ಸಾವಿರ ಕೋಟಿ ಕ್ಲಬ್‌ಗೆ ಕನ್ನಡದ ಕೆಜಿಎಫ್-2;  ಈ ಸಾಧನೆಯ ಮೊದಲ ಕನ್ನಡ ಸಿನೆಮಾ

ಬಾಲಿವುಡ್‌ನಲ್ಲಿ ರಾಕಿ ಹವಾ

Team Udayavani, Apr 30, 2022, 7:25 AM IST

ಸಾವಿರ ಕೋಟಿ ಕ್ಲಬ್‌ಗ ಕನ್ನಡದ ಕೆಜಿಎಫ್-2;  ಈ ಸಾಧನೆಯ ಮೊದಲ ಕನ್ನಡ ಸಿನೆಮಾ

ಬೆಂಗಳೂರು:  ನಿರೀಕ್ಷೆಯಂತೆಯೇ ಯಶ್‌ ನಟನೆಯ “ಕೆಜಿಎಫ್-2′ ಚಿತ್ರ ಒಂದು ಸಾವಿರ ಕೋಟಿ ರೂ.ಕಲೆಕ್ಷನ್‌ ಮಾಡಿದ್ದು, ಈ ಸಾಧನೆ ಮಾಡಿರುವ ಮೊದಲ ಕನ್ನಡ ಮೊದಲ ಹಾಗೂ ಭಾರತೀಯ ಚಿತ್ರರಂಗದ ನಾಲ್ಕನೇ ಸಿನೆಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬಿಡುಗಡೆಯಾದ ದಿನದಿಂದಲೇ ಕಲೆಕ್ಷನ್‌ನಲ್ಲಿ ನಾಗಾಲೋಟದಲ್ಲೇ ಸಾಗಿದ “ಕೆಜಿಎಫ್-2′  15ನೇ ದಿನಕ್ಕೆ ಸಾವಿರ ಕೋಟಿ ಕಲೆಕ್ಷನ್‌ ಮಾಡುವ ಮೂಲಕ ಅತಿ ವೇಗದಲ್ಲಿ ಸಾವಿರ ಕೋಟಿ ಕ್ಲಬ್‌ ಸೇರಿದೆ. ಗುರುವಾರದ  ವೇಳೆಗೆ ಚಿತ್ರದ ಜಾಗತಿಕ  ಕಲೆಕ್ಷನ್‌ 997 ಕೋಟಿ ರೂ. ದಾಟಿದ್ದು, ಶುಕ್ರವಾರದ   ಸಾವಿರ ಕೋಟಿ ರೂಪಾಯಿಯ ಸಾಧನೆ ಮಾಡಿತು.

ಈಗಾಗಲೇ ಒಂದು ಸಾವಿರ ಕೋಟಿ ರೂ. ಕಲೆಕ್ಷನ್‌ ಮಾಡಿರುವ ಭಾರತೀಯ ಸಿನೆಮಾಗಳಲ್ಲಿ “ಕೆಜಿಎಫ್-2′ ನಾಲ್ಕನೇ ಚಿತ್ರ. “ದಂಗಲ್‌’, “ಬಾಹುಬಲಿ-2′ ಹಾಗೂ “ಆರ್‌ಆರ್‌ಆರ್‌’ ಚಿತ್ರ ಬಿಟ್ಟರೆ ಸಾವಿರ ಕೋಟಿ ಕ್ಲಬ್‌ ಸೇರಿದ ಹೆಗ್ಗಳಿಕೆ “ಕೆಜಿಎಫ್-2’ನದ್ದು.

“ಕೆಜಿಎಫ್-2′ ಚಿತ್ರ ಬಿಡುಗಡೆಯಾದ ಎಲ್ಲ ಕಡೆಗಳಲ್ಲೂ ಭರ್ಜರಿ ಪ್ರದರ್ಶನವನ್ನು ಮುಂದುವರಿಸಿಕೊಂಡು ಹೋದ ಪರಿಣಾಮ ಮೊದಲ ವಾರ 723 ಕೋಟಿ ರೂ.ಗೂ ಅಧಿಕ ಕಲೆಕ್ಷನ್‌ ಮಾಡಿದರೆ, ಎರಡನೇ ವಾರ  ಚಿತ್ರ 223 ಕೋಟಿ ರೂ.ಗೂ  ಅಧಿಕ ಕಲೆಕ್ಷನ್‌ ಮಾಡಿದೆ. ಚಿತ್ರ ಈಗ ಮೂರನೇ ವಾರ ಮುನ್ನುಗ್ಗುತ್ತಿದ್ದು, ಕಲೆಕ್ಷನ್‌ ವಿಷಯದಲ್ಲಿ ಬಿಡುಗಡೆಯಾದ ಎಲ್ಲ ಭಾಷೆಯ ಸಿನೆಮಾಗಳಿಗೆ ತೀವ್ರ ಪೈಪೋಟಿ ನೀಡಿ ಸಾಗುತ್ತಿದೆ.

