ಮತ್ತೆ ಶುರುವಾಯ್ತು ತೋತಾಪುರಿ: ಮೈಸೂರಿನಲ್ಲಿ ಚಿತ್ರೀಕರಣ
Team Udayavani, Feb 5, 2021, 4:13 PM IST
ನಟ ಜಗ್ಗೇಶ್ ಮತ್ತು ನಿರ್ದೇಶಕ ವಿಜಯ ಪ್ರಸಾದ್ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ “ತೋತಾಪುರಿ’ ಚಿತ್ರದ ಬಗ್ಗೆ ನಿಮಗೆ ಗೊತ್ತಿರಬಹುದು. ಎರಡು ವರ್ಷದ ಹಿಂದೆಯೇ ಸೆಟ್ಟೇರಿದ್ದ “ತೋತಾಪುರಿ’ ಚಿತ್ರ ಈಗ ಚಿತ್ರೀಕರಣದ ಅಂತಿಮ ಹಂತಕ್ಕೆ ತಲುಪಿದೆ. ಈಗಾಗಲೇ ಶೇಕಡ 80ರಷ್ಟು ಭಾಗ ಶೂಟಿಂಗ್ ಮುಗಿಸಿರುವ “ತೋತಾಪುರಿ’ ಚಿತ್ರದ ಬಾಕಿ ಉಳಿದ ಚಿತ್ರೀಕರಣಕ್ಕೆ ಈಗ ಮತ್ತೆ ಚಾಲನೆ ಸಿಕ್ಕಿದೆ.
ಸದ್ಯ ಮೈಸೂರಿನಲ್ಲಿ “ತೋತಾಪುರಿ’ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಕಳೆದ ಕೆಲ ದಿನಗಳಿಂದ ಚಿತ್ರತಂಡ, ಚಿತ್ರೀಕರಣದಲ್ಲಿ ನಿರತವಾಗಿದೆ. ಇನ್ನು “ತೋತಾಪುರಿ’ ಚಿತ್ರದಲ್ಲಿ ಜಗ್ಗೇಶ್ ರೈತನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅದಿತಿ ಪ್ರಭುದೇವ ಮುಸ್ಲಿಂ ಯುವತಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ಉಳಿದಂತೆ ಚಿತ್ರದಲ್ಲಿ ಧನಂಜಯ್, ಸುಮನ್ ರಂಗನಾಥ್ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. “ತೋತಾಪುರಿ’ ಚಿತ್ರಕ್ಕೆ ಕೆ.ಎ ಸುರೇಶ್ ಬಂಡವಾಳ ಹೂಡಿ ನಿರ್ಮಿಸುತ್ತಿದ್ದು, ಚಿತ್ರದ ಹಾಡುಗಳಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆಯಿದೆ.
ಇದನ್ನೂ ಓದಿ: ಚಂದನ್ ಆಚಾರ್ ಕಣ್ಣಲ್ಲಿ ರಜಾದಿನ ಕನಸು
ಅಂದಹಾಗೆ, “ತೋತಾಪುರಿ’ ಚಿತ್ರ ಎರಡು ಭಾಗಗಳಲ್ಲಿ ತೆರೆಮೇಲೆ ಬರಲಿದೆ ಎನ್ನಲಾಗುತ್ತಿದೆ. ಈ ಹಿಂದೆ ಜಗ್ಗೇಶ್ ಹಾಗೂ ನಿರ್ದೇಶಕ ವಿಜಯಪ್ರಸಾದ್ ಕಾಂಬಿನೇಶನ್‌ನಲ್ಲಿ “ನೀರ್‌ದೋಸೆ’ ಚಿತ್ರ ಬಂದು, ದೊಡ್ಡ ಹಿಟ್ ಆಗಿತ್ತು. ಈಗ ಮತ್ತೆ ಅದೇ ಕಾಂಬಿನೇಶನ್ ಒಟ್ಟಾಗಿರುವುದರಿಂದ ಈ ಚಿತ್ರದ ಮೇಲೂ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಸಿನಿಮಾ ಮಂದಿ ಈ ಚಿತ್ರದ ಮೇಲೊಂದು ಕಣ್ಣಿಟ್ಟಿದ್ದಾರೆ.
ಅಂದಹಾಗೆ, “ತೋತಾಪುರಿ’ ಚಿತ್ರ ಎರಡು ಭಾಗಗಳಲ್ಲಿ ಬರುತ್ತಿದ್ದು, ಮೊದಲ ಭಾಗ ಏಪ್ರಿಲ್ ಅಥವಾ ಮೇನಲ್ಲಿ ತೆರೆಕಾಣಲಿದೆ. ಮತ್ತೂಂದು ಭಾಗ ಜುಲೈ ನಂತರ ತೆರೆಕಾಣಲಿದೆ. ಈ ಮೂಲಕ ಜಗ್ಗೇಶ್ ಅವರ ಎರಡು ಚಿತ್ರಗಳು ಈ ವರ್ಷ ತೆರೆಕಂಡಂತಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.