ಪಾನಿಪುರಿಯೊಳಗೆ ಥ್ರಿಲ್ಲರ್‌ ಟೇಸ್ಟ್‌!


Team Udayavani, Oct 2, 2017, 12:11 PM IST

Pani-Puri_(117).jpg

“ಬ್ಯಾಂಕ್‌ ದರೋಡೆ ದೃಶ್ಯಗಳು ಇದ್ದುದಕ್ಕೇ ಸೆನ್ಸಾರ್‌ ಮಂಡಳಿ ನಮಗೆ “ಎ’ ಪ್ರಮಾಣ ಪತ್ರ ನೀಡಿದೆ. ನಿಜವಾಗಿಯೂ ನಮಗೆ ಅದೊಂದು ಬೇಸರದ ವಿಷಯ…’ ಹೀಗೆ ಹೇಳಿ ಕೊಂಚ ಬೇಸರ ಹೊರ ಹಾಕಿದರು ನಿರ್ದೇಶಕ ಕೆ.ಪಿ.ನವೀನ್‌ಕುಮಾರ್‌. ಅವರು ಹೇಳಿಕೊಂಡಿದ್ದು, “ಪಾನಿ ಪುರಿ’ ಚಿತ್ರದ ಕುರಿತು. ಹೊಸತಂಡ ಸೇರಿಕೊಂಡು “ಪಾನಿ ಪುರಿ’ ಚಿತ್ರ ಮಾಡಿ ಮುಗಿಸಿದೆ. ಮುಂದಿನ ತಿಂಗಳು ಬಿಡುಗಡೆಗೂ ರೆಡಿಯಾಗಿದೆ. ಸಿನಿಮಾ ಬಗ್ಗೆ ಹೇಳಿಕೊಳ್ಳಲೆಂದೇ ನಿರ್ದೇಶಕ ನವೀನ್‌ ತಮ್ಮ ತಂಡವನ್ನು ಪತ್ರಕರ್ತರ ಮುಂದೆ ಕರೆ ತಂದಿದ್ದರು.

ಮೊದಲು ಮಾತಿಗಿಳಿದ ನಿರ್ದೇಶಕ ನವೀನ್‌ಕುಮಾರ್‌, “ಇದೊಂದು ಥ್ರಿಲ್ಲರ್‌ ಸಬೆಕ್ಟ್. ಒಂದು ಬ್ಯಾಂಕ್‌ ದರೋಡೆ ಮಾಡಿ ದಿಢೀರ್‌ ಶ್ರೀಮಂತರಾಗಬೇಕು ಅಂತ ಹೊರಡುವ ಮಂದಿ ಎಷ್ಟೆಲ್ಲಾ ಸಮಸ್ಯೆ ಎದುರಾಗುತ್ತೆ ಎಂಬುದು ಹೈಲೈಟ್‌. ಇಲ್ಲಿ ಒಳ್ಳೆಯ ಕೆಲಸ ಮಾಡಿದರೆ, ಒಳ್ಳೆಯದಾಗುತ್ತೆ, ಕೆಟ್ಟ ದಾರಿಗೆ ಹೋದವರು ಏನೆಲ್ಲಾ ಸಂಕಷ್ಟ ಅನುಬವಿಸುತ್ತಾರೆ. ಅಡ್ಡ ದಾರಿ ಹಿಡಿದರೆ ಎಷ್ಟೆಲ್ಲಾ ಸಮಸ್ಯೆ ಎದುರಾಗುತ್ತೆ ಎಂಬುದು ಸಿನಿಮಾದ ಪ್ರಮುಖ ಅಂಶ’ ಅಂತ ವಿವರ ಕೊಟ್ಟರು ಅವರು. ಅಂದಹಾಗೆ, ಈ ಚಿತ್ರ ಶುರುವಾಗಿ ಎರಡು ವರ್ಷಗಳೇ ಕಳೆದಿವೆ.

