ಎಂ.ಡಿ.ಶ್ರೀಧರ್ ಅಕೌಂಟ್‌ನಲ್ಲಿ ಮೂರು ಸಿನಿಮಾ
Team Udayavani, Aug 28, 2017, 10:44 AM IST
ನಿರ್ದೇಶಕ ಎಂ.ಡಿ.ಶ್ರೀಧರ್ ಮತ್ತೆ ನಿರ್ದೇಶನಕ್ಕೆ ಅಣಿಯಾಗಿದ್ದಾರೆ. ಒಂದಲ್ಲ, ಎರಡಲ್ಲ ಮೂರು ಚಿತ್ರಗಳನ್ನು ಮಾಡಲು ಶ್ರೀಧರ್ ಸಿದ್ಧತೆ ಮಾಡಿಕೊಂಡಿದ್ದಾರೆ. ಗಣೇಶ್ ಅವರ “ಬುಗುರಿ’ ಚಿತ್ರದ ನಂತರ ಶ್ರೀಧರ್ ಯಾವುದೇ ಸಿನಿಮಾ ಮಾಡಿರಲಿಲ್ಲ. ಈಗ ಮೂರು ಚಿತ್ರಗಳ ಜೊತೆ ವಾಪಾಸ್ ಆಗುತ್ತಿದ್ದಾರೆ. ಈ ಮೂರರಲ್ಲಿ ಹೊಸಬರ ಹಾಗೂ ಸ್ಟಾರ್ ನಟನ ಚಿತ್ರವೂ ಇದೆ ಅನ್ನೋದು ವಿಶೇಷ.
ಈಗಾಗಲೇ ಶ್ರೀಧರ್ ನಿರ್ದೇಶನದ ಇನ್ನೂ ಹೆಸರಿಡ ಚಿತ್ರದ ಮುಹೂರ್ತ ಭಾನುವಾರ ನಡೆದಿದೆ. ಸುಶೀಲ್ ಎನ್ನುವವರು ಈ ಚಿತ್ರದ ಹೀರೋ. ಸದ್ಯ ಚಿತ್ರಕ್ಕೆ ಮುಹೂರ್ತವಾಗಿದ್ದು, ಬಿಟ್ಟರೆ ಮಿಕ್ಕಂತೆ ಸಾಕಷ್ಟು ಸಿದ್ಧತೆಗಳು ಬಾಕಿ ಇವೆ. ತುಂಬಾ ರಗಡ್ ಆಗಿರುವಂತಹ ಒಂದು ಥ್ರಿಲ್ಲರ್ ಸಬೆಕ್ಟ್ ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದಾರೆ. ಇದು ಪಕ್ಕಾ ಹೊಸ ಹೀರೋ ಸಿನಿಮಾ ವಿಷಯವಾದರೆ, ಶ್ರೀಧರ್ ಇದಕ್ಕಿಂತ ಮುನ್ನ ಮತ್ತೂಂದು ಸಿನಿಮಾ ಮಾಡಲಿದ್ದಾರೆ.
ಈಗಾಗಲೇ ಚಿತ್ರರಂಗದಲ್ಲಿ ಬೇಡಿಕೆಯಲ್ಲಿರುವ ನಟರೊಬ್ಬರ ಜೊತೆ ಮಾತುಕತೆ ನಡೆಯುತ್ತಿದ್ದು, ಸದ್ಯದಲ್ಲೇ ಆ ಪ್ರಾಜೆಕ್ಟ್ ಕೂಡಾ ಶುರು ಮಾಡುವ ಉದ್ದೇಶ ಶ್ರೀಧರ್‌ಗಿದೆ. ಎರಡು ಓಕೆ, ಇನ್ನೊಂದು ಸಿನಿಮಾ ಯಾವುದೆಂದು ನೀವು ಕೇಳಬಹುದು. ಅದು ದರ್ಶನ್ ಅವರಿಗೆ. ಹೌದು, ದರ್ಶನ್ ಅವರಿಗೆ ಎಂ.ಡಿ.ಶ್ರೀಧರ್ ಸಿನಿಮಾ ಮಾಡಲಿದ್ದು, ದರ್ಶನ್ ಅವರ 54ನೇ ಸಿನಿಮಾ ನಿರ್ದೇಶಿಸುವ ಅವಕಾಶ ಸಿಕ್ಕಿದೆ.
ಈ ಹಿಂದೆ ದರ್ಶನ್ ಅವರ “ಬುಲ್ ಬುಲ್’ ಸಿನಿಮಾ ಮಾಡಿದ ತಂಡ ಈ ಮೂಲಕ ಮತ್ತೆ ಒಂದಾಗಲಿದೆ. ದರ್ಶನ್, ಶ್ರೀಧರ್, ಕೃಷ್ಣಕುಮಾರ್, ಕವಿರಾಜ್ ಸೇರಿದಂತೆ ಒಂದಷ್ಟು ಮಂದಿ ಸ್ನೇಹಿತರು ಈ ಸಿನಿಮಾದಲ್ಲಿ ಜೊತೆಯಾಗಿದ್ದರು. “ಬುಲ್ ಬುಲ್’ ಚಿತ್ರ ಕೂಡಾ ಯಶಸ್ಸು ಕಂಡಿತ್ತು. ಈಗ ಮತ್ತೆ ಆ ತಂಡ ಜೊತೆಯಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.