ಆ್ಯಮಿ ಜಾಕ್ಸನ್ ಬಗ್ಗೆ ಭಯವಿಲ್ಲ
Team Udayavani, Jun 7, 2017, 12:42 PM IST
ಪಾರುಲ್, “ಕ್ವೀನ್’ ಚಿತ್ರದ ಕನ್ನಡ ರೀಮೇಕ್‌ನಲ್ಲಿ ಎಂಬ ಸುದ್ದಿ ಕೇಳಿ ಬರುತ್ತಲೇ ಇತ್ತು. ಆದರೆ, ಚಿತ್ರ ಅದ್ಯಾಕೋ ತಡವಾಗಿತ್ತು. ಈಗ ಕೊನೆಗೆ “ಕ್ವೀನ್’ನ ರೀಮೇಕ್ ಆದ “ಬಟರ್‌ಫ್ಲೈ – ಪಾತರಗಿತ್ತಿ’ ಶುರುವಾಗಿದೆ. ನಾಲ್ಕು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರದ ಕನ್ನಡ ಅವತರಣಿಕೆಯಲ್ಲಿ ಪಾರುಲ್ ಮತ್ತು ಆ್ಯಮಿ ಜಾಕ್ಸನ್ ನಟಿಸುತ್ತಿದ್ದಾರೆ. ಕಂಗನಾ ಪಾತ್ರದಲ್ಲಿ ಪಾರುಲ್ ಅಭಿನಯಿಸಿದರೆ, ಲಿಸಾ ಹೇಡನ್ ಪಾತ್ರವನ್ನು ಆ್ಯಮಿ ಮಾಡುತ್ತಿದ್ದಾರೆ. ಈ ಚಿತ್ರವನ್ನು ರಮೇಶ್ ಅರವಿಂದ್ ನಿರ್ದೇಶಿಸುತ್ತಿದ್ದಾರೆ.
ಮೊನ್ನೆ ಪಾರುಲ್ ಹುಟ್ಟುಹಬ್ಬದಂದೇ, “ಬಟರ್‌ಫ್ಲೈ’ ಹಾರುವುದಕ್ಕೆ ಪ್ರಾರಂಭಿಸಿದೆ. ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡು ಬಂದ ಪಾರುಲ್ ಹಲವು ಪ್ರಶ್ನೆಗಳಿಗೆ ಉತ್ತರವಾದರು. ಕಳೆದ ಜನವರಿಯಲ್ಲಿ ನಾಯಿ ಕಚ್ಚಿದ್ದರಿಂದ ಆಸ್ಪತ್ರೆ ಸೇರಿದ್ದ ಪಾರುಲ್, ಆ ಘಟನೆಯಿಂದ ಹೊರಬರುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಂಡರಂತೆ. “ನಿಜಕ್ಕೂ ಆ ಘಟನೆಯ ನಂತರ ಸಾಕಷ್ಟು ಬದಲಾಗಿದ್ದೇನೆ. ಮುಂಚೆ ಜನರ ಅಭಿಪ್ರಾಯದ ಬಗ್ಗೆ ಬಹಳ ಯೋಚಿಸುತ್ತಿದ್ದೆ.
ಹೇಗಿರಬೇಕು, ಏನು ಮಾಡಬೇಕು ಎಂದು ತಲೆ ಕೆಡಿಸಿಕೊಳ್ಳುತ್ತಿದ್ದೆ. ಆದರೆ, ಈ ಘಟನೆ ನಡೆದಾಗ ಯಾರೂ ಇರಲಿಲ್ಲ. ನನ್ನ ಸಹಾಯಕ್ಕೆ ಬಂದಿದ್ದು ಸೆಕ್ಯುರಿಟಿ ಗಾರ್ಡ್ ಮಾತ್ರ. ಹಾಗಾಗಿ ಜನರ ಅಭಿಪ್ರಾಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದನ್ನು ಬಿಟ್ಟಿದ್ದೀನಿ. ಆದರೆ, ಆ ಘಟನೆ ನಡೆದಾಗ ಮಾನಸಿಕವಾಗಿ ಬಹಳ ಹಿಂಸೆ ಪಟ್ಟೆ. ಗಾಯಗಳಾಗಿದ್ದರಿಂದ ಜಿಮ್‌ಗೆ ಸಹ ಹೋಗುವಂತಿರಲಿಲ್ಲ. ಕೊನೆಗೆ ಅಮೇರಿಕಾಗೆ ಹೋಗಿ 20-25 ದಿನ ಇದ್ದು ಬಂದೆ. ಈ ಸಂದರ್ಭದಲ್ಲಿ ನನ್ನ ಚೆನ್ನಾಗಿ ನೋಡಿಕೊಂಡಿದ್ದು ನಮ್ಮ ತಾಯಿ.
