ಐದು ಭಾಷೆಯಲ್ಲಿ ಟೈಟಲ್ ರಿಲೀಸ್ ಮಾಡಿ, ನಮ್ದು ಪ್ಯಾನ್ ಇಂಡಿಯಾ ಅಲ್ಲ ಎಂದ ‘ತೋತಾಪುರಿ’ ಟೀಮ್
Team Udayavani, Nov 11, 2021, 11:09 AM IST
ನೀರ್‌ದೋಸೆ ಸಿನಿಮಾದ ನಂತರ ವಿಜಯ್ ಪ್ರಸಾದ್ ಮತ್ತು ಜಗ್ಗೇಶ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಚಿತ್ರವೇ ‘ತೊತಾಪುರಿ’. ಹೆಸರಿನಿಂದಲೇ ಸಾಕಷ್ಟು ಸದ್ದು ಮಾಡಿರುವ ಈ ಸಿನಿಮಾದಲ್ಲಿ ಯಾವೆಲ್ಲ ಅಂಶಗಳು ಇವೆ ಎಂಬ ಕುತೂಕಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ.
ಜಗ್ಗೇಶ್ ಮುಖ್ಯ ಭೂಮಿಕೆಯ ತೋತಾಪುರಿ ಸಿನಿಮಾ ಶೂಟಿಂಗ್ ಮುಗಿಸಿದ್ದು, ನಾವು ನಿಮ್ಮ ಮುಂದೆ ಬರ್ತಿದ್ದೇವೆ ಎಂದು ಚಿತ್ರತಂಡ ಪೋಸ್ಟರ್ ಒಂದನ್ನು ರಿವೀಲ್ ಮಾಡಿದೆ. ಸದ್ಯ ತೋತಾಪುರಿ ತಂಡ ರಿವೀಲ್ ಮಾಡಿರುವ ಪೋಸ್ಟರ್ ಕುತೂಹಲಬರಿತವಾಗಿದೆ.
‘ದೇವ್ರಾಣೆಗೂ ನಮ್ದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ. ನಮ್ದು ಬರೀ ಸಿನಿಮಾ’ ಅಂತ ಹೇಳಿರುವ ತೋತಾಪುರಿ ಟೀಮ್, ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಯಲ್ಲಿ ಟೈಟಲ್ ರಿವೀಲ್ ಮಾಡಿದೆ. ಇದರಿಂದ ಪ್ರೇಕ್ಷಕರಿಗೆ ಒಂಚೂರು ತಲೆಗೆ ಕೆಲಸ ಕೊಟ್ಟಿರೋದು ನಿಜ.
ಶುಭ ಸಂಜೆ:) pic.twitter.com/A5nKhI7hPa
— ನವರಸನಾಯಕ ಜಗ್ಗೇಶ್ (@Jaggesh2) November 10, 2021
ಈ ಹಿಂದೆ ಸುದ್ದಿಗೋಷ್ಠಿಯೊಂದರಲ್ಲಿ ನಟ ಜಗ್ಗೇಶ್ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಗರಂ ಆಗಿ ಮಾತನಾಡಿದ್ದರು. ಪ್ಯಾನ್ ಇಂಡಿಯಾ ಎಂಬುದು ಕನ್ನಡಿಗರಿಗೆ ಕೆಲಸ ಕೊಡುವುದಿಲ್ಲ ಎಂದು ಜಗ್ಗೇಶ್ ಕೆಲವೇ ದಿನಗಳ ಹಿಂದೆ ಹೇಳಿದ್ದರು.
‘ರಾಯರನಂಬಿ ಬದುಕುವ ನಾನು ಹೃದಯದಿಂದ ಮುಂದಿನ ಪೀಳಿಗೆ ಉದ್ಧಾರಕ್ಕೆ ಸತ್ಯ ನುಡಿದೆ! ಅರಿವಾಗದ ಬಹುತೇಕರು ನೆಗೆಟಿವ್ ತೆಗೆದುಕೊಂಡು, ಉತ್ತಮ ಮಾಹಿತಿ ಅಣಕ ಚರ್ಚೆಗೆ ಬಳಸಿಕೊಂಡು ತಮ್ಮ ಬೇಳೆ ಬೇಯಿಸಿಕೊಂಡರು. ಮುಂದೈತೆ ಕನ್ನಡಿಗರೆ ಊರಬ್ಬ. ಆಗ ಅಯ್ಯೋ ಜಗ್ಗೇಶ ಅಂದೇ ಹೇಳಿದ, ನಾವು ಅಣಕಿಸಿದೆವೆ ಎಂದು ಪಶ್ಚಾತಾಪ ಪಡುತ್ತೀರ! ಅನುಭವಿಸಿ ಕನ್ನಡಕ್ಕೆ ಚಟ್ಟ ತಯಾರು!’ ಎಂದಿದ್ದರು.
ಆದ್ರೆ ಇದೀಗ ಎಲ್ಲಾ ಭಾಷೆಯಲ್ಲೂ ತಮ್ಮ ಸಿನಿಮಾ ಹೆಸರನ್ನು ಹಾಕಿ ನಮ್ಮದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಎಂದಿರುವುದು ಕುತೂಹಲಕ್ಕೆ ಕಾರಣವಾಗಿದೆ. ತೋತಾಪುರಿ ಚಿತ್ರದಲ್ಲಿ ಅದಿತಿ ಪ್ರಭುದೇವ್, ಸುಮನ್ ರಂಗನಾಥ್ ಸೇರಿದಂತೆ ಹಲವು ಕಲಾವಿದರು ಬಣ್ಣ ಹಚ್ಚಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.