ಕನ್ನಡಕ್ಕೆ ಒಬ್ಬರೇ ಟೈಗರ್- ಅದು ಪ್ರಭಾಕರ್
Team Udayavani, Jun 7, 2017, 12:42 PM IST
ಈಗ ಕನ್ನಡ ಚಿತ್ರರಂಗದಲ್ಲಿ ತುಂಬಾ ಟೈಗರ್ಗಳು ಹುಟ್ಟಿಕೊಳ್ಳುತ್ತಿವೆಯಲ್ಲ …’ ಅಜೇಯ್ ರಾವ್ ಕೈಯಲ್ಲಿದ್ದ ಮೈಕ್ ಅನ್ನು ಪಕ್ಕ ಸರಿಸಿಕೊಂಡು ಹೀಗೆ ಹೇಳಿದರು ವಿನೋದ್ ಪ್ರಭಾಕರ್. ವಿನೋದ್ ಹೀಗೆ ಹೇಳಲು ಕಾರಣ ಅಜೇಯ್ ಮಾತು. ಟ್ರೇಲರ್ ನೋಡಿದ ಬಳಿಕ ಮಾತನಾಡಿದ ಅಜೇಯ್, “ಗೆಳೆಯ ನೀನು ಇನ್ನೂ “ಮರಿ ಟೈಗರ್’ ಎಂದು ಗೆರೆ ಹಾಕಿಕೊಳ್ಳಬೇಡ. ಟೈಗರ್ ಆಗಿ ಮುನ್ನುಗ್ಗು’ ಎಂದು ಶುಭ ಹಾರೈಸಿದರು.
ಆ ಸಂದರ್ಭದಲ್ಲಿ ವಿನೋದ್, “ಹೊಸ ಹೊಸ ಟೈಗರ್ ಗಳು ಹುಟ್ಟಿಕೊಳ್ಳುತ್ತಿವೆ’ ಎಂದರು. ವಿನೋದ್ ಪ್ರಭಾಕರ್ ಹೇಳುವಂತೆ ಕನ್ನಡ ಚಿತ್ರರಂಗಕ್ಕೆ ಒಬ್ಬರೇ ಟೈಗರ್. ಅದು ವಿನೋದ್ ಪ್ರಭಾಕರ್. “ನನಗೆ ಅಪ್ಪನ ಹೆಸರಿನಲ್ಲಿ ಗುರುತಿಸಿಕೊಳ್ಳಲು ಇಷ್ಟವಿಲ್ಲ. ಸ್ವಂತ ಪ್ರತಿಭೆಯಿಂದ ಮೇಲೆ ಬರಬೇಕೆಂಬ ಆಸೆ ನನ್ನದು. ಕನ್ನಡ ಚಿತ್ರರಂಗಕ್ಕೆ ಯಾವತ್ತಿದ್ದರೂ ಒಬ್ಬರೇ ಟೈಗರ್’ ಎನ್ನುವುದು ವಿನೋದ್ ಮಾತು. ವಿನೋದ್ ಪ್ರಭಾಕರ್ಗೆ ಅನೇಕರು ಒಂದು ಪ್ರಶ್ನೆ ಕೇಳುತ್ತಾರಂತೆ.
“ಯಾಕೆ ನೀವು ಜಾಸ್ತಿ ಸಿನಿಮಾ ಮಾಡಲ್ಲ, ಎರಡೂರು ವರ್ಷಕ್ಕೊಂದು ಸಿನಿಮಾ ಯಾಕೆ ಮಾಡುತ್ತೀರಿ’ ಎಂದು. ವಿನೋದ್ ಪ್ರಭಾಕರ್ ಗೆ ಸಿನಿಮಾ ಮೇಲೆ ಸಿನಿಮಾ ಮಾಡಲು, ಸಿನಿಮಾ ಪಟ್ಟಿ ಬೆಳೆಸಿಕೊಳ್ಳಲು ಇಷ್ಟವಿಲ್ಲವಂತೆ. “ನಾನು ಒಂದು ಯಶಸ್ಸಿಗೆ 14 ವರ್ಷ ಕಾಯಬೇಕಾಯಿತು. ಯಶಸ್ಸು ಬಂದ ನಂತರ ಸಿನಿಮಾ ಆಫರ್ ಬರುತ್ತದೆಂದು ಸಿಕ್ಕಿದ್ದೆಲ್ಲಾ ಒಪ್ಪಿಕೊಂಡು ಕೆರಿಯರ್ ಹಾಳು ಮಾಡಿಕೊಳ್ಳಲು ನನಗೆ ಇಷ್ಟವಿಲ್ಲ.
ವರ್ಷಕ್ಕೆ ಒಂದೇ ಸಿನಿಮಾ ಮಾಡಿದರೂ ಒಳ್ಳೆಯ ಸಿನಿಮಾ ಮಾಡುತ್ತೇನೆ. “ಟೈಸನ್’ ನಂತರ 18 ಕಥೆ ಕೇಳಿದೆ. ಅದರಲ್ಲಿ “ಕ್ರ್ಯಾಕ್’ ತುಂಬಾ ಇಷ್ಟವಾಯಿತು. ಈ ಸಿನಿಮಾ ನಂತರ ನನ್ನನ್ನು ಒಬ್ಬ ಪರ್ಫಾರ್ಮರ್ ಆಗಿ ಜನ ಗುರುತಿಸುತ್ತಾರೆ. ಚಿತ್ರತಂಡ ಕೊಟ್ಟ ಬಿರುದಿನಂತೆ “ಲೀಡಿಂಗ್ ಸ್ಟಾರ್’ ಆಗುತ್ತೇನೆಂಬ ವಿಶ್ವಾಸವಿದೆ’ ಎನ್ನುವುದು ವಿನೋದ್ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.