ಥ್ರಿಲ್ಲರ್ ವೇಗದೂತ
Team Udayavani, Sep 11, 2018, 11:28 AM IST
ಸಾಮಾನ್ಯವಾಗಿ ಹೊಸಬರ ಚಿತ್ರಗಳಿಗೆ ಸ್ಟಾರ್ ನಟರುಗಳು ಬಂದು ಕ್ಲಾಪ್ ಮಾಡುವುದು, ಕ್ಯಾಮೆರಾಗೆ ಚಾಲನೆ ಕೊಡುವುದು ಸಹಜ. ಅಂಥದ್ದೇ ಒಂದು ಹೊಸ ತಂಡದ ಚಿತ್ರಕ್ಕೆ ನಟ ಯೋಗಿ ಸಾಥ್ ನೀಡಿದ್ದಾರೆ. ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ. ಹೌದು, “ವೇಗದೂತ’ ಎಂಬ ಚಿತ್ರದ ಮುಹೂರ್ತ ಕತ್ರಿಗುಪ್ಪೆಯಲ್ಲಿರುವ ಶ್ರೀ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಚಿತ್ರದ ಮೊದಲ ದೃಶ್ಯಕ್ಕೆ ಲೂಸ್ ಮಾದ ಯೋಗಿ ಕ್ಲಾಪ್ ಮಾಡಿದರೆ, ಸೇನಾ ಅಧಿಕಾರಿ ತಾರೇಶ್ ಕ್ಯಾಮರಾ ಚಾಲನೆ ಮಾಡಿದರು.
“ವೇಗದೂತ’ ಚಿತ್ರಕ್ಕೆ ಪ್ರದೀಪ್ ಚಂದ್ರ ನಿರ್ದೇಶಕರು. ಈ ಹಿಂದೆ ಕಿರುಚಿತ್ರಗಳನ್ನು ನಿರ್ದೇಶಿಸಿರುವ ಪ್ರದೀಪ್ ಚಂದ್ರ ಅವರಿಗೆ ಇದು ಮೊದಲ ಸಿನಿಮಾ. ಇದೊಂದು ಥ್ರಿಲ್ಲರ್ ಅಂಶಗಳನ್ನು ಹೊಂದಿರುವ ಕಥೆ. ಮೊದಲರ್ಧ ಗ್ರಾಮೀಣ ಪ್ರದೇಶ ಉಳಿದದ್ದು ನಗರದಲ್ಲಿ ಚಿತ್ರೀಕರಣ ನಡೆಯಲಿದೆ. ಬಹುತೇಕ ರಾತ್ರಿ ವೇಳೆಯಲ್ಲಿ ಕಥೆ ಸಾಗಲಿದೆ. ಚಿತ್ರದಲ್ಲಿ ಸ್ಮಗ್ಲಿಂಗ್, ಸೆಂಟಿಮೆಂಟ್, ಪೋಲಿಸ್ ಫ್ಯಾಮಿಲಿ, ಲವ್ ಅಂಶಗಳೂ ಇಲ್ಲಿವೆ.
ಬಹುತೇಕ ಬೆಂಗಳೂರು ಮತ್ತು ಹಾಸನ ಸುತ್ತ ಮುತ್ತ ಚಿತ್ರೀಕರಣ ನಡೆಯಲಿದೆ. ಶ್ರೀನಿವಾಸ್ ಗೌಡ ಚಿತ್ರದ ನಿರ್ಮಾಪಕರು. ಚಿತ್ರಕ್ಕೆ ಸಾಯಿ ಕಿರಣ್ ಸಂಗೀತವಿದೆ. ಉಮೇಶ್ ಛಾಯಾಗ್ರಹಣವಿದೆ. ಕಿಟ್ಟಪ್ಪ ಸಂಕಲನ ಮಾಡಿದರೆ, ಅಪ್ಪು ವೆಂಕಟೇಶ್ ಸಾಹಸವಿದೆ. ಸಂದೀಪ್, ಪ್ರದೀಪ್, ಅಂಜನ್, ಪೂಜಾರಿ, ಪ್ರಮೋದ್‌ಶೆಟ್ಟಿ, ಚೈತ್ರ, ರಾಜೇಶ್ವರಿ, ರೇಣು, ಗೌರವ್, ಲಿರಿನ್ ಕಾವೇರಪ್ಪ, ಮಂಜು ಇತರರು ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.