ಬಾಲಿವುಡ್‌ನಲ್ಲಿ ರಾಕಿಭಾಯ್‌ ಹವಾ
ಸ್ಯಾಂಡಲ್‌ವುಡ್‌ನಿಂದ ತಯಾರಾಗಿ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ “ಕೆಜಿಎಫ್-2′ ಚಿತ್ರ ಬಾಲಿವುಡ್‌ನಲ್ಲಿ ಭರ್ಜರಿ ಕಮಾಲ್‌ ಮಾಡಿದೆ. ಅಲ್ಲಿನ ಹಿಂದಿನ ಚಿತ್ರಗಳು ಮಾಡಿದ ಹಿಂದಿನ ಎಲ್ಲ ದಾಖಲೆಗಳನ್ನು ಉಡೀಸ್‌ ಮಾಡಿ ರಾಕಿಭಾಯ್‌ ಹವಾ ಮುಂದುವರೆದಿದೆ. ಬಾಲಿವುಡ್‌ವೊಂದರಲ್ಲೇ “ಕೆಜಿಎಫ್-2′ ಚಿತ್ರ 350 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್‌ ಮಾಡಿ, ಉತ್ತರದ ಮಂದಿ ಹಾಟ್‌ ಫೇವರಿಟ್‌ ಎನಿಸಿಕೊಂಡಿದೆ.

ಪ್ರಥಮ, ದ್ವಿತೀಯ ಎರಡೂ “ಕೆಜಿಎಫ್’ ಮುಡಿಗೆ
ಕನ್ನಡದಲ್ಲಿ ತಯಾರಾಗಿ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಸಿನೆಮಾಗಳಲ್ಲಿ “ಕೆಜಿಎಫ್-1′ ಹಾಗೂ “ಕೆಜಿಎಫ್-2′ ಸಿಗುತ್ತದೆ. “ಕೆಜಿಎಫ್-1′ ಚಿತ್ರ ಅಂದು 250 ಕೋಟಿ ರೂ.ಗಳಿಗಿಂತಲೂ ಅಧಿಕ ಕಲೆಕ್ಷನ್‌ ಮಾಡಿ, ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಕನ್ನಡದ ಮೊದಲ ಸಿನೆಮಾ ಎನಿಸಿತ್ತು. ಈಗ ಆ ದಾಖಲೆಯನ್ನು “ಕೆಜಿಎಫ್-2′ ಮುರಿದಿದೆ. ಈ ಮೂಲಕ ನಿರ್ಮಾಪಕ ವಿಜಯ್‌ ಕಿರಗಂದೂರು ಹಾಗೂ ನಿರ್ದೇಶಕ ಪ್ರಶಾಂತ್‌ ನೀಲ್‌ ಖುಷಿಯಾಗಿದ್ದಾರೆ.

ಇತ್ತೀಚೆಗೆ ಅತಿ ಹೆಚ್ಚು ಕಲೆಕ್ಷನ್‌ ಮಾಡಿದ ಕನ್ನಡ ಸಿನೆಮಾಗಳು

– ಕುರುಕ್ಷೇತ್ರ
–  ರಾಬರ್ಟ್‌
–  ರಾಜ್‌ಕುಮಾರ
–  ಜೇಮ್ಸ್‌
–  ಪೈಲ್ವಾನ್‌

ಟಾಪ್ ನ್ಯೂಸ್

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ

BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ

99 ರೂಪಾಯಿಗೆ ಆರಾಮ್‌ ಸಿನಿಮಾ: ಅರವಿಂದ ಸ್ವಾಮಿ ಹೊಸ ಪ್ಲ್ರಾನ್

Sandalwood: 99 ರೂಪಾಯಿಗೆ ಆರಾಮ್‌ ಸಿನಿಮಾ: ಅರವಿಂದ ಸ್ವಾಮಿ ಹೊಸ ಪ್ಲ್ರಾನ್

navagraha movie re release

Darshan; ಭರ್ಜರಿ ಓಪನಿಂಗ್‌ ನಿರೀಕ್ಷೆಯಲ್ಲಿ ನವಗ್ರಹ: ರೀರಿಲೀಸ್‌ ಚಿತ್ರದಲ್ಲಿ ದರ್ಶನ್‌ ಹವಾ

Renukaswamy Case: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

Renukaswamy Case: ಪವಿತ್ರಾ ಗೌಡ ಸೇರಿ ನಾಲ್ವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

12-muniratna

Bengaluru: ಶಾಸಕ ಮುನಿರತ್ನ ಕೇಸ್‌: ವಿಕಾಸಸೌಧದಲ್ಲಿ ಸ್ಥಳ ಮಹಜರು

1(1)

Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

11-kushtagi

Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.