ರಾಜು ರಂಗಿತರಂಗ ಟೈಟಲ್‌ ಚೇಂಜ್‌ ಈಗ ‘ರಾಜು ಕನ್ನಡ MEDIUM’


Team Udayavani, Jan 3, 2017, 11:11 AM IST

Raju-kannada-Medium.-(1).jpg

ನಿಮಗೆ “ರಾಜು ರಂಗಿತರಂಗ’ ಸಿನಿಮಾ ಸೆಟ್ಟೇರಿದ್ದ ವಿಷಯ ಗೊತ್ತಿರಲೇಬೇಕು. ಸಕ್ಸಸ್‌ಫ‌ುಲ್‌ ಟೀಮ್‌ವೊಂದು ಸೇರಿಕೊಂಡು ಶುರುಮಾಡಿದ್ದ ಚಿತ್ರವಿದು. ಈಗೇಕೆ ಆ ಚಿತ್ರದ ವಿಷಯ ಅಂತೀರಾ? ಆ ಸಿನಿಮಾ ಬಗ್ಗೆ ಹೀಗೊಂದು ಸುದ್ದಿ ಬಂದಿದೆ. “ರಾಜು’ ತನ್ನ ಹೆಸರು ಬದಲಿಸಿಕೊಂಡಿರುವ ಸುದ್ದಿ ಅದು!  ಹೌದು, “ರಾಜು ರಂಗಿತರಂಗ’ ಸಿನಿಮಾದ ಶೀರ್ಷಿಕೆಯನ್ನು ಬದಲಿಸಲಾಗಿದೆ.

ಈಗ ಚಿತ್ರಕ್ಕೆ “ರಾಜು ಕನ್ನಡ ಮೀಡಿಯಂ’ ಎಂದು ನಾಮಕರಣ ಮಾಡಲಾಗಿದೆ. ಈ ಕುರಿತು ವಿವರ ಕೊಡುವ ನಿರ್ಮಾಪಕ ಕೆ.ಎ.ಸುರೇಶ್‌, ಮೊದಲು “ರಾಜು ರಂಗಿತರಂಗ’ ಎಂದು ನಾಮಕರಣ ಮಾಡಲಾಗಿತ್ತು. ಚಿತ್ರೀಕರಣ ಕೂಡ ಶುರುವಾಗಿತ್ತು. ಆದರೆ, ನಮ್ಮ ಕಥೆಗೆ ಶೀರ್ಷಿಕೆ ಯಾಕೋ ಸರಿ ಹೊಂದುತ್ತಿಲ್ಲ ಅಂದೆನಿಸಿತ್ತು. ಕೊನೆಗೆ ಟೈಟಲ್‌ ಬದಲಿಸಬೇಕು ಎಂಬ ನಿರ್ಧಾರಕ್ಕೆ ಬಂದು, ಈಗ “ರಾಜು ಕನ್ನಡ ಮೀಡಿಯಂ’ ಎಂದು ನಾಮಕರಣ ಮಾಡಲಾಗಿದೆ.

ಈ ಶೀರ್ಷಿಕೆ ಈಗ ಹಂಡ್ರೆಡ್‌ ಪರ್ಸೆಂಟ್‌ ನಮ್ಮ ಕಥೆಗೆ ಹೊಂದಿಕೊಳ್ಳುತ್ತೆ. ಅದೇ ಸೂಕ್ತ ಎನಿಸಿದ್ದರಿಂದ ಅದನ್ನೇ ಪಕ್ಕಾ ಮಾಡಲಾಗಿದೆ’ ಎಂದು ಹೇಳುತ್ತಾರೆ ನಿರ್ಮಾಪಕ ಕೆ.ಎ.ಸುರೇಶ್‌. “ರಾಜು ರಂಗಿತರಂಗ’ ಎಂಬ ಶೀರ್ಷಿಕೆ ಇಡಲು ಇನ್ನೊಂದು ಕಾರಣವೂ ಇತ್ತು. “ಫ‌ಸ್ಟ್‌ ರ್‍ಯಾಂಕ್‌ ರಾಜು’ ಸಿನಿಮಾ ಸಕ್ಸಸ್‌ ಕಂಡಿತ್ತು. ಹಾಗಾಗಿ ರಾಜು ಎಂಬ ಹೆಸರನ್ನೇ ಇಟ್ಟುಕೊಂಡಿತು. ಇನ್ನು, ಚಿತ್ರದ ನಾಯಕ ಗುರುನಂದನ್‌ಗೆ ಆವಂತಿಕಾ ಶೆಟ್ಟಿ ನಾಯಕಿಯಾಗಿದ್ದರು.