ನಾಯಕಿಯರಾದ ಅನು, ಅಕ್ಷತಾ, ದರ್ಶಿತಾ ಸಿನಿಮಾ ಶುರುವಿಗೆ ಕಾರಣ. ಇನ್ನು, ಸೆನ್ಸಾರ್‌ ಮಂಡಳಿ ಕೊಟ್ಟ ಪ್ರಮಾಣ ಪತ್ರದಿಂದ ನಮಗೆ ಬೇಸರವೂ ಆಗಿದೆ. ಯಾಕೆಂದರೆ, ಬ್ಯಾಂಕ್‌ ದರೋಡೆ ದೃಶ್ಯಗಳಿವೆ ಎಂಬ ಒಂದೇ ಕಾರಣಕ್ಕೆ, “ಎ’ ಪ್ರಮಾಣ ಪತ್ರ ನೀಡಿದೆ. ಇದು ಎಷ್ಟರ ಮಟ್ಟಿಗೆ ಸರಿನೋ ಗೊತ್ತಿಲ್ಲ’ ಅಂತ ಸಣ್ಣದ್ದೊಂದು ಆರೋಪ ಮಾಡಿದರು ಅವರು. ನಿರ್ದೇಶಕರ ಬೇಸರದ ಈ ಮಾತಿಗೆ ಪ್ರತಿಕ್ರಿಯಿಸಿದ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್‌ ಬಣಕಾರ್‌, ಕಲಾದರ ಹಾಗು ನಿರ್ಮಾಪಕರ ಸಂಘಕ್ಕೆ ದೂರು ನೀಡಬೇಕಾಗಿತ್ತು. ಎಲ್ಲವೂ ಮುಗಿದ ಮೇಲೆ ಈಗ ಏನು ಮಾಡಲು ಬರುವುದಿಲ್ಲ.

ಸೆನ್ಸಾರ್‌ಗೆ ಸಂಬಂಧಿಸಿದಂತೆ ಅಲ್ಲಿನ ಅಧಿಕಾರಿಗಳನ್ನು ಕರೆಸಿ, ಮಾತುಕತೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಿ ಹೋಗಬಹುದೆಂಬ ಭರವಸೆ ನಮಗಿದೆ ಎಂದರು ಬಣಕಾರ್‌. ಇನ್ನು, ಚಿತ್ರದಲ್ಲಿ ಮೂವರು ನಾಯಕರಿದ್ದಾರೆ. ಆ ಪೈಕಿ ಜಗದೀಶ್‌ ಮತ್ತು ವೈಭವ್‌ ಮಾತ್ರ ಹಾಜರಿದ್ದರು. ಇನ್ನೊಬ್ಬ ನಾಯಕ ಸಂಜಯ್‌ ಗೈರಾಗಿದ್ದರು. ಜಗದೀಶ್‌ ಹಾಗೂ ವೈಭವ್‌ ತಮ್ಮ ಪಾತ್ರ ಹಾಗೂ ಚಿತ್ರದ ಅನುಭವ ಹಂಚಿಕೊಂಡರು. ಹಂಸಲೇಖ ಅವರ ಶಿಷ್ಯ ಸಂತೋಷ್‌ ಬಾಗಲಕೋಟೆ ಐದು ಹಾಡುಗಳಿಗೆ ರಾಗ ಒದಗಿಸಿದ್ದಾರೆ.

ಆ ಹಾಡುಗಳಲ್ಲಿ ಉತ್ತರ ಕರ್ನಾಟಕ ಶೈಲಿಯ ಕವಾಲಿ ಹಾಡು ಇರುವುದು ವಿಶೇಷವಂತೆ. ಇಲ್ಲಿ ರೋಬೋ ಗಣೇಶ್‌ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆ ಪಾತ್ರ ಪ್ರೇಕ್ಷಕರ ಮನಸ್ಸಲ್ಲಿ ಅಚ್ಚಳಿಯದೆ ಉಳಿಯಲಿದೆ ಎಂಬುದು ಚಿತ್ರತಂಡದ ಮಾತು. ಪುಟ್ಟರಾಜು ಅವರಿಗೆ ಇದು ಮೊದಲ ನಿರ್ಮಾಣದ ಸಿನಿಮಾ. ಆದರೆ, ಅವರು ಸಂಪೂರ್ಣ ಜವಬ್ದಾರಿಯನ್ನು ನಿರ್ದೇಶಕರ ಮೇಲೆ ಹೊರಿಸಿದ್ದರಿಂದ ಅವರೇ ಎಲ್ಲವನ್ನೂ ನೋಡಿಕೊಂಡಿದ್ದಾರಂತೆ. ಅಂದಹಾಗೆ, ಅಕ್ಟೋಬರ್‌ನಲ್ಲಿ “ಪಾನಿಪುರಿ’ ತೆರೆಗೆ ಬರುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