ಅಷ್ಟೇ ಅಲ್ಲ, ಜನ ನನ್ನ ಎಷ್ಟು ಪ್ರೀತಿಸುತ್ತಾರೆ ಅಂತ ಗೊತ್ತಾಗಿದ್ದು ನನಗೆ ಆಗಲೇ. ಯೋಗರಾಜ್ ಭಟ್, ಉಪೇಂದ್ರ ಸೇರಿದಂತೆ ಹಲವರು ಫೋನ್ ಮಾಡಿ ವಿಚಾರಿಸಿದರು. ಮಾಧ್ಯಮದವ್ರು ಸಹ ಫೋನ್ ಮಾಡಿದ್ದರು. ಇದೆಲ್ಲದರಿಂದ ಖುಷಿಯಾಯಿತು’ ಎನ್ನುತ್ತಾರೆ ಪಾರುಲ್. ಈ ಮಧ್ಯೆಯೇ “ಬಟರ್‌ಫ್ಲೈ’ ಚಿತ್ರ ಹುಡುಕಿಕೊಂಡು ಬಂತಂತೆ. “ಇದುವರೆಗೂ ನಟನೆ ಸ್ಕೋಪ್ ಇರುವ ಸಾಕಷ್ಟು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೇನೆ. “ಬಟರ್‌ಫ್ಲೈ’ ಸಹ ಅಂಥದ್ದೊಂದು ಚಿತ್ರ.
ಈ ಚಿತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಈ ಚಿತ್ರದಲ್ಲಿ ನಾನು ನಾಯಕಿ ಎನ್ನುವುದಕ್ಕಿಂತ ಪಾತ್ರದ ತರಹ ಕಾಣಬೇಕು. ಹಾಗಾಗಿ ಕೂದಲಿಗೆ ಕಪ್ಪು ಹಚ್ಚಿ, ಸಾಧ್ಯವಾದಷ್ಟು ಮೇಕಪ್ ಇಲ್ಲದೆಯೇ ನಟಿಸುವ ಯೋಚನೆ ಇದೆ. ಇದುವರೆಗೂ ಸಾಕಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೀನಿ. ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಬಂದಿರಲಿಲ್ಲ. ಈ ಚಿತ್ರಕ್ಕೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಯನ್ನ ಎಕ್ಸ್‌ಪೆಕ್ಟ್ ಮಾಡುತ್ತಿದ್ದೀನಿ’ ಎನ್ನುತ್ತಾರೆ ಅವರು. ಇನ್ನು ಈ ಚಿತ್ರದಲ್ಲಿ ಆ್ಯಮಿ ಜಾಕ್ಸನ್ ಜೊತೆಗೆ ನಟಿಸುತ್ತಿರುವುದಕ್ಕೆ ಪಾರುಲ್‌ಗೆ ಯಾವುದೇ ಭಯವಿಲ್ಲವಂತೆ.
“ಆ್ಯಮಿ ನನ್ನ ಟೇಕ್ ಓವರ್ ಮಾಡಬಹುದು ಅಂತ ಭಯವಿಲ್ಲ. ನನಗೆ ಹೊಟ್ಟೆಕಿಚ್ಚಾ ಇಲ್ಲ. “ಆಟಗಾರ’ ಚಿತ್ರದಲ್ಲಿ 10 ಜನ ಪ್ರಮುಖ ಕಲಾವಿದರಿದ್ದರು. “ಬಚ್ಚನ್’ನಲ್ಲಿ ಇಬ್ಬರು ನಾಯಕಿಯರಿದ್ದರು. “ವಾಸ್ತು ಪ್ರಕಾರ’ದಲ್ಲಿ ಇನ್ನೊಬ್ಬರಿದ್ದರು. ಅವರ್ಯಾರು ನನ್ನ ಸ್ಥಾನ ತುಂಬುವುದಕ್ಕೆ ಸಾಧ್ಯವಿಲ್ಲ. ಹಾಗೆಯೇ ನಾನು ಅವರ ಸ್ಥಾನ ತುಂಬುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ಹೊಟ್ಟೆಕಿಚ್ಚಿಗೆ, ಭಯಕ್ಕೆ ಕಾರಣವೇ ಇಲ್ಲ’ ಎನ್ನುತ್ತಾರೆ ಪಾರುಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Liquor Sale; ರಾಜ್ಯದಲ್ಲಿ ಒಂದೇ ದಿನ 408 ಕೋಟಿ ರೂ ಮೌಲ್ಯದ ಮದ್ಯ ಮಾರಾಟ ದಾಖಲೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.