ಆವಂತಿಕಾ ಶೆಟ್ಟಿ ಕೂಡ “ರಂಗಿತರಂಗ’ ಸಿನಿಮಾದ ನಾಯಕಿ. ಆ ಚಿತ್ರ ಕೂಡ ಗೆಲುವು ಕೊಟ್ಟ ಸಿನಿಮಾ. ಹಾಗಾರಿ “ರಾಜು ರಂಗಿತರಂಗ’ ಎಂಬ ಹೆಸರನ್ನಿಟ್ಟುಕೊಂಡೇ ಚಿತ್ರೀಕರಣಕ್ಕೆ ಹೊರಟ್ಟಿದ್ದರು ನಿರ್ದೇಶಕ ನರೇಶ್‌ಕುಮಾರ್‌. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಇನ್ನು, ವಿದೇಶದಲ್ಲಿ ಹಾಡುಗಳನ್ನು ಚಿತ್ರೀಕರಿಸಬೇಕಿದೆ. “ಫ‌ಸ್ಟ್‌ ರ್‍ಯಾಂಕ್‌ ರಾಜು’ ಸಿನಿಮಾ ಗೆದ್ದಿದ್ದೇ ತಡ, ಆ ನಾಯಕ ಗುರುನಂದನ್‌ ಮತ್ತು ನಿರ್ದೇಶಕ ನರೇಶ್‌ಕುಮಾರ್‌ ಮತ್ತು ಅವರ ತಂಡಕ್ಕೆ ಈ ಚಿತ್ರ ಮಾಡಲು ಅಣಿಯಾದರು ನಿರ್ಮಾಪಕ ಸುರೇಶ್‌.

ಅಂದಹಾಗೆ, ಕಳೆದ ವರ್ಷ “ಶಿವಲಿಂಗ ಚಿತ್ರದ ಯಶಸ್ಸಿನ ನಂತರ, ಯಶಸ್ವಿ ತಂಡದ ಜತೆಯಲ್ಲಿ “ರಾಜು ಕನ್ನಡ ಮೀಡಿಯಂ’ ಸಿನಿಮಾ ಮಾಡುತ್ತಿದ್ದಾರೆ ಸುರೇಶ್‌. ಇದೊಂದು ಲವ್‌ ಕಂ ಕಾಮಿಡಿ ಸಿನಿಮಾ ಆಗಿದ್ದು, ಫ್ಯಾಮಿಲಿ ಆಡಿಯನ್ಸ್‌ಗೆ ಇಷ್ಟವಾಗುವಂತಹ ಕಥೆ’ ಎನ್ನುತ್ತಾರೆ ಸುರೇಶ್‌. ಸದ್ಯದಲ್ಲೇ ಚಿತ್ರದ ಟೀಸರ್‌ ಬಿಡುಗಡೆಯಾಗಲಿದೆ. “ಫ‌ಸ್ಟ್‌ ರ್‍ಯಾಂಕ್‌ ರಾಜು’ ಚಿತ್ರ ಒಂದು ಕಾಮಿಡಿ ಸಬೆjಕ್ಟ್ ಆಗಿ ಜನರಿಗೆ ಇಷ್ಟವಾಗಿತ್ತು. ಆ ಚಿತ್ರದ ಮೂಲಕ ಒಂದಷ್ಟು ಹೊಸ ಪ್ರತಿಭೆಗಳು ಬೆಳಕಿಗೆ ಬಂದಿದ್ದು ಸುಳ್ಳಲ್ಲ. ಈಗ ಅದೇ ತಂಡ ಜೊತೆಯಾಗಿ ಮತ್ತೂಂದು ಸಿನಿಮಾ ಮಾಡುತ್ತಿದೆ. ಚಿತ್ರಕ್ಕೆ ಕಿರಣ್‌ ರವೀಂದ್ರನಾಥ್‌ ಸಂಗೀತ, ಶೇಖರ್‌ಚಂದ್ರ ಛಾಯಾಗ್ರಹಣವಿದೆ.

