ತೆರಗೆ ಬಂತು ದಿಗಂತ್- ಅನಂತ್ ನಾಗ್ ಅಭಿನಯದ “ತಿಮ್ಮಯ್ಯ ಅಂಡ್ ತಿಮ್ಮಯ್ಯ”
Team Udayavani, Dec 2, 2022, 10:27 AM IST
ಕೆಲವು ಸಿನಿಮಾಗಳ ಪೋಸ್ಟರ್‌ಗಳೇ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಿಸುತ್ತವೆ. ಪೋಸ್ಟರ್ ನೋಡಿದಾಗಲೇ ಈ ಸಿನಿಮಾದೊಳಗೊಂದು ಕಥೆ ಇದೆ ಎಂಬ ಭಾವನೆ ಬರುತ್ತದೆ. ಸದ್ಯ ಆ ತರಹದ ಒಂದು ಭಾವನೆ ತಂದಿರುವ ಚಿತ್ರವೆಂದರೆ “ತಿಮ್ಮಯ್ಯ ಅಂಡ್ ತಿಮ್ಮಯ್ಯ’. ಈ ಚಿತ್ರ ಇಂದು ಬಿಡುಗಡೆಯಾಗುತ್ತಿದೆ.
ಈ ಸಿನಿಮಾದಲ್ಲಿ ಅನಂತ್ ನಾಗ್ ಹಾಗೂ ದಿಗಂತ್ ಪ್ರಮುಖ ಪಾತ್ರ ಮಾಡಿದ್ದಾರೆ. ಸಂಜಯ್ ಶರ್ಮಾ ಈ ಸಿನಿಮಾದ ನಿರ್ದೇಶಕರು. ರಾಜೇಶ್ ಶರ್ಮಾ ನಿರ್ಮಾಣದ ಮಾಡಿದ್ದಾರೆ. ಅನಂತ್ ನಾಗ್ ಅವರು ಇಷ್ಟು ವರ್ಷ ಸಾಕಷ್ಟು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಅವರಿಗೆ ಈ ತರಹದ ಒಂದು ಪಾತ್ರ ಸಿಕ್ಕಿರಲಿಲ್ಲವಂತೆ. ಸಹಜವಾಗಿಯೇ ಅನಂತ್ ನಾಗ್ ಅವರು ಕೂಡಾ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ.
ತಮ್ಮ ಪಾತ್ರದ ಬಗ್ಗೆ ಮಾತನಾಡುವ ಅನಂತ್ ನಾಗ್ ಅವರು ಇದೊಂದು ಸವಾಲಿನ ಪಾತ್ರ ಎನ್ನುತ್ತಾರೆ. “ತಿಮ್ಮಯ್ಯ ಅಂಡ್ ತಿಮ್ಮಯ್ಯ’ದಲ್ಲಿ ನನಗೆ ಒಂದು ವಿಭಿನ್ನವಾದ ಪಾತ್ರ ಸಿಕ್ಕಿದೆ ಎಂದು ಹೇಳಿದರೆ ತಪ್ಪಾಗಲಾರದು. ಮೊದಲು ಈ ಆಫರ್ ಬಂದಾಗ, ಸ್ಕ್ರಿಪ್ಟ್ ಕಳುಹಿಸಿ ಅಂದೆ. ಸ್ಕ್ರಿಪ್ಟ್ ಓದಿದಾಗ ತುಂಬಾ ಸಂತೋಷವಾಯಿತು. ಎಷ್ಟು ಚೆನ್ನಾಗಿ ಬರೆದಿದ್ದಾರೆ ಎನಿಸಿತು. “ತಿಮ್ಮಯ್ಯ ಅಂಡ್ ತಿಮ್ಮಯ್ಯ’ ಎಂಬ ಎರಡು ಪಾತ್ರಗಳ ಸುತ್ತ ಈ ಸಿನಿಮಾ ಮಾಡಿದ್ದಾರೆ. ಮೂವತ್ತು ವರ್ಷಗಳ ನಂತರ ಮೊಮ್ಮಗನನ್ನು ಭೇಟಿಯಾಗುವ ಪಾತ್ರ. ಸ್ಕ್ರಿಪ್ಟ್ ಓದುತ್ತಲೇ ತುಂಬಾ ವಿಶಿಷ್ಟವಾದ ಪಾತ್ರ ಅಂತೆನಿಸಿತು. ಜೊತೆಗೊಂದು ಅಳುಕು ಕೂಡಾ ಬಂತು. ಏಕೆಂದರೆ ಇದು ಬಹಳ ಸರಳವಾದ ಪಾತ್ರವಲ್ಲ. ಈ ಪಾತ್ರ ಶ್ರೀಮಂತ, ಆ ಶ್ರೀಮಂತಿಕೆಯ ಅಹಂ ಕೂಡಾ ಅವನಿಗಿದೆ. ಒಂದು ರೀತಿ ಅಲೆಮಾರಿ ಬದುಕು ಆತ ಬದುಕಿದ್ದಾನೆ. ಸ್ವಾರ್ಥದಿಂದಲೇ ಬದುಕಿದ್ದಾನೆ, ಬೇರೆಯವರನ್ನು ಹೀಯಾಳಿಸೋದು, ಹಂಗಿಸೋದು ಅವನ ಗುಣದಲ್ಲಿದ್ದರೂ ಅದು ಹಾಸ್ಯಧಾಟಿಯಲ್ಲಿದೆ. ಹೀಗಾಗಿ ನನ್ನ ಹಿನ್ನೆಲೆಯಲ್ಲಿ ನಾನು ಈ ಪಾತ್ರವನ್ನು ಮಾಡೋದೋ, ಬೇಡವೋ ಎಂಬ ಕನ್‌ಫ್ಯೂಶನ್ ಇತ್ತು. ಜೊತೆಗೆ ಮಾಡಿದರೆ ಇದೊಂದು ಸವಾಲು ಎಂಬ ಭಾವನೆಯೂ ಇತ್ತು. ಈ ಪಾತ್ರದಲ್ಲಿ ಎಲ್ಲವನ್ನು ಹೇಳಿದ್ದಾರೆ. ನೆಗೆಟಿವ್ ಅಂಶಗಳ ಜೊತೆ ಹ್ಯೂಮರ್ ಇದೆ. ಹಾಗಾಗಿ, ಒಂದು ಕೈ ನೋಡೇ ಬಿಡೋಣ ಎಂದು ಒಪ್ಪಿಕೊಂಡೆ. ಈ ಪಾತ್ರ ಸಿಂಪಲ್ ಆಗಿಲ್ಲ. ನೆಗೆಟಿವ್ ಅಂಶವಿರುವ ಪಾತ್ರ. ಅದನ್ನು ಪಾಸಿಟಿವ್ ಆಗಿ ಪ್ರಸೆಂಟ್ ಮಾಡುವ ಸವಾಲಿತ್ತು’ ಎನ್ನುವುದು ಅನಂತ್‌ನಾಗ್ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.