Donald-Trumph

US; ನೀಲಿತಾರೆ ಹಣ ಪ್ರಕರಣ: ಟ್ರಂಪ್‌ ಬೇಷರತ್‌ ರಿಲೀಸ್‌

Supreme Court

Sambhal ಬಾವಿ ಬಗ್ಗೆ ಯಾವ ಕ್ರಮವೂ ಬೇಡ: ಸುಪ್ರೀಂಕೋರ್ಟ್‌

Yogi (2)

Maha Kumbh; ಜಾಗ ಕೇಳಿದರೆ ಹುಷಾರ್‌: ವಕ್ಫ್ ಬೋರ್ಡ್‌ಗೆ ಎಚ್ಚರಿಕೆ ನೀಡಿದ ಯೋಗಿ

1-indd

Republic Day; ಇಂಡೋನೇಷ್ಯ ಅಧ್ಯಕ್ಷ ಸುಬೈಂತೊ ಅತಿಥಿ?

PCB

Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ

High-Court

ಪಿಲಿಕುಳದಲ್ಲಿ ಕಂಬಳ: ವಿಚಾರಣೆ ಜನವರಿ 21ಕ್ಕೆ ಮುಂದೂಡಿಕೆ

VInaya-gurji

ಇದೇ ಅವಧಿಯಲ್ಲಿ ಡಿ.ಕೆ.ಶಿವಕುಮಾರ್‌ ಸಿಎಂ ಆಗ್ತಾರೆ: ವಿನಯ ಗುರೂಜಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

BBK11: ದೈತ್ಯ ಸ್ಪರ್ಧಿಗಳನ್ನು ಸೋಲಿಸಿ ಫಿನಾಲೆಗೆ ಎಂಟ್ರಿ ಕೊಟ್ಟ ಹಳ್ಳಿಹೈದ ಹನುಮಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

Sandalwood: ‘ಕೋರ’ ಚಿತ್ರದ ಟ್ರೇಲರ್‌ ಬಂತು

ulock

Sandalwood: ಅನ್‌ಲಾಕ್‌ ರಾಘವದಿಂದ ಲಾಕ್‌ ಸಾಂಗ್‌ ಬಂತು

yogaraj bhat song in Manada kadalu movie

Manada Kadalu: ಭಟ್ರು ಬರೆದ ಅನರ್ಥ ಹಾಡು: ಮನದ ಕಡಲಿನಲ್ಲಿ ತುರ್ರಾ…

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

Sandalwood: ಹೊಸ ವರ್ಷ ಹಳೇ ಸಮಸ್ಯೆ… ಮತ್ತೆ ಥಿಯೇಟರ್‌ ರಗಳೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Donald-Trumph

US; ನೀಲಿತಾರೆ ಹಣ ಪ್ರಕರಣ: ಟ್ರಂಪ್‌ ಬೇಷರತ್‌ ರಿಲೀಸ್‌

Supreme Court

Sambhal ಬಾವಿ ಬಗ್ಗೆ ಯಾವ ಕ್ರಮವೂ ಬೇಡ: ಸುಪ್ರೀಂಕೋರ್ಟ್‌

Yogi (2)

Maha Kumbh; ಜಾಗ ಕೇಳಿದರೆ ಹುಷಾರ್‌: ವಕ್ಫ್ ಬೋರ್ಡ್‌ಗೆ ಎಚ್ಚರಿಕೆ ನೀಡಿದ ಯೋಗಿ

1-indd

Republic Day; ಇಂಡೋನೇಷ್ಯ ಅಧ್ಯಕ್ಷ ಸುಬೈಂತೊ ಅತಿಥಿ?

PCB

Champions Trophy ಸ್ಥಳಾಂತರ ಸುದ್ದಿಯನ್ನು ತಳ್ಳಿಹಾಕಿದ ಪಿಸಿಬಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.