ಟಾಪ್ ನ್ಯೂಸ್

bagheera movie review

Bagheera Review: ಕಣ್ಣಾಮುಚ್ಚಾಲೆ ಆಟದಲ್ಲಿ ಬಘೀರ!

7-belagavi

Belagavi: ರಾಜ್ಯೋತ್ಸವ ಮೆರವಣಿಗೆ ವೇಳೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

1-reee

Karnataka Rajyotsava; ಬಾಬು ಪಿಲಾರ್‌ ಬದಲು ಬಾಬು ಕಿಲಾರ್‌ಗೆ ಪ್ರಶಸ್ತಿ!!

6-dkshi

Bengaluru: ಕನ್ನಡ ಬದುಕಿನ ಭಾಷೆಯಾಗಿಸುವುದೇ ನಮ್ಮ ಗುರಿ: ಡಿ.ಕೆ. ಶಿವಕುಮಾರ್‌

5-belagavi

Belagavi: ಎಂಇಎಸ್‌ ಕಾರ್ಯಕರ್ತರ ಪುಂಡಾಟ

4-bng

Bengaluru: ಪಟಾಕಿ ಸಿಡಿದು 54 ಮಂದಿಗೆ ಗಾಯ

3-muddebihala

Muddebihal: ಅರೆನಗ್ನಾವಸ್ಥೆಯಲ್ಲಿ ಅನಾಮಧೇಯ ಮಹಿಳೆಯ ಶವ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aaram aravinda swamy movie song hudukuta hoda

Aaram Aravinda Swamy: ಹುಡುಕತ್ತಾ ಹೋದ ಅರವಿಂದ್‌ ಸ್ವಾಮಿ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Dhananjay: ಮದುವೆಗೆ ಸಿದ್ದವಾದ್ರು ಡಾಲಿ; ದುರ್ಗದ ಹುಡುಗಿಯ ಕೈ ಹಿಡಿಯಲಿದ್ದಾರೆ ಧನಂಜಯ

Ugravatara kannada movie

Ugravatara; ಇಂದಿನಿಂದ ಪ್ರಿಯಾಂಕಾ ʼಉಗ್ರಾವತಾರʼ

ನವೆಂಬರ್‌ 8ಕ್ಕೆ ʼಯು 235ʼ

Sandalwood: ನವೆಂಬರ್‌ 8ಕ್ಕೆ ʼಯು 235ʼ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

bagheera movie review

Bagheera Review: ಕಣ್ಣಾಮುಚ್ಚಾಲೆ ಆಟದಲ್ಲಿ ಬಘೀರ!

8-cm

Bengaluru: ಕೇಂದ್ರದ ತೆರಿಗೆ ಅನ್ಯಾಯ ಮಧ್ಯೆಯೂ ಅಭಿವೃದ್ಧಿ: ಸಿಎಂ

1-mlr-a

Karnataka Rajyotsava; ದಕ್ಷಿಣ ಕನ್ನಡ, ಉಡುಪಿ ಜಿಲ್ಲಾಡಳಿತದಿಂದ ಕರ್ನಾಟಕ ರಾಜ್ಯೋತ್ಸವ

1-udayavani

Udayavani ರೇಷ್ಮೆ ಜತೆ ದೀಪಾವಳಿ; ಸ್ಪರ್ಧೆಗೆ ಫೋಟೋ ಕಳುಹಿಸಲು ನ.6 ಕೊನೆಯ ದಿನ

lakshmi hebbalkar

Waqf property: ಹಿಂದೂ- ಮುಸ್ಲಿಂ ತಳುಕು ಹಾಕುವುದು ಸಲ್ಲದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.