ನಾಳೆ ವಿಲನ್ ಟೀಸರ್
Team Udayavani, Jun 27, 2018, 10:56 AM IST
ಶಿವರಾಜಕುಮಾರ್ ಹಾಗೂ ಸುದೀಪ್ ಅಭಿಮಾನಿಗಳು, ನಿರ್ದೇಶಕ ಪ್ರೇಮ್ ಅವರಲ್ಲಿ ಅದೆಷ್ಟು ಬಾರಿ “ಟೀಸರ್ ಬಿಡುಗಡೆ ಯಾವಾಗ’ ಎಂದು ಕೇಳಿದ್ದರೋ ಲೆಕ್ಕವಿಲ್ಲ. ಆದರೆ, ಪ್ರೇಮ್ “ವೆರಿ ಸೂನ್ ಬಾಸ್’ ಎನ್ನುತ್ತಲೇ ತಮ್ಮ ಕೆಲಸದಲ್ಲಿ ಬಿಝಿಯಾಗಿದ್ದರು. ಅಂತಿಮವಾಗಿ ಈಗ ಟೀಸರ್ ಬಿಡುಗಡೆಯ ದಿನಾಂಕವನ್ನು ಪ್ರೇಮ್ ಘೋಷಿಸಿದ್ದು, ಜುಲೈ 28 ರಂದು ಅಂದರೆ ನಾಳೆ “ದಿ ವಿಲನ್’ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.
ನಗರದ ಜಿಟಿ ವರ್ಲ್ಡ್ ಮಾಲ್‌ನಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಲಿದ್ದು, ತಮ್ಮ ನೆಚ್ಚಿನ ನಟರ ಗೆಟಪ್ ನೋಡಲು ಅಭಿಮಾನಿಗಳು ಕಾತುರರಾಗಿರುವುದಂತೂ ಸುಳ್ಳಲ್ಲ. “ದಿ ವಿಲನ್’ ಚಿತ್ರದ ಟೀಸರ್ ಬಿಡುಗಡೆಗೆ ಚಿತ್ರತಂಡ 500 ರೂಪಾಯಿ ಟಿಕೆಟ್ ದರ ನಿಗದಿ ಮಾಡಿದೆ. ನೀವು 500 ರೂಪಾಯಿ ಟಿಕೆಟ್ ಪಡೆದು ಟೀಸರ್ ವೀಕ್ಷಿಸಬಹುದು. ಎಲ್ಲಾ ಓಕೆ ಟೀಸರ್ ಬಿಡುಗಡೆಗೆ ಟಿಕೆಟ್ ಯಾಕೆ?
ಅದು ಕೂಡಾ 500 ರೂಪಾಯಿ ಎಂದು ನೀವು ಹುಬ್ಬೇರಿಸಬಹುದು. “ದಿ ವಿಲನ್’ ತಂಡ ಟೀಸರ್‌ಗೆ 500 ರೂಪಾಯಿ ನಿಗದಿ ಮಾಡಲು ಒಂದು ಕಾರಣವಿದೆ. ಅದು ಆರ್ಥಿಕ ಸಂಕಷ್ಟದಲ್ಲಿರುವ ನಿರ್ದೇಶಕರಿಗೆ ಸಹಾಯ ಮಾಡುವ ಉದ್ದೇಶ. ಕನ್ನಡ ಚಿತ್ರರಂಗಕ್ಕಾಗಿ ದುಡಿದ ಕೆಲವು ನಿರ್ದೇಶಕರು ಇಂದು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕೆಲವರು ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಚಿಕಿತ್ಸೆಗೂ ಹಣವಿಲ್ಲದ ಸ್ಥಿತಿಯಲ್ಲಿದ್ದಾರೆ.
ಇದನ್ನು ಮನಗಂಡ ಚಿತ್ರತಂಡ ಟೀಸರ್ ಬಿಡುಗಡೆಗೆ ದರ ನಿಗದಿ ಮಾಡಿದೆ. ಇದರಿಂದ ಬಂದ ಹಣವನ್ನು ಆಯ್ದ ನಿರ್ದೇಶಕರಿಗೆ ಅಂದೇ ನೀಡುವ ಉದ್ದೇಶವಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಟೀಸರ್ ಬಿಡುಗಡೆ ಮಾಡಲಿದ್ದಾರೆ. ಜೊತೆಗೆ ಅಂದು ಸಂಗ್ರಹವಾದ ಹಣವನ್ನು ಮುಖ್ಯಮಂತ್ರಿಯವರ ಸಮ್ಮುಖದಲ್ಲಿ ನೀಡಲಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ನಟ-ನಟಿಯರು, ನಿರ್ದೇಶಕರು, ನಿರ್ಮಾಪಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಇನ್ನು, ವಿದೇಶದಲ್ಲಿ ಸುದೀಪ್ “ಕೋಟಿಗೊಬ್ಬ-3′ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಎಲ್ಲಾ ಓಕೆ, ಪ್ರೇಮ್ ಸಿನಿಮಾ ಯಾವಾಗ ಬಿಡುಗಡೆ ಮಾಡುತ್ತಾರೆಂಬ ಪ್ರಶ್ನೆ ಸಹಜವಾಗಿಯೇ ಬರುತ್ತದೆ. ಪ್ರೇಮ್ ಹೇಳುವಂತೆ, ವರಮಹಾಲಕ್ಷ್ಮೀ ಹಬ್ಬಕ್ಕೆ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ. ಆ ನಿಟ್ಟಿನಲ್ಲಿ ಭರದಿಂದ ಸಿನಿಮಾ ಕೆಲಸ ಸಾಗುತ್ತಿದೆ. ಸದ್ಯದಲ್ಲೇ ಚಿತ್ರದ ಆಡಿಯೋ ಬಿಡುಗಡೆ ಕೂಡಾ ನಡೆಯಲಿದೆ. ಚಿತ್ರವನ್ನು ಸಿ.ಆರ್.ಮನೋಹರ್ ನಿರ್ಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.