ತೋತಾಪುರಿ-2 ಮೇಲೆ ಗರಿಗೆದರಿದ ನಿರೀಕ್ಷೆ
Team Udayavani, Aug 6, 2023, 1:00 PM IST
ಮೊದಲ ದಿನ ರಾಮ, ಮಾರನೇ ದಿನ ದಿನ ರಾಮ+ಆಂಜನೇಯ, ಮತ್ತೂಂದು ದಿನ ಗಣೇಶ ಹಾಗೂ ಕೃಷ್ಣ..! ಹೀಗೆ ದಿನಕ್ಕೊಂದು ಪೋಸ್ಟರ್ ಬಿಟ್ಟು ಕುತೂಹಲ ಮೂಡಿಸಿದ ಸಿನಿಮಾ ತೋತಾಪುರಿ-2. ಸದ್ಯ ಎಲ್ಲೆಡೆ ವೈರಲ್ ಆಗಿರುವ ಈ ಪೋಸ್ಟರ್‌ಗಳಿಂದಾಗಿ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ. ಕಾಮಿಡಿ ಸಿನಿಮಾವಾದರೂ ಧಾರ್ಮಿಕ ಹಿನ್ನೆಲೆಯಲ್ಲಿ ಪೋಸ್ಟರ್‌ಗಳನ್ನು ಹರಿಬಿಟ್ಟಿರುವ ಹಿನ್ನೆಲೆಯಾದರೂ ಏನು ಎಂಬುದರ ಬಗ್ಗೆ ಕುತೂಹಲ ಕಾಪಿಟ್ಟುಕೊಂಡಿದೆ ಚಿತ್ರತಂಡ. ಚಿತ್ರ ಆಗ ಸ್ಟ್ ನಲ್ಲಿ ತೆರೆ ಕಾಣಲಿದೆ.
“ಸದ್ಯದಲ್ಲೇ ಚಿತ್ರಮಂದಿರದಲ್ಲಿ… ಎಂದು ಎಲ್ಲಾ ಪೋಸ್ಟರ್‌ಗಳಲ್ಲೂ ಹಾಕಲಾಗಿದ್ದು, ಸದ್ಯ ವಿಭಿನ್ನ ರೀತಿಯಲ್ಲಿ ಗಮನ ಸೆಳೆಯುವಲ್ಲಿ ಚಿತ್ರತಂಡ ಸಫಲವಾಗಿದೆ. ಹೊಸತನದಿಂದ ಕೂಡಿರುವ ಈ ಚಿತ್ರದ ಪೋಸ್ಟರ್‌ಗಳಲ್ಲಿ ದೇವರನ್ನು ಯಾಕೆ ಹಾಕಲಾಗಿದೆ..? ಸಿನಿಮಾಕ್ಕೂ ಪೋಸ್ಟರ್‌ಗೂ ಇರುವ ನಂಟೇನು..? ಎಂದು ಕಾದು ನೋಡಬೇಕಿದೆ.
ವಿಭಿನ್ನ ರೀತಿಯ ಪೋಸ್ಟರ್‌ಗಳ ಮೂಲಕ ಗಮನ ಸೆಳೆದಿರುವ ಚಿತ್ರತಂಡ, ದೇವರ ಪೋಸ್ಟರ್‌ಗಳ ಬಳಿಕ ಚಿತ್ರದ ನಾಯಕರಾದ ಜಗ್ಗೇಶ್ ಹಾಗೂ ಡಾಲಿ ಧನಂಜಯ್ ಫಸ್ಟ್‌ಲುಕ್ ಪೋಸ್ಟರ್ ಸಹ ಬಿಡುಗಡೆ ಮಾಡಿದೆ. ಎಲ್ಲಾ ಪೋಸ್ಟರ್‌ಗಳಿಗೂ ಮೆಚ್ಚುಗೆ ಪಡೆದುಕೊಂಡಿರುವ ಚಿತ್ರತಂಡ, ಸದ್ಯ ಬಿಡುಗಡೆಯ ಹಾದಿ ಎದುರು ನೋಡುತ್ತಿದೆ. ತೋತಾಪುರಿ-1ರಲ್ಲಿ ಭರಪೂರ ಕಾಮಿಡಿ ಕಚಗುಳಿಯಿಟ್ಟಿದ್ದ ಚಿತ್ರತಂಡ, ಇದೀಗ “ತೋತಾಪುರಿ-2 ಮೂಲಕ ನಗುವಿನ ಅಲೆಯಲ್ಲಿ ತೇಲಿಸಲು ಸಜ್ಜಾಗುತ್ತಿದೆ.
ವಿಜಯಪ್ರಸಾದ್ ನಿರ್ದೇಶನವಿರುವ ಈ ಚಿತ್ರದಲ್ಲಿ ಜಗ್ಗೇಶ್, ಡಾಲಿ ಧನಂಜಯ್, ದತ್ತಣ್ಣ, ಸುಮನ್ ರಂಗನಾಥ್, ಅದಿತಿ ಪ್ರಭುದೇವ, ವೀಣಾ ಸುಂದರ್, ಹೇಮಾದತ್ ಮುಂತಾದವರು ತಾರಾಗಣದಲ್ಲಿದ್ದಾರೆ. ಸುರೇಶ್ ಆರ್ಟ್ಸ್ ಮೂಲಕ ಕೆ.ಎ.ಸುರೇಶ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.
“ಮೊದಲ ಮಳೆ ಹಾಡಿಗೆ ಸಖತ್ ರೆಸ್ಪಾನ್ಸ್..!
ತೋತಾಪುರಿ ಚಿತ್ರದ ಮೊದಲ ಭಾಗದಲ್ಲಿ “ಬಾಗ್ಲು ತೆಗಿ ಮೇರಿ ಜಾನ್ ಹಾಡು ಸೂಪರ್ ಹಿಟ್ ಆಗಿತ್ತು. ರೊಮ್ಯಾಂಟಿಕ್ ಕಾಮಿಡಿ ಶೈಲಿಯಲ್ಲಿ ಮೂಡಿಬಂದಿದ್ದ ಈ ಹಾಡಿಗೆ ಲಕ್ಷಾಂತರ ಹಿಟ್ಸ್ ದಾಖಲಾಗಿತ್ತು. ಇದೀಗ “ತೋತಾಪುರಿ-2 ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿದ್ದು, ಎಲ್ಲೆಡೆ ಸದ್ದು ಮಾಡುತ್ತಿದೆ. ಅದರಲ್ಲೂ ಮಳೆಗಾಲದಲ್ಲಿ ಈ ಹಾಡು ಮೋಡಿ ಮಾಡುತ್ತಿರೋದು ವಿಶೇಷ.
ಹೃದಯಶಿವ ಸಾಹಿತ್ಯ ರಚಿಸಿರುವ “ಮೊದಲ ಮಳೆ ಮನದೊಳಗೆ… ಎಂಬ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸೌಂಡು ಮಾಡುತ್ತಿದೆ. ಡಾಲಿ ಧನಂಜಯ್ ಹಾಗೂ ಸುಮನ್ ರಂಗನಾಥ್ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಸಂಜಿತ್ ಹೆಗ್ಡೆ ಕಂಠಸಿರಿಯಲ್ಲಿ “ಮಳೆ ಹಾಡು ಮೂಡಿಬಂದಿದೆ. ಅರುಣ್ ಆ್ಯಂಡ್ರೂವ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಮೆಲೋಡಿ ಹಾಡಿಗೆ ಕೇಳುಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.