ಇಂದು ಸುದೀಪ್ ಬರ್ತ್‌ಡೇ
Team Udayavani, Sep 2, 2018, 11:11 AM IST
ಇಂದು ಸುದೀಪ್ ಅಭಿಮಾನಿಗಳಿಗೆ ಹಬ್ಬ. ಮುಂಜಾನೆಯಿಂದಲೇ ಸುದೀಪ್ ಮನೆಮುಂದೆ ವಿವಿಧ ಶೈಲಿಯ ಕೇಕ್, ಪೋಸ್ಟರ್, ಡಿಸೈನ್‌ಗಳೊಂದಿಗೆ ತಮ್ಮ ನೆಚ್ಚಿನ ನಟನಿಗೆ ಶುಭಕೋರಲು ಅಭಿಮಾನಿಗಳು ಬಂದಿರುತ್ತಾರೆ. ಇಷ್ಟು ಹೇಳಿದ ಮೇಲೆ ಇಂದು ಸುದೀಪ್ ಹುಟ್ಟುಹಬ್ಬವೆಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಸುದೀಪ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ.
ಜೊತೆಗೆ ಸುದೀಪ್ ಅವರಿಗೆ ತಮ್ಮದೇ ಶೈಲಿಯಲ್ಲಿ ಉಡುಗೊರೆ ನೀಡಲಿದ್ದಾರೆ. ಇದು ಅಭಿಮಾನಿಗಳ ವಿಚಾರವಾದರೆ ಚಿತ್ರತಂಡಗಳು ಕೂಡಾ ತಮ್ಮ ನಟನ ಫಸ್ಟ್‌ಲುಕ್, ಟೀಸರ್ ಬಿಡುಗಡೆ ಮಾಡಲಿವೆ. ಈಗಾಗಲೇ “ಕೋಟಿಗೊಬ್ಬ-3′ ಹಾಗೂ “ಪೈಲ್ವಾನ್’ ಚಿತ್ರಗಳು ಬರ್ತ್‌ಡೇ ಸ್ಪೆಷಲ್ ಆಗಿ ಟೀಸರ್ ಬಿಡುಗಡೆ ಮಾಡುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ತೆಲುಗು ಚಿತ್ರವೊಂದು ಕೂಡಾ ಸುದೀಪ್ ಅವರ ಫಸ್ಟ್‌ಲುಕ್ ಬಿಡುಗಡೆ ಮಾಡಿದೆ.
ತೆಲುಗಿನ “ಸೈರಾ’ ಚಿತ್ರದಲ್ಲಿ ಸುದೀಪ್ ನಟಿಸಿರುವುದು ನಿಮಗೆ ಗೊತ್ತಿರಬಹುದು. ಮೆಗಾಸ್ಟಾರ್ ಚಿರಂಜೀವಿ ನಾಯಕರಾಗಿರುವ ಈ ಚಿತ್ರದಲ್ಲಿ ಸುದೀಪ್ ಪ್ರಮುಖ ಪಾತ್ರ ಮಾಡಿದ್ದಾರೆ. ತೆಲುಗು ಚಿತ್ರದಲ್ಲಿ ಸುದೀಪ್ ಹೇಗೆ ಕಾಣುತ್ತಾರೆಂಬ ಕುತೂಹಲ ಸಹಜವಾಗಿಯೇ ಅಭಿಮಾನಿಗಳಲ್ಲಿತ್ತು. ಈಗ ಚಿತ್ರತಂಡ ಸುದೀಪ್ ಅವರ ಗೆಟಪ್ ಅನ್ನು ಬಿಡುಗಡೆ ಮಾಡಿದೆ.
ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಸುದೀಪ್ ಅವರನ್ನು ಕಂಡು ಅಭಿಮಾನಿಗಳು ಖುಷಿಯಾಗಿರುವುದಂತೂ ಸುಳ್ಳಲ್ಲ. ಚಿತ್ರದಲ್ಲಿ ಚಿರಂಜೀಚಿ ಉಯ್ನಾಲವಾಡು ನರಸಿಂಹ ರೆಡ್ಡಿಯಾಗಿ ನಟಿಸಿದ್ದು, ಅವರಿಗೆ ಸಹಾಯ ಮಾಡುವ ರಾಜನಾಗಿ ಸುದೀಪ್ ಕಾಣಿಸಿಕೊಂಡಿದ್ದಾರೆ. ಸುದೀಪ್ ಅವರ ಪಾತ್ರ ಕೂಡಾ ಮಹತ್ವದ್ದಾಗಿದೆಯಂತೆ. ಇದರ ಹೊರತಾಗಿ ಸುದೀಪ್ ಅವರ ಫೋಟೋ ಡಿಸೈನ್ ಎಲ್ಲಾ ಕಡೆ ಓಡಾಡುತ್ತಿದೆ.
“ಪೈಲ್ವಾನ್’ ಚಿತ್ರೀಕರಣದಲ್ಲಿದ್ದ ಸುದೀಪ್ 10 ದಿನಗಳ ಕಾಲ ಚಿತ್ರೀಕರಣಕ್ಕೆ ಬ್ರೇಕ್ ನೀಡಿದ್ದಾರೆ. ಅದಕ್ಕೆ ಕಾರಣ ಕೆಸಿಸಿ. ಕೆಸಿಸಿ ಟೂರ್ನಿ ಆರಂಭವಾಗುತ್ತಿರುವುದರಿಂದ ಅದರಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ಕೇವಲ ಸಿನಿಮಂದಿಯಷ್ಟೇ ಅಲ್ಲದೇ, ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಟಗಾರರು ಕೂಡಾ ಭಾಗವಹಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toxic Movie: ʼಟಾಕ್ಸಿಕ್ʼನಲ್ಲಿ ನಟಿಸಲು ಯಶ್ ಪಡೆದ ಸಂಭಾವನೆ ಎಷ್ಟು?
Toxic Movie: ಕೇವಲ 13ಗಂಟೆಯಲ್ಲೇ ʼಪುಷ್ಪ-2ʼ ದಾಖಲೆ ಉಡೀಸ್ ಮಾಡಿದ ಯಶ್ ʼಟಾಕ್ಸಿಕ್ʼ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.