ಉಪ್ಪಿಗಿಂತ ರುಚಿ ಇಲ್ಲ
Team Udayavani, Nov 4, 2018, 11:07 AM IST
ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ “2.0′ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ವೇಳೆ ನಿರ್ದೇಶಕ ಶಂಕರ್ ಕನ್ನಡದ ನಟ ಉಪೇಂದ್ರ ಅವರ ಗುಣಗಾನ ಮಾಡಿದ್ದಾರೆ. ಟ್ರೇಲರ್ ಬಿಡುಗಡೆ ವೇಳೆ ಭಾರತದ ಬೇರೆ ಬೇರೆ ಚಿತ್ರರಂಗದ ಹಲವಾರು ನಟರು, ನಿರ್ದೇಶಕರ ಪ್ರಶ್ನೆಗಳನ್ನು ಚಿತ್ರತಂಡದ ಮುಂದೆ ಇಡಲಾಯಿತು.
ಈ ವೇಳೆ ಕನ್ನಡ ಚಿತ್ರರಂಗದಿಂದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಮತ್ತು ನಟ ಕಂ ನಿರ್ದೇಶಕ ಉಪೇಂದ್ರ ಅವರ ಮಾತಿನ ವಿಡಿಯೋವನ್ನು ಪ್ರದರ್ಶಿಸಲಾಯಯಿತು. ಈ ವೇಳೆ ನಿರ್ದೇಶಕ ಶಂಕರ್ ಹಾಗೂ ರಜನಿಕಾಂತ್ ಅವರಿಗೆ ಪ್ರಶ್ನೆ ಕೇಳಿದ ಉಪೇಂದ್ರ, “ಶಂಕರ್, ರಜನಿಕಾಂತ್, ಅಕ್ಷಯ್ ಕುಮಾರ್, ಎ.ಆರ್ ರೆಹಮಾನ್ ಹಾಗೂ ಆ್ಯಮಿ ಜಾಕ್ಸನ್ ಕಾಂಬಿನೇಷನ್‌ನ ಈ ಸಿನಿಮಾಗಾಗಿ ಎಲ್ಲರೂ ಕಾತರದಿಂದ ಕಾಯ್ತಿದ್ದಾರೆ.
ಶಂಕರ್ ಹಾಗೂ ರಜನಿಕಾಂತ್ ಅವರೇ ನಿಮಗೆ ಈ ಒಂದು ಪ್ರಶ್ನೆ ಕೇಳಬೇಕೆಂದು 4-5 ದಿನಗಳಿಂದ ಯೋಚನೆ ಮಾಡಿದ್ದೀನಿ. ನೀವೆಲ್ಲಾ ನಮಗೆಲ್ಲಾ ಒಂದು ಪಠ್ಯ ಪುಸ್ತಕವಿದ್ದಂತೆ. ಸರ್, ನಾನೂ ಒಬ್ಬ ನಿರ್ದೇಶಕ ಹಾಗೂ ಹೀರೋ. ಶಂಕರ್ ಅವರಂತಹ ನಿರ್ದೇಶಕ ಹಾಗೂ ರಜನಿಕಾಂತ್ ಅವರಂತಹ ಹೀರೋ ನನಗಾಗಿ ಏನಾದರೂ ಟಿಪ್ಸ್ ಕೊಡುತ್ತೀರಾ?’ ಎಂದು ಕೇಳಿದರು.
ಇದಕ್ಕೆ ಉತ್ತರಿಸಿದ ನಿರ್ದೇಶಕ ಶಂಕರ್, “ಅವರಿಗೆ ನಾನೇನು ಟಿಪ್ಸ್ ಕೊಡಲಿ. ಅವರು ಕೂಡ ಒಬ್ಬ ಒಳ್ಳೇ ನಿರ್ದೇಶಕ ಅವರ ಪಾತ್ರಗಳು ನನಗೆ ತುಂಬಾ ಇಷ್ಟ. ಅವರ ಸಿನಿಮಾಗಳು ನನಗೆ ಸ್ಫೂರ್ತಿ ನೀಡುತ್ತವೆ. ಉಪೇಂದ್ರ ಅವರ “ಎ’ ಸಿನಿಮಾ ನನಗೆ ದೊಡ್ಡ ಸ್ಫೂರ್ತಿ. ನಾನು ಈ ಚಿತ್ರದ ಬಗ್ಗೆ ಚರ್ಚೆ ಮಾಡುವಾಗ ಅಸಿಸ್ಟೆಂಟ…ಗಳಿಗೆ ಹೇಳ್ತಿ¨ªೆ, “ಎ’ ಸಿನಿಮಾ ಥರ ಸಿನಿಮಾ ಸ್ಪೀಡ್ ಆಗಿರಬೇಕು. “ಎ’ ಸಿನಿಮಾದಲ್ಲಿ ಓಪನಿಂಗೇ ಕ್ಲೆ çಮ್ಯಾಕ್ಸ್ ಥರ ಇರುತ್ತೆ.
ಹಾಗೇ ವೇಗವಾಗಿ ಸಿನಿಮಾ ಸಾಗುತ್ತೆ ಅಂತ. ಹೀಗಿರುವಾಗ ಅವರಿಗೆ ನಾನೇನು ಟಿಪ್ಸ್ ಕೊಡಲಿ. ಆದ್ರೂ ಅವರು ಕೇಳಿದ್ದಾರೆ ಅಂತ ಹೇಳ್ತೀನಿ. ನಿಮಗೆ ಸೂಕ್ತ ಎನಿಸುವ ನಟ, ನಿರ್ದೇಶಕ, ನಿರ್ಮಾಪಕ ಅಥವಾ ತಂತ್ರಜ್ಞರನ್ನ ಹಾಕಿಕೊಂಡು ಸಿನಿಮಾ ಮಾಡಬೇಡಿ. ಒಂದು ಒಒಳ್ಳೇ ಕಥೆಗೆ ಏನು ಬೇಕೋ ಅದಕ್ಕೆ ತಕ್ಕಂತಹ ನಟ, ನಿರ್ದೇಶಕ, ನಿರ್ಮಾಪಕ ಹಾಗೂ ತಂತ್ರಜ್ಞರನ್ನ ಹಾಕಿಕೊಂಡು ಸಿನಿಮಾ ಮಾಡಿ’ ಎಂಬ ಮಾತು ಅವರಿಂದ ಬಂತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.