ಇಂದು ವಿಷ್ಣುವರ್ಧನ್ 10ನೇ ಪುಣ್ಯ ಸ್ಮರಣೆ
Team Udayavani, Dec 30, 2019, 10:25 AM IST
ಡಾ.ವಿಷ್ಣುವರ್ಧನ್ ಅವರು ಇಲ್ಲದ ಹತ್ತು ವರ್ಷಗಳು ಕಳೆದು ಹೋಗಿವೆ. ಆದರೆ, ಅವರ ಕುಟುಂಬ ವರ್ಗ ಹಾಗು ಅಭಿಮಾನಿ ವರ್ಗಕ್ಕೆ ಮಾತ್ರ ವಿಷ್ಣುವರ್ಧನ್ ಅವರು ಇಲ್ಲ ಎಂಬ ಭಾವನೆ ಎಂದಿಗೂ ಬಂದಿಲ್ಲ. ವಿಷ್ಣುವರ್ಧನ್ ಅವರ ಅನೇಕ ಸಿನಿಮಾಗಳ ಮೂಲಕ ಅವರನ್ನು ಪ್ರತಿ ನಿತ್ಯವೂ ನೆನಪಿಸಿಕೊಳ್ಳುವ ಮೂಲಕ ಅಭಿಮಾನಿಗಳು ತಮ್ಮ ಪ್ರೀತಿಯ ನಟನನ್ನು ಜೀವಂತವಾಗಿರಿಸಿದ್ದಾರೆ.
ಇಂದು (ಡಿ.30) ವಿಷ್ಣುವರ್ಧನ್ ಅಗಲಿದ ದಿನ. ಅವರು ಅಗಲಿ ಒಂದು ದಶಕ ಉರುಳಿದ್ದರೂ, ಅವರ ಮೇಲಿನ ಪ್ರೀತಿ, ಅಭಿಮಾನ ಮಾತ್ರ ಬತ್ತಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಡಾ.ವಿಷ್ಣು ವರ್ಧನ್ ಅವರನ್ನು ಸ್ಮರಿಸಲಾಗುತ್ತಿದೆ. ವಿಷ್ಣುವರ್ಧನ್ ಅವರ ಕುಟುಂಬ ವರ್ಗ ಸೋಮವರ ಮುಂಜಾನೆ ಮೈಸೂರಿಗೆ ತೆರಳಿ, ಅಲ್ಲಿ ನಿರ್ಮಾಣಕ್ಕೆ ಸಜ್ಜಾಗಿರುವ ಸ್ಮಾರಕ ಸ್ಥಳದಲ್ಲಿ ಪೂಜೆ ನೆರವೇರಿಸಲಿದೆ.
ಇದರೊಂದಿಗೆ ಅಭಿಮಾನಿಗಳು ಸಹ ಅಲ್ಲಿ ತಮ್ಮ ನಾಯಕನಿಗೆ ಪೂಜೆ ಸಲ್ಲಿಸಲಿದ್ದಾರೆ. ವಿಷ್ಣುವರ್ಧನ್ ಅವರ ಕುಟುಂಬ ಅಭಿಮಾನಿಗಳೊಂದಿಗೆ ಸೋಮವಾರ ದಿನವಿಡೀ ಸಮಯ ಕಳೆಯಲಿದೆ. ಸೋಮವಾರ (ಇಂದು) ಬೆಳಗ್ಗೆ ಕುಟುಂಬವರ್ಗ ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಪೂಜೆ ನೆರವೇರಿಸಲಿದೆ. ಆ ಬಳಿಕ ಅಲ್ಲಿ ಸೇರಿದ ಅಭಿಮಾನಿಗಳ ಜೊತೆ ಮಾತುಕತೆ ನಡೆಸಲಿದೆ.
ಈ ಸಂದರ್ಭದಲ್ಲಿ ವಿಷ್ಣುವರ್ಧನ್ ಅವರ ಕುರಿತು ಅನೇಕ ಗೀತೆಗಳನ್ನು ಹಾಡುವ ಮೂಲಕ ವಿಶೇಷ ನಮನ ಸಲ್ಲಿಸುವ ಕಾರ್ಯಕ್ರಮವೂ ಜರುಗಲಿದೆ. ರಾಜ್ಯಾದ್ಯಂತ ಇರುವ ವಿಷ್ಣುವರ್ಧನ್ ಅವರ ಅಭಿಮಾನಿಗಳು ಸಹ, ವಿಷ್ಣು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಜೊತೆಯಲ್ಲಿ ವಿಶೇಷ ಕಾರ್ಯಕ್ರಮ ನಡೆಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
Narendra Modi: 43 ವರ್ಷದ ಬಳಿಕ ಭಾರತ ಪ್ರಧಾನಿ ಕುವೈಟ್ ಭೇಟಿ: 21ರಿಂದ ಮೋದಿ ಪ್ರವಾಸ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.