ಹೀಗೊಂದು ಹೊಸಬರ ಕಥೆ…

ಕಲಾವಿದನೊಬ್ಬನ ನೋವು-ನಲಿವು

Team Udayavani, Jul 11, 2019, 3:00 AM IST

chitrkatha

ಒಂದು ಫೋಟೋ ನೂರೆಂಟು ಕಥೆ ಹೇಳುತ್ತೆ ಎಂಬ ಮಾತು ಸತ್ಯ. ಈಗ ಕಲಾವಿದನೊಬ್ಬನ ಚಿತ್ರವೊಂದು ಹೊಸ ಕಥೆ ಹೇಳಲು ರೆಡಿಯಾಗಿದೆ. ಅಂದರೆ, ಚಿತ್ರವೊಂದರಲ್ಲಿ ಕಲಾವಿದನೊಬ್ಬನ ಕಥೆ ಕುರಿತ “ಚಿತ್ರಕಥಾ’ ಈ ವಾರ ತೆರೆಗೆ ಬರುತ್ತಿದೆ. ಹೌದು, ಇದು ಸಂಪೂರ್ಣ ಹೊಸಬರೇ ಸೇರಿ ಮಾಡಿರುವ ಸಿನಿಮಾ. ಈ ಚಿತ್ರದಲ್ಲೊಂದು ಚಿತ್ರವಿದೆ. ಆ ಚಿತ್ರದ ಕಥೆ ಏನೆಂಬುದು ಸಸ್ಪೆನ್ಸ್‌.

ಚಿತ್ರವನ್ನು ಯಶಸ್ವಿ ಬಾಲಾದಿತ್ಯ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಜವಾಬ್ದಾರಿಯೂ ಇವರದೇ. ಯಶಸ್ವಿ ಬಾಲಾದಿತ್ಯ ಅವರಿಗೆ ಇದು ಮೊದಲ ಅನುಭವ ಆಗಿದ್ದರೂ, ಅನಿಮೇಶನ್‌ನಲ್ಲಿ ಸಾಕಷ್ಟು ಪರಿಣಿತಿ ಹೊಂದಿದ್ದಾರೆ. ಆ ಅನುಭವ ಕೂಡ “ಚಿತ್ರಕಥಾ’ ಚಿತ್ರಕ್ಕಿದೆ. “ಚಿತ್ರಕಥಾ’ ಕುರಿತು ಹೇಳುವುದಾದರೆ, ಚಿತ್ರದಲ್ಲಿ ಒಬ್ಬ ಕಲಾವಿದ ಸಾಕಷ್ಟು ಕಷ್ಟಪಟ್ಟು ಒಂದು ಹಂತ ದಾಟಿರುತ್ತಾನೆ.

ಅವನೊಳಗಿನ ಕಲೆಗೊಂದು ಸೂಕ್ತ ಸ್ಥಾನಮಾನ ಗಳಿಸಿಕೊಳ್ಳಲು ಹರಸಾಹಸ ಪಟ್ಟಿರುತ್ತಾನೆ. ಆದರೆ, ಬಣ್ಣದ ಲೋಕದ ಜರ್ನಿಯಲ್ಲಿ ಅವನು ಎದುರಾದ ಸಮಸ್ಯೆಗಳನ್ನು ಹೇಗೆಲ್ಲಾ ಎದುರಿಸಿ ನಿಲ್ಲುತ್ತಾನೆ. ಅವನು ನಡೆಯುವ ದಾರಿಯಲ್ಲಿ ಆಕಸ್ಮಿಕವಾಗಿ ಎರಗುವ ಎಡವಟ್ಟುಗಳನ್ನು ಹೇಗೆ ನಿಭಾಯಿಸುತ್ತಾನೆ ಎಂಬುದು ಚಿತ್ರದ ಕಥೆ.

ಚಿತ್ರಕ್ಕೆ ಸುಜಿತ್‌ ರಾಥೋಡ್‌ ಹೀರೋ. ಅವರಿಲ್ಲಿ ನಿರ್ದೇಶಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಧಾರಾಣಿ ಅವರು ವೈದ್ಯೆಯಾಗಿ ನಟಿಸಿದ್ದಾರೆ. ತಬಲನಾಣಿ ಅವರಿಲ್ಲಿ ಬದುಕಿನ ಅರ್ಥ ತಿಳಿಸುವ ವ್ಯಕ್ತಿಯ ಪಾತ್ರ ಮಾಡಿದ್ದಾರೆ. ದಿಲೀಪ್‌ರಾಜ್‌ ವಿಶೇಷ ಪಾತ್ರ ಮಾಡಿದರೆ, ಹಿರಿಯ ಕಲಾವಿದೆ ಬಿ.ಜಯಶ್ರೀ ಅವರು, ಕೊರವಂಜಿ ಪಾತ್ರದಲ್ಲಿ ಮಿಂಚಿದ್ದಾರೆ.

ಅಷ್ಟೇ ಅಲ್ಲ, ಚಿತ್ರದಲ್ಲಿ ಅವರೊಂದು ಹಾಡನ್ನೂ ಹಾಡಿದ್ದಾರೆ. ಇವರೊಂದಿಗೆ ಹೊಸ ಪ್ರತಿಭೆಗಳಾದ ಮೇಧಾ, ಆದರ್ಶ್‌.ಹಚ್‌.ಎಸ್‌., ಅನುಷಾರಾವ್‌. ಮಹಾಂತೇಶ್‌ ನಟಿಸಿದ್ದಾರೆ. ಬೆಂಗಳೂರು, ಕೇರಳ, ಮಂಗಳೂರು, ಮಡಿಕೇರಿ ಸೇರಿದಂತೆ ಇತರೆಡೆ ಚಿತ್ರೀಕರಣ ಮಾಡಲಾಗಿದೆ.

ಎರಡು ಹಾಡುಗಳಿಗೆ ಚೇತನ್‌ಕುಮಾರ್‌ ಸಂಗೀತ ನೀಡಿದರೆ, ತನ್ವಿಕ್‌ ಛಾಯಾಗ್ರಹಣ ಮಾಡಿದ್ದಾರೆ. ಮಧು ತುಂಬಕೆರೆ ಸಂಕಲನವಿದೆ. ರಘು ಪ್ರವೀಣ್‌ ಕಲಾ ನಿರ್ದೇಶನವಿದೆ. ಗೆಳೆಯ ನಾಯಕ ಆಗಿರುವುದರಿಂದ ಪ್ರಜ್ವಲ್‌.ಎಂ.ರಾಜ್‌ ನಿರ್ಮಾಣ ಮಾಡಿದ್ದಾರೆ.

ಟಾಪ್ ನ್ಯೂಸ್

17-ckm

Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

Delhi; ಸೋಲಿನ ಭಯದಿಂದ ಬಿಜೆಪಿ ಆಪರೇಶನ್‌ ಕಮಲ ಆರಂಭಿಸಿದೆ: ಅರವಿಂದ ಕೇಜ್ರಿವಾಲ್

15-mandya

Mandya: ಅಪ್ರಾಪ್ತರ ಪ್ರೇಮ ಪ್ರಕರಣ; ಜಿಲೆಟಿನ್ ಸ್ಪೋಟಿಸಿ ಯುವಕ ಆತ್ಮಹತ್ಯೆ

Hubli; Pig farmer assault case; Four arrested including sister’s husband

Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕ್ಮಸಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

Hubli; ಅಯ್ಯಪ್ಪ ಶಿಬಿರ ಅಗ್ನಿ ಆಕಸ್ಮಿಕ ಪ್ರಕರಣ; ಆರಕ್ಕೇರಿದ ಸಾವಿನ ಸಂಖ್ಯೆ

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kudla namdu Ooru movie

Sandalwood: ಕುಡ್ಲ ನಮ್ದು ಊರು!: ಇದು ಕರಾವಳಿ ತಂಡದ ಹೊಸ ಕನಸು

1-neemo

ShivaRajkumar ಮನೆಯ ಮುದ್ದಿನ ಶ್ವಾನ ನೀಮೋ ಇನ್ನಿಲ್ಲ: ಭಾವನಾತ್ಮಕ ಪತ್ರ ಬರೆದ ಗೀತಾ

Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್‌ ಸಿಟಿʼ

Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್‌ ಸಿಟಿʼ

Actress kashima is in Nee nange movie

Kashima; ನೀ ನಂಗೆ ಎಂದ ಕಾಶಿಮಾ…; ನಾಯಕಿ ಹೆಸರು ಘೋಷಣೆ

Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್‌ ಸ್ಟಾರ್

Yash; ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದ ರಾಕಿಂಗ್‌ ಸ್ಟಾರ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kudla namdu Ooru movie

Sandalwood: ಕುಡ್ಲ ನಮ್ದು ಊರು!: ಇದು ಕರಾವಳಿ ತಂಡದ ಹೊಸ ಕನಸು

3

Badagannur: ಆರೋಗ್ಯ ಕೇಂದ್ರ, ಆ್ಯಂಬುಲೆನ್ಸ್‌ಗೆ ಗ್ರಾಮಸ್ಥರ ಬೇಡಿಕೆ

Bidar; ಗುತ್ತಿಗೆದಾರ ಸಚಿನ್‌ ಮನೆಗೆ ಭೇಟಿ ನೀಡಿದ ಸಚಿವ ಈಶ್ವರ ಖಂಡ್ರೆ

Bidar; ಗುತ್ತಿಗೆದಾರ ಸಚಿನ್‌ ಮನೆಗೆ ಭೇಟಿ ನೀಡಿದ ಸಚಿವ ಈಶ್ವರ ಖಂಡ್ರೆ

17-ckm

Kottigehara: ಆಟೋ ರಿಕ್ಷಾದಲ್ಲಿ ಗಾಂಜಾ ಪತ್ತೆ: ಇಬ್ಬರು ಆರೋಪಿಗಳ ಬಂಧನ

2

Bantwal: ಕಂಬಳದ ತೆರೆಮರೆ ಹೀರೊಗಳ ದಾಖಲೀಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.