಶ್ವೇತ ಅಲಿಯಾಸ್‌ ನಂದಿತಾ ನಾಯಕಿಯಾಗಿ ನಟಿಸುತ್ತಿರುವುದು.

ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಅದರಲ್ಲಿ ನಂದಿತಾ ಆಯ್ಕೆಯಾಗಿದ್ದಾರೆ. ಇನ್ನೊಬ್ಬ ನಾಯಕಿಯ ಹುಡುಕಾಟ ನಡೆಯುತ್ತಿದೆ. “ನಂದ ಲವ್ಸ್‌ ನಂದಿತಾ’ ಚಿತ್ರದ ನಂತರ ನಂದಿತಾ, “ಬೆಳಗಾಂ’ ಮತ್ತು “ಚಾಮರಾಜಪೇಟೆ’ ಎಂಬ ಎರಡು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಬೇಕಿತ್ತು. ಎರಡೂ ಚಿತ್ರಗಳ ಮುಹೂರ್ತವಾಗಿದ್ದರೂ, ಕಾರಣಾಂತರಗಳಿಂದ ಆ ಚಿತ್ರಗಳು ಮುಂದುವರೆಯಲಿಲ್ಲ.

ಹಾಗಾಗಿ ಸುಮಾರು 10 ವರ್ಷಗಳ ನಂತರ ನಂದಿತಾ ಮತ್ತೆ ಇನ್ನೊಂದು ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು, “ಕಿರಾತಕ 2′ ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸುತ್ತಿದ್ದು, ಸುಧಾಕರ್‌ ರಾಜ್‌ ಅವರ ಛಾಯಾಗ್ರಹಣವಿದೆ. ಇನ್ನೊಬ್ಬ ನಾಯಕಿ ಮತ್ತು ಉಳಿದ ಕಲಾವಿದರು ಹಾಗೂ ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಪಕ್ಕಾ ಆಗಲಿದೆ.

ಟಾಪ್ ನ್ಯೂಸ್

1-gundlupete

Gundlupete: ವಿದ್ಯುತ್ ಕಂಬಕ್ಕೆ ‌ಗುದ್ದಿದ್ದ ಕಾರು: ಸ್ಥಳದಲ್ಲೇ ‌ಇಬ್ಬರು ಸಾವು

crime (2)

Lucknow; ಯುವಕನಿಂದ ತಾಯಿ ಮತ್ತು ನಾಲ್ವರು ಸಹೋದರಿಯರ ಬರ್ಬರ ಹ*ತ್ಯೆ!

1-blur

Aranthodu;ಅರಣ್ಯದಲ್ಲಿ ಹೊಸ ವರ್ಷ ಪಾರ್ಟಿ: 40 ಮಂದಿ ಅರಣ್ಯ ಇಲಾಖೆಯ ವಶಕ್ಕೆ!

kejriwal 2

BJP ತಪ್ಪುಗಳನ್ನು ಆರ್‌ಎಸ್‌ಎಸ್ ಬೆಂಬಲಿಸುತ್ತದೆಯೇ? ಭಾಗವತ್ ರನ್ನು ಪ್ರಶ್ನಿಸಿದ ಕೇಜ್ರಿವಾಲ್

1-wwewqe

2025ಕ್ಕೆ 25 ಆಪ್ತ ಸಲಹೆಗಳು: ಸಣ್ಣ ಪುಟ್ಟ ಸಂಗತಿಗಳನ್ನು ಆಸ್ವಾದಿಸೋಣ…

Bengaluru: ಮಾಜಿ ಕಾರ್ಪೋರೇಟರ್‌ ರೇಖಾ ಹತ್ಯೆ; 8 ಮಂದಿಗೆ ಜೀವಾವಧಿ ಶಿಕ್ಷೆ

Bengaluru: ಮಾಜಿ ಕಾರ್ಪೋರೇಟರ್‌ ರೇಖಾ ಹತ್ಯೆ; 8 ಮಂದಿಗೆ ಜೀವಾವಧಿ ಶಿಕ್ಷೆ

1-frr

Sabarimala; ಯಾತ್ರಿಗಳಿಗೆ ಅರಣ್ಯ ಮಾರ್ಗದ ವಿಶೇಷ ಪಾಸ್‌ ತಾತ್ಕಾಲಿಕ ಸ್ಥಗಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು

2025: ಬರುವುದೆಲ್ಲಾ ಬರಲಿ ಗೆಲುವು ನಮ್ಮದಾಗಲಿ: ಸಿನಿಮಾದ 6 ವಿಭಾಗದವರ ನಿರೀಕ್ಷೆಯ ಮಾತು

Darshan-kannada

Challenging Star; ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ! ;ಇಂದು ‘ಡೆವಿಲ್‌’ ಡಬ್ಬಿಂಗ್‌!

Manada Kadalu Movie: ಮನದ ಕಡಲಲಿ ಹೂ ದುಂಬಿ

Manada Kadalu Movie: ಮನದ ಕಡಲಲಿ ಹೂ ದುಂಬಿ

Sandalwood: ಹಾಡಲ್ಲಿ ಗರುಡ ಪುರಾಣ

Sandalwood: ಹಾಡಲ್ಲಿ ಗರುಡ ಪುರಾಣ

Sherr Kannada Movie: ಘರ್ಜಿಸಲು ಬಂದ ಶೇರ್‌

Sherr Kannada Movie: ಘರ್ಜಿಸಲು ಬಂದ ಶೇರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2-hunsur

Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು

suicide (2)

Davanagere; ಹೊಸ ವರ್ಷ ಆಚರಣೆ ವೇಳೆ ಅಪಘಾ*ತ: ಯುವಕ ಸಾ*ವು,ಇನ್ನೋರ್ವ ಗಂಭೀರ

1-gundlupete

Gundlupete: ವಿದ್ಯುತ್ ಕಂಬಕ್ಕೆ ‌ಗುದ್ದಿದ್ದ ಕಾರು: ಸ್ಥಳದಲ್ಲೇ ‌ಇಬ್ಬರು ಸಾವು

crime (2)

Lucknow; ಯುವಕನಿಂದ ತಾಯಿ ಮತ್ತು ನಾಲ್ವರು ಸಹೋದರಿಯರ ಬರ್ಬರ ಹ*ತ್ಯೆ!

1-blur

Aranthodu;ಅರಣ್ಯದಲ್ಲಿ ಹೊಸ ವರ್ಷ ಪಾರ್ಟಿ: 40 ಮಂದಿ ಅರಣ್ಯ ಇಲಾಖೆಯ ವಶಕ್ಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.