ಈ ಬಾರಿ ರಾಜೇಶ್ ಕೃಷ್ಣನ್ ಬದಲು ಹಂಸಲೇಖ!
Team Udayavani, Dec 9, 2017, 3:54 PM IST
ಕಳೆದ ಕೆಲವು “ಸರಿಗಮಪ ಲಿಟ್ಲ ಚಾಂಪ್ಸ್’ನ ಸೀಸನ್‌ಗಳಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ, ಗಾಯಕರಾದ ರಾಜೇಶ್ ಕೃಷ್ಣನ್ ಮತ್ತು ವಿಜಯಪ್ರಕಾಶ್ ಅವರುಗಳು ತೀರ್ಪುಗಾರರಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ, ಇದೇ ಕಾರ್ಯಕ್ರಮದ 14ನೇ ಸೀಸನ್‌ನಲ್ಲಿ ರಾಜೇಶ್ ಕೃಷ್ಣನ್ ಬದಲು ಹಂಸಲೇಖ ಮಹಾಗುರುವಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ಹೌದು, ಜೀ ಕನ್ನಡ ವಾಹಿನಿಯ ಜನಪ್ರಿಯ ಶೋಗಳಲ್ಲೊಂದಾದ “ಸರಿಗಮಪ ಲಿಟ್ಲ ಚಾಂಪ್ಸ್’ನ 14ನೇ ಸೀಸನ್ ಇಂದಿನಿಂದ ಪ್ರಾರಂಭವಾಗುತ್ತಿದೆ. ಈ ಬಾರಿಯ “ಸರಿಗಮಪ ಲಿಟ್ಲ ಚಾಂಪ್ಸ್’ನ ತೀರ್ಪುಗಾರರಾಗಿ ಅರ್ಜುನ್ ಜನ್ಯ ಹಾಗೂ ವಿಜಯಪ್ರಕಾಶ್ ಅವರ ಜೊತೆಗೆ ಮಹಾಗುರುಗಳಾಗಿ ಹಂಸಲೇಖ ಇರುತ್ತಾರೆ. ಇನ್ನು ಅನುಶ್ರೀ ಅವರು ತಮ್ಮದೇ ಶೈಲಿಯಲ್ಲಿ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
“ಸರಿಗಮಪ ಲಿಟ್ಲ ಚಾಂಪ್ಸ್’ನ ಈ ಬಾರಿಯ ಸೀಸನ್ ಪೋಷಕರಿಗೆ ಅರ್ಪಣೆ ಮಾಡಲಾಗುತ್ತಿದ್ದು, ಎಂದಿನಂತೆ ಮೊದಲ ಸಂಚಿಕೆಯಲ್ಲಿ ಮೆಗಾ ಆಡಿಷನ್ ನಡೆಯಲಿದೆ. ಈ ಮೆಗಾ ಆಡಿಷನ್‌ನಲ್ಲಿ 30 ಸ್ಪರ್ಧಿಗಳು ಭಾಗವಹಿಸುತ್ತಿದ್ದು, ಇವರಲ್ಲಿ ಯಾರು ತಮ್ಮ ಇಂಪಾದ ದನಿಯಿಂದ ತೀರ್ಪುಗಾರರ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ತೆರೆಸುತ್ತಾರೋ, ಅವರು ಸೀಸನ್‌ನಲ್ಲಿ ಮುಂದುವರೆಯುತ್ತಾರೆ.
ಈ ವೇದಿಕೆಯಲ್ಲಿ ಈ ಬಾರಿಯೂ 15 ಜ್ಯೂರಿ ಸದಸ್ಯರುಗಳು ಇದ್ದು, ಪ್ರತಿಯೊಬ್ಬ ಸ್ಪರ್ಧಿಗೂ ಈ 15 ಜ್ಯೂರಿ ಸದಸ್ಯರು ತಮ್ಮ ಅಂಕಗಳನ್ನು ನೀಡುತ್ತಾರೆ. ಈ “ಸರಿಗಮಪ ಲಿಟ್ಲ ಚಾಂಪ್ಸ್’ನ ಈ ಬಾರಿಯ ಸೀಸನ್ ಇಂದು ರಾತ್ರಿ ಶುರುವಾಗಲಿದ್ದು